ಪುನೀತ್ ರಾಜಕುಮಾರ್ ಅವರು ಹಠಾತ್ ನಿಧನರಾಗಿರುವುದು ಎಲ್ಲರನ್ನು ಕಾಡುತ್ತಿದೆ. ಜೀವನ ಅಂದರೆ ಇಷ್ಟೇನಾ ಎಂಬ ತೊಳಲಾಟ ಎಲ್ಲರಲ್ಲೂ ಮನೆ ಮಾಡಿದೆ. ಪುನೀತ್ ರಾಜಕುಮಾರ್ ಅವರು ಅಲ್ಪಾಯುಷಿ ಎಂದು ರಾಜಕುಮಾರ್ ಅವರಿಗೆ ಮೊದಲೆ ಗೊತ್ತಿತ್ತಾ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಪುನೀತ್ ಅವರಿಗೆ ಅಪ್ಪು ಎಂದು ಹೆಸರಿಟ್ಟವರು ಯಾರು ಎಂಬುದನ್ನು ಈ ಲೇಖನದಲ್ಲಿ ನೋಡೋಣ

ಪುನೀತ್ ರಾಜಕುಮಾರ್ ಅವರು ಸತ್ತ ನಂತರ ಅವರ ಜಾತಕದಲ್ಲಿ ದೋಷವಿತ್ತಾ? ಕಂಟಕವಿತ್ತಾ? ಎಂಬ ಪ್ರಶ್ನೆಗಳು ಜನರಲ್ಲಿ ಮೂಡಿದೆ ಇದು ಸಹಜ. ಮೊದಲಿನಿಂದಲೂ ಯಾರಾದರೂ ಮಹಾನ್ ವ್ಯಕ್ತಿಗಳು ಅರೆ ವಯಸ್ಸಿನಲ್ಲಿ ಸತ್ತರೆ ಇಂತಹ ಚರ್ಚೆಗಳು ಸರ್ವೇಸಾಮಾನ್ಯವಾಗಿದೆ. ಪುನೀತ್ ರಾಜಕುಮಾರ್ ಅವರು ಹುಟ್ಟಿದಾಗ ಲೋಹಿತ್ ಎಂಬ ಹೆಸರನ್ನು ನಾಮಕರಣ ಮಾಡಲಾಗಿತ್ತು.

ನಂತರ ಡಾಕ್ಟರ್ ರಾಜಕುಮಾರ್ ಅವರು ಲೋಹಿತ್ ಎಂಬ ಹೆಸರಿನ ಬದಲಾಗಿ ಪುನೀತ್ ಎಂಬ ಹೆಸರನ್ನು ಇಟ್ಟರು. ರಾಜಕುಮಾರ್ ಅವರು ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಭಕ್ತರಾಗಿದ್ದರು ಆದ್ದರಿಂದ ಮೊದಲು ಹುಟ್ಟಿದ ಮಗನಿಗೆ ರಾಘವೇಂದ್ರ ಎಂದು ಹೆಸರಿಟ್ಟರು ಅವರೆ ರಾಘವೇಂದ್ರ ರಾಜಕುಮಾರ್. ಡಾಕ್ಟರ್ ರಾಜಕುಮಾರ್ ಅವರ ಮೊದಲ ಚಿತ್ರ ಬೇಡರಕಣ್ಣಪ್ಪ ಶಿವ ಭಕ್ತ ಪ್ರಧಾನವಾದ ಈ ಸಿನಿಮಾದಿಂದ ಡಾಕ್ಟರ್ ರಾಜಕುಮಾರ್ ಅವರು ಸಾಕಷ್ಟು ಕೀರ್ತಿ ಗಳಿಸಿದರು.

ಈ ಸಿನಿಮಾದಿಂದ ಚಿತ್ರರಂಗದಲ್ಲಿ ಡಾಕ್ಟರ್ ರಾಜಕುಮಾರ್ ಅವರು ಭದ್ರ ನೆಲೆಯನ್ನು ಪಡೆದರು ಈ ಕಾರಣದಿಂದಲೆ ಎರಡನೆ ಹುಟ್ಟಿದ ಮಗನಿಗೆ ಶಿವ ಎಂದು ಹೆಸರಿಟ್ಟರು ಅವರೆ ಶಿವರಾಜಕುಮಾರ್. ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿ ಸತ್ಯಹರಿಶ್ಚಂದ್ರನ ಮಗನ ಹೆಸರು ಲೋಹಿತಾಶ್ವ ರಾಜಕುಮಾರ್ ಅವರಿಗೆ ಸಿನಿಮಾದಿಂದ ಲೋಹಿತಾಶ್ವ ಎಂಬ ಹೆಸರು ಇಷ್ಟವಾಗಿತ್ತು ಆದ್ದರಿಂದ ಮೂರನೆ ಮಗನಿಗೆ ಲೋಹಿತ್ ಎಂದು ಹೆಸರಿಡುತ್ತಾರೆ.

ಲೋಹಿತ್ ಚಿಕ್ಕವಯಸ್ಸಿನಲ್ಲಿಯೆ ಅನೇಕ ಚಿತ್ರಗಳಲ್ಲಿ ನಟಿಸುತ್ತಾರೆ ಅಲ್ಲದೆ ಮನೆಯ ಅಚ್ಚುಮೆಚ್ಚಿನ ಮಗನಾಗಿದ್ದ. ರಾಜಕುಮಾರ್ ಅವರಿಗೆ ಬೇಕಾದವರು ಹಾಗೂ ಹಿರಿಯರು ಆಗಿದ್ದವರು ಒಬ್ಬರು ಲೋಹಿತ್ ಎಂಬ ಹೆಸರಿನ ಬಗ್ಗೆ ಆಕ್ಷೇಪ ಮಾಡಿದರು ಏಕೆಂದರೆ ಸತ್ಯಹರಿಶ್ಚಂದ್ರನ ಮಗನಾದ ಲೋಹಿತಾಶ್ವ ಅಲ್ಪಾಯುಷಿಯಾಗಿರುತ್ತಾನೆ. ಅಲ್ಪಾಯುಷಿಗಳ ಹೆಸರಾದ ಲೋಹಿತ್ ಎಂದು ಇಡುವುದು ಸರಿಯಲ್ಲ.

ನಂತರ ರಾಜಕುಮಾರ್ ಲೋಹಿತ್ ಎಂಬ ಹೆಸರನ್ನು ಬದಲಾಯಿಸಿ ಪುನೀತ್ ಎಂಬ ಹೆಸರನ್ನು ಇಡುತ್ತಾರೆ. ಪುನೀತ್ ರಾಜಕುಮಾರ್ ಅನೇಕ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿ ಚಿತ್ರರಂಗದಲ್ಲಿ ತಮ್ಮದೆ ಛಾಪು ಮೂಡಿಸಿದ್ದಾರೆ. ಲೋಹಿತ್ ಹೆಸರು ಪುನೀತ್ ಎಂದು ಬದಲಾದರು ಅವರ ಮನೆಯಲ್ಲಿ ಅವರಿಗೆ ಅಪ್ಪು ಎಂದೆ ಕರೆಯುತ್ತಿದ್ದರು.

ಪುನೀತ್ ರಾಜಕುಮಾರ್ ಅವರಿಗೆ ಮೊದಲ ಬಾರಿಗೆ ಅಪ್ಪು ಎಂದು ಕರೆದಿದ್ದು ರಾಜಕುಮಾರ್ ಅವರ ತಾಯಿ ಲಕ್ಷ್ಮಮ್ಮ ಅಂದರೆ ಪುನೀತ್ ರಾಜಕುಮಾರ್ ಅವರ ಅಜ್ಜಿ. ಲಕ್ಷ್ಮಮ್ಮ ಪ್ರೀತಿಯಿಂದ ಕರೆಯುತ್ತಿದ್ದ ಅಪ್ಪು ಎಂಬ ಹೆಸರು ಮನೆಮಂದಿಗೆಲ್ಲ ಅಚ್ಚುಮೆಚ್ಚಾಗಿತ್ತು. ನಂತರ ಪುನೀತ್ ರಾಜಕುಮಾರ್ ಅವರು ದೊಡ್ಡವರಾದರು ಅವರಿಗೆ ಅಪ್ಪು ಎಂಬ ಹೆಸರು ಮುಂದುವರೆದಿತ್ತು ಅಲ್ಲದೆ ಅವರ ಮೊದಲ ಸಿನಿಮಾದ ಹೆಸರು ಕೂಡ ಅಪ್ಪು. ಡಾಕ್ಟರ್ ರಾಜಕುಮಾರ್ ಅವರು ಲೋಹಿತ್ ಎಂಬ ಹೆಸರಿನಂತೆ ತಮ್ಮ ಮಗ ಅಲ್ಪಾಯುಷಿ ಆಗಬಾರದೆಂದು ಲೋಹಿತ್ ಹೆಸರನ್ನು ಬದಲಾಯಿಸಿ ಪುನೀತ್ ಎಂದು ಹೆಸರಿಟ್ಟರು ಆದರೂ ಪುನೀತ್ ಅವರು ತಮ್ಮ 46ನೇ ವರ್ಷಕ್ಕೆ ಸಾವನ್ನಪ್ಪಿದ್ದು ದುರ್ಘಟನೆಯೆ ಸರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!