property sell new rules in Karnataka: ಆಸ್ತಿಗಳಲ್ಲಿ ಎರಡು ಪ್ರಕಾರ ಒಂದು ಪಿತ್ರಾರ್ಜಿತ ಆಸ್ತಿ ಇನ್ನೊಂದು ಸ್ವಯಾರ್ಜಿತ ಆಸ್ತಿ. ಪಿತ್ರಾರ್ಜಿತ ಆಸ್ತಿ ಅಂದರೆ ಹೆಸರೇ ಹೇಳುವಂತೆ, ನಮ್ಮ ಪಿತೃಗಳಿಂದ ಅಂದರೆ ನಮ್ಮ ಪೂರ್ವಜರಿಂದ ನಮ್ಮ ಅಜ್ಜನಿಂದ ನಮ್ಮ ತಂದೆಗೆ ನಮ್ಮ ತಂದೆಯಿಂದ ನಮಗೆ ನಮ್ಮಿಂದ ನಮ್ಮ ಮಕ್ಕಳಿಗೆ ಹಂಚಿಕೆಯಾಗುವ ಆಸ್ತಿಯನ್ನು ಪಿತ್ರಾರ್ಜಿತ ಎಂದು ಕರೆಯುತ್ತಾರೆ ಎಲ್ಲರಿಗೂ ಕೂಡ ಪಿತ್ರಾರ್ಜಿತ ಆಸ್ತಿಯ ಬಗ್ಗೆ ಮಾಹಿತಿ ಇದ್ದೇ ಇರುತ್ತದೆ. ಈ ಪಿತ್ರಾರ್ಜಿತ ಆಸ್ತಿಯು ತಂದೆಯ ಮರಣದ ನಂತರ ಅಥವಾ ಮರಣದ ಮೊದಲು ಮಕ್ಕಳಿಗೆ ಹಂಚಿಕೆಯಾಗುತ್ತದೆ.
ಎಲ್ಲ ಮಕ್ಕಳಿಗೂ ಸಮನಾಗಿ ಹಂಚಿಕೆಯಾಗುತ್ತದೆ. ಮೊದಲು ಹೆಣ್ಣು ಮಕ್ಕಳಿಗೆ ಈ ಆಸ್ತಿಯಲ್ಲಿ ಹಕ್ಕಿರಲಿಲ್ಲ. 2005 ರಲ್ಲಿ ತಿದ್ದುಪಡಿ ಆದ ಹಿಂದೂ ಕಾಯ್ದೆಯ ಪ್ರಕಾರ ಗಂಡು ಮಕ್ಕಳಷ್ಟೇ ಅಲ್ಲದೆ ಹೆಣ್ಣು ಮಕ್ಕಳು ಕೂಡ ಆಸ್ತಿಯಲ್ಲಿ ಸಮಾನ ಹಕ್ಕುದಾರರಾಗಿದ್ದಾರೆ. ಆದ್ದರಿಂದ ಆಸ್ತಿಯ ಕುರಿತು ಮಾತ್ರವಲ್ಲದೆ ಆಸ್ತಿಯ ತೆರಿಗೆಯ ಬಗ್ಗೂ ಕೂಡ ತಿಳಿದುಕೊಳ್ಳಲೇ ಬೇಕಾಗಿದೆ. ಆಸ್ತಿಯನ್ನು ಪಾಲು ಮಾಡುವ ಸಮಯದಲ್ಲಿ ಅಥವಾ ಆಸ್ತಿಯನ್ನು ತೆಗೆದುಕೊಳ್ಳುವ ಸಮಯದಲ್ಲಿ ಯಾವ ರೀತಿಯ ತೆರಿಗೆ ಬೀಳುತ್ತದೆ ಅಂತ ನಾವು ತಿಳಿದುಕೊಳ್ಳೋಣ.
property sell new rules in Karnataka
ನಾವು ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳುವಾಗ ನಮ್ಮ ಹೆಸರಿಗೆ ವರ್ಗಾಯಿಸುವಾಗ ಯಾವುದೇ ರೀತಿಯ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ ನಾವು ಅದೇ ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡುವಾಗ ತೆರಿಗೆಯನ್ನ ಭರಿಸಬೇಕು ಎನ್ನುವಂತದ್ದು ನೆನಪಿಡುವ ಅಂಶವಾಗಿದೆ. ಹಾಗಾದ್ರೆ ಎಷ್ಟು ತೆರಿಗೆಯನ್ನು ನಾವು ಭರಿಸಬೇಕಾಗಿ ಬರಬಹುದು? ಎಂದರೆ ನಾವು ಎಷ್ಟು ವರ್ಷ ಆಸ್ತಿಯ ಒಡೆಯರಾಗಿರುತ್ತೇವೆ ಅನ್ನುವುದು ಇಲ್ಲಿ ಮುಖ್ಯವಾಗುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ಎಷ್ಟು ವರ್ಷ ಆಸ್ತಿಯು ನಮ್ಮ ಅಧಿಕಾರದಲ್ಲಿ ಇರುತ್ತದೆಯೋ ತೆರಿಗೆಯು ಅದರ ಮೇಲೆ ಅವಲಂಬಿತವಾಗಿರುತ್ತದೆ.
ಒಂದು ವೇಳೆ ನಾವು ನಮ್ಮ ತಾತನಿಂದಲೂ ನಮ್ಮ ತಂದೆಯಿಂದನು ಬಂದ ಆಸ್ತಿಯನ್ನ ಎರಡು ವರ್ಷದ ಒಳಗಾಗಿ ಮಾಡಿದರೆ ನಮಗೆ ಅಲ್ಪಾವಧಿಯ ತೆರಿಗೆ ವಿಧಿಸಲಾಗುತ್ತದೆ. ಒಂದು ವೇಳೆ ಎರಡಕ್ಕಿಂತ ಹೆಚ್ಚು ವರ್ಷ ಐದಕ್ಕಿಂತ ಹೆಚ್ಚು ವರ್ಷ ನಾವು ಆ ಆಸ್ತಿಯನ್ನು ಇಟ್ಟುಕೊಂಡು ಮಾರಿದರೆ ನಮಗೆ ದೀರ್ಘಾವಧಿಯ ತೆರಿಗೆಯನ್ನು ನಾವು ಬರಿಸಬೇಕಾಗಿ ಬರಬಹುದು. ಸದ್ಯಕ್ಕೆ ನಮ್ಮ ದೇಶದಲ್ಲಿ ನಾವು ಎರಡು ವರ್ಷಕ್ಕಿಂತ ಮೇಲ್ಪಟ್ಟ ಅಧೀನದಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿದರೆ 20% ತೆರಿಗೆ ಅನ್ನು ನಾವು ಭರಿಸಬೇಕು. ಈ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ.