ನಮ್ಮ ಹಿಂದೂ ಧರ್ಮದಲ್ಲಿ ತೆಂಗಿನಕಾಯಿಗೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗಿದೆ. ತೆಂಗಿನಕಾಯಿಯನ್ನು ಕೇವಲ ಅಡುಗೆಗೆ ಬಳಸುವುದಲ್ಲದೆ ಧಾರ್ಮಿಕ ಕಾರ್ಯಗಳಲ್ಲಿಯೂ ಹೆಚ್ಚಾಗಿ ಬಳಸಲಾಗುತ್ತದೆ. ತೆಂಗಿನಕಾಯಿಗೆ ಯಾಕೆ ಅಷ್ಟು ಮಹತ್ವವನ್ನು ನೀಡುತ್ತಾರೆ ತೆಂಗಿನಕಾಯಿಯನ್ನು ಪೂಜೆಯಲ್ಲಿ ಯಾಕೆ ಬಳಸುತ್ತಾರೆ ಮತ್ತು ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ಯಾವ ರೀತಿಯಾಗಿ ಒಳ್ಳೆಯದಾಗುತ್ತದೆ. ತೆಂಗಿನಕಾಯಿಯನ್ನು ಯಾಕೆ ಶ್ರೀಫಲ ಎಂದು ಕರೆಯುತ್ತಾರೆ ಎಂಬುದರ ಕುರಿತಾದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ತೆಂಗಿನಕಾಯಿ ಇಲ್ಲದೆ ಯಾವುದೇ ಒಂದು ಪೂಜೆಯು ಪೂರ್ಣ ವಾಗುವುದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ತೆಂಗಿನಕಾಯಿಯನ್ನು ದೇವರ ಸ್ವರೂಪ ಎಂದು ಹೇಳಲಾಗಿದೆ. ಜೊತೆಗೆ ನಾವು ಪೂಜೆಯನ್ನು ಮಾಡುವ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಅರ್ಪಿಸಲೇಬೇಕು ತೆಂಗಿನಕಾಯಿಯನ್ನು ಅರ್ಪಿಸದಿದ್ದರೆ ಅಂತಹ ಪೂಜೆಯನ್ನು ಅಪೂರ್ಣ ಎಂದು ಹೇಳಲಾಗುತ್ತದೆ.
ತೆಂಗಿನಕಾಯಿ ಇಲ್ಲದೆ ಯಾವುದೇ ಶುಭಕಾರ್ಯ ಅಥವಾ ಪೂಜೆಗಳು ನಡೆಯುವುದಿಲ್ಲ. ಆ ಕಾರಣದಿಂದಾಗಿಯೇ ತೆಂಗಿನಕಾಯಿಯನ್ನು ಶ್ರೀಫಲ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ ತೆಂಗಿನಕಾಯಿಯನ್ನು ಅತ್ಯಂತ ಪವಿತ್ರವಾದ ಹಣ್ಣು ಎಂದು ಪರಿಗಣಿಸಲಾಗಿದೆ. ಯಾಕೆಂದರೆ ಬ್ರಹ್ಮ ವಿಷ್ಣು ಮಹೇಶ್ವರರು ಇದರಲ್ಲಿ ವಾಸವಿದ್ದಾರೆ ಎಂದು ಹೇಳಲಾಗುತ್ತದೆ.
ದೇವರಿಗೆ ತೆಂಗಿನಕಾಯಿಯನ್ನು ಅರ್ಪಿಸುವುದರಿಂದ ಭಕ್ತರ ಎಲ್ಲಾ ನೋವುಗಳು ದುಃಖಗಳು ಪರಿಹಾರ ಆಗುತ್ತದೆ ಎಂದು ಸಹ ನಂಬಲಾಗಿದೆ. ಶುಭ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಒಡೆಯುವುದರಿಂದ ತೆಂಗಿನಕಾಯಿಯನ್ನು ಮುಖ್ಯವಾಗಿ ಪ್ರಸಾದದಲ್ಲಿ ಬಳಸಲಾಗುತ್ತದೆ. ಇದಲ್ಲದೆ ಹಲವು ದಿನಗಳ ಕಾಲ ನಡೆಯುವ ಉಪವಾಸ ಸಂಕಲ್ಪವನ್ನು ಕೂಡ ಭಗವಂತನಿಗೆ ತೆಂಗಿನಕಾಯಿಯನ್ನು ಅರ್ಪಿಸುವ ಮೂಲಕ ಮಾಡಲಾಗುತ್ತದೆ.
ಇನ್ನು ಪೂಜೆಯಲ್ಲಿ ತೆಂಗಿನಕಾಯಿಯನ್ನು ಒಡೆಯುವುದರ ಅರ್ಥ ಏನು ಎಂಬುದನ್ನು ನೋಡುವುದಾದರೆ ಯಾರು ತೆಂಗಿನಕಾಯಿಯನ್ನು ಓಡಿಸುತ್ತಿದ್ದಾರೆ ಆ ವ್ಯಕ್ತಿ ದೇವರ ಪಾದದಲ್ಲಿ ತನ್ನನ್ನು ಅರ್ಪಿಸಿಕೊಂಡಿದ್ದಾನೆ ಎಂದು ಅರ್ಥ. ಜೊತೆಗೆ ಹಿಂದಿನ ಕಾಲದಲ್ಲಿ ನಡೆದುಕೊಂಡುಬಂದ ಬಲಿ ಕೊಡುವ ಸಂಪ್ರದಾಯವನ್ನು ಮುರಿದು ಹಾಕುವ ಸಲುವಾಗಿ ತೆಂಗಿನಕಾಯಿಯನ್ನು ಒಡೆಯಲಾಗುತ್ತದೆ. ಇದು ದೇವರಿಗೆ ಕೊಡತಕ್ಕಂತಹ ಬಲಿ ಅಥವಾ ನೈವೇದ್ಯ ಎಂದು ಹೇಳಲಾಗುತ್ತದೆ.
ತೆಂಗಿನ ಮರವನ್ನು ಯಾಕೆ ಮಂಗಳಕರ ಎಂದು ಹೇಳಲಾಗುತ್ತದೆ ಎಂದರೆ ಇದರಲ್ಲಿ ಭಗವಾನ್ ವಿಷ್ಣುವು ವಾಸವಿದ್ದಾನೆ ಎಂದು ನಂಬಲಾಗಿದೆ. ಭೂಮಿಯ ಮೇಲೆ ವಿಷ್ಣುವು ಅವತರಿಸಿದಾಗ ತನ್ನೊಂದಿಗೆ ಲಕ್ಷ್ಮಿದೇವಿಯನ್ನು ತೆಂಗಿನಮರವನ್ನು ಮತ್ತು ಕಾಮಧೇನುವನ್ನು ಕರೆತಂದಿದ್ದನಂತೆ. ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ ಅಲ್ಲದೆ ತೆಂಗಿನಮರವನ್ನು ಲಕ್ಷ್ಮೀದೇವಿಯ ಸ್ವರೂಪ ಎಂದು ತಿಳಿಯಲಾಗಿದೆ.
ಆದ್ದರಿಂದ ಇದು ಸಂಪತ್ತು ಮತ್ತು ಸಮೃದ್ಧಿಯ ನೆಲೆಯಾಗಿದೆ. ಅದರಿಂದ ತೆಂಗಿನಕಾಯಿಯು ಸಹ ಬಹಳಷ್ಟು ಮಹತ್ವವನ್ನು ಹೊಂದಿರುತ್ತದೆ. ಈ ರೀತಿಯಾಗಿ ತೆಂಗಿನಕಾಯಿ ಮತ್ತು ತೆಂಗಿನಮರ ತನ್ನದೇ ಆದ ಶ್ರೇಷ್ಠತೆಯನ್ನು ಹೊಂದಿದ್ದು ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರಿಗೂ ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430