ಪುನರ್ಜನ್ಮವು ಅತ್ಮವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವ ಧಾರ್ಮಿಕ ಅಥವಾ ತತ್ವಶಾಸ್ತ್ರೀಯ ಸಿದ್ಧಾಂತವಾಗಿದೆ. ಹಿಂದೂ ಧರ್ಮದ ಪ್ರಕಾರ ಹುಟ್ಟು-ಸಾವುಗಳ ಚಕ್ರದ ನಡುವಿನ ಆತ್ಮದ ಪಯಣಕ್ಕೆ ಪುನರ್ಜನ್ಮವೆನ್ನಲಾಗುತ್ತದೆ. ಇದು ಹಿಂದೂ ಧರ್ಮದ ತಿರುಳು ಕೂಡಾ ಆಗಿದೆ. ಇದು ಪ್ರಪಂಚದ ಅನೇಕ ಧಾರ್ಮಿಕ ಸಿದ್ದಾಂತಗಳಲ್ಲಿ ಹಾಗೆಯೇ ಸೈಬೀರಿಯಾ, ಪಶ್ಚಿಮ ಆಫ್ರಿಕಾ, ಉತ್ತರ ಅಮೇರಿಕ ಹಾಗೂ ಆಸ್ಟ್ರೇಲಿಯಗಳಲ್ಲಿರುವ ಹಲವಾರು ಬುಡಕಟ್ಟು ಜನರಲ್ಲಿ ಸಾಮಾನ್ಯ ನಂಬಿಕೆಯಾಗಿದೆ. ಆದ್ದರಿಂದ ನಾವು ಇಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ಸೃಷ್ಟಿಯಲ್ಲಿ ಕೋಟ್ಯಾಂತರ ಸೂಕ್ಷ್ಮ ಜೀವಿಗಳು ಸೆಕೆಂಡಿನಲ್ಲಿ ಜನಿಸಿ ಮರಣಿಸುತ್ತಿರುತ್ತದೆ. ಮರಣ ವೆಂದರೆ ಮೊದಲು ಹೃದಯ ಬಡಿತವು ನಿಲ್ಲುತ್ತದೆ. ನಂತರ ಶರೀರದ ಚಲನೆಯೂ ನಿಲ್ಲುತ್ತದೆ. ಬದುಕಿದ್ದಾಗ 98.6% ಶಾಖವಿದ್ದಂತಹ ಶರೀರ ಮರಣಿಸಿದ ನಂತರ 0.8% ಗೆ ಇಳಿಯುತ್ತದೆ. ಇವೆಲ್ಲವೂ ಮನುಷ್ಯನ ಮರಣದ ನಂತರ ದೇಹಕ್ಕಾಗುವ ಪರಿಸ್ಥಿತಿಯಾಗಿದೆ. ಆದರೆ ಮನುಷ್ಯನ ಜೀವಂತಿಕೆಯನ್ನು ನೀಡುವಂತಹ ಚೈತನ್ಯ, ಶಕ್ತಿ, ಜೀವ, ಆತ್ಮ ಮನುಷ್ಯ ಸತ್ತ ಮೇಲೆ ಏನಾಗುತ್ತದೆ ಎಂಬುದರ ಬಗ್ಗೆ ಹಲವಾರು ಪರಿಶೋಧನೆಗಳು ನಡೆದಿವೆ.
ಕೆನಡಾ ದೇಶದ ಸೈಕಿಯಾಟ್ರಿಸ್ಟ್ ಒಬ್ಬರ ಪರಿಶೋಧನೆಯ ಪ್ರಕಾರ ಆತ್ಮಕ್ಕೆ ಸಾವಿಲ್ಲ ಎಂದು ಹೇಳುತ್ತಾರೆ. ಪುನರ್ಜನ್ಮದ ಬಗ್ಗೆ ಶಾಸ್ತ್ರಜ್ಞರು,ತತ್ವಜ್ಞಾನಿಗಳು, ಹೇಳುವ ಪ್ರಕಾರ ಪ್ರತಿಜೀವಿಗೂ ಆತ್ಮ ಇರುತ್ತದೆ ಮತ್ತು ಆತ್ಮಕ್ಕೆ ಸಾವಿಲ್ಲ ಎಂದು ಹೇಳುತ್ತಾರೆ. ಐಸಾಕ್ ನ್ಯೂಟನ್ ಎಂಬ ವಿಜ್ಞಾನಿಯು ಸಹ ಶಕ್ತಿ ಮತ್ತು ಆತ್ಮಕ್ಕೆ ಜನನ ಮರಣಗಳಿಲ್ಲ ಎಂದು ಹೇಳಿದ್ದಾರೆ. ಜನಗಳಿಗೆ ಪುನರ್ಜನ್ಮದ ಬಗ್ಗೆ ಜ್ಞಾನ ನೀಡುವಂತಹ ಗ್ರಂಥವೆಂದರೆ ಭಗವದ್ಗೀತೆ ಯಾಗಿದೆ. ಭಗವದ್ಗೀತೆ ಎರಡನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಹೇಳುವ ಪ್ರಕಾರ ಈ ಶರೀರದಿಂದ ಮೊದಲು ಆತ್ಮ ಜನಿಸುತ್ತದೆ.
ಆತ್ಮ ಮೊದಲು ಬಾಲ್ಯದಿಂದ ಯೌವ್ವನಕ್ಕೆ, ಯೌವನದಿಂದ ವೃದ್ಧಾಪ್ಯಕ್ಕೆ ಯಾವ ರೀತಿ ಮುಂದುವರೆಯುತ್ತದೆಯೋ ಅದೇ ರೀತಿ ವ್ಯಕ್ತಿಯ ಮರಣದ ನಂತರ ಆತನ ಆತ್ಮವು ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ. ಆತ್ಮದ ಬಗ್ಗೆ ಜ್ಞಾನ ಇರುವವನು ಎಂತಹ ಬದಲಾವಣೆ ಆದರೂ ದುಃಖಿಸುವುದಿಲ್ಲ ಎಂದುಹೇಳುತ್ತದೆ. ಅದೇ ರೀತಿ ಎರಡನೇ ಅಧ್ಯಾಯದ 27ನೇ ಶ್ಲೋಕದಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಸಾವು ತಪ್ಪಿದ್ದಲ್ಲ. ಸತ್ತವನಿಗೆ ಪುನರ್ಜನ್ಮ ತಪ್ಪುವುದಿಲ್ಲ ಎಂದು ವಿವರಿಸಲಾಗಿದೆ. ನಮ್ಮ ಆತ್ಮ 84 ಜನ್ಮ ಪಡೆದ ಬಳಿಕ ಮನುಷ್ಯ ಜನ್ಮವನ್ನು ಪಡೆಯುತ್ತದೆ. ಈ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡಿದರೆ ಮೋಕ್ಷವನ್ನು ಪಡೆಯಬಹುದು. ಹಾಗಾಗಿ ಮಾನವ ಜನ್ಮ ಬಲು ದೊಡ್ಡದು ಎಂದು ಹಿರಿಯರು ಹೇಳುತ್ತಾರೆ.