ಯಾವುದೇ ವ್ಯಕ್ತಿ ಆಸ್ತಿ ಖರೀದಿ ಮಾಡಬೇಕು ಎಂದರೆ ಅಥವಾ ತಮ್ಮ ಆಸ್ತಿಯನ್ನು ಮಾರಾಟ ಮಾಡಬೇಕು ಎಂದರೆ ಸರ್ಕಾರ ಜಾರಿಗೆ ತಂದುರುವ ಕಾನೂನಿನ ನಿಯಮಗಳನ್ನು ತಿಳಿದುಕೊಂಡಿರಬೇಕು ಯಾವುದೇ ಸ್ಥಿರಾಸ್ತಿ ಅಥವಾ ಚರಾಸ್ತಿಯನ್ನು ಖರೀದಿ ಮಾಡಲು ಸರ್ಕಾರವು ಅವುಗಳಿಗೆ ವಿವಿಧ ನಿಯಮಗಳನ್ನು ಜಾರಿಗೆ ತಂದಿದೆ. ಆಸ್ತಿಯನ್ನು ಮಾರಾಟ ಮಾಡುವವರು ಹಾಗೂ ಖರೀದಿ ಮಾಡುವವರು ಎಲ್ಲರೂ ಕೂಡ ಈ ಬಗ್ಗೆ ತಿಳಿದುಕೊಂಡಿರಬೇಕು.

ಸರ್ಕಾರದ ನಿಯಮಗಳನ್ನು ಪಾಲಿಸದೇ ಹೋದರೆ ನೀವೇ ತೊಂದರೆಗೆ ಸಿಲುಕಿಕೊಳ್ಳಬಹುದು. ಹಾಗಾಗಿ ಸರ್ಕಾರ ಜಾರಿಗೆ ತಂದಿರುವ ಈ ಕೆಲವು ನಿಯಮಗಳನ್ನು ತಿಳಿದುಕೊಳ್ಳಿ. ಅನುಸರಿಸದೇ ಹೋದರೆ ನಿಮಗೆ ನಷ್ಟ ಉಂಟಾಗಬಹುದು. ಹಾಗಿದ್ದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಾಗೆ ಯಾವೆಲ್ಲಾ ಮುಖ್ಯ ನಿಯಮಗಳಿವೆ? ಏನೆಲ್ಲಾ ನಿಯಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸುತ್ತೇವೆ ನೋಡಿ..

ಮುಖ್ಯವಾದ ನಿಯಮಗಳಲ್ಲಿ ಒಂದು, ನೀವು ಯಾವುದೇ ಮನೆ ಅಥವಾ ಜಮೀನು ಖರೀದಿ ಮಾಡಬೇಕಿದ್ದರೆ ಅಥವಾ ಮಾರಾಟ ಮಾಡಬೇಕಿದ್ದರೆ 19,999 ರೂಪಾಯಿಗಿಂತ ಹೆಚ್ಚು ಹಣದ ನಗದು ವಹಿವಾಟು ನಡೆಸುವ ಹಾಗಿಲ್ಲ. 20 ಸಾವಿರಕ್ಕಿಂತ ಹೆಚ್ಚು ಹಣದ ವಹಿವಾಟು ಎಂದರೆ ಅದನ್ನು ಆನ್ಲೈನ್ ಮೂಲಕ ಮಾಡಬೇಕು, ಅಥವಾ ಬ್ಯಾಂಕ್ ಗೆ ಹೋಗಿ ಚೆಕ್ ಮೂಲಕ ವ್ಯವಹಾರ ಮಾಡಬಹುದು.

ಆದಾಯ ತೆರಿಗೆ ಕಾಯ್ದೆಯ 269SS, 269T, 270T, 271D, 271E ಸೆಕ್ಷನ್ ಗಳನ್ನು 2015ರಲ್ಲಿ ಬದಲಾವಣೆ ಮಾಡಲಾಗಿದೆ. ಈ ಹೊಸ ನಿಯಮದ ಅನುಸಾರ ಆಸ್ತಿ ಖರೀದಿ ಅಥವಾ ಮಾರಾಟದ ವಿಚಾರದಲ್ಲಿ ನೀವು ಎಷ್ಟೇ ಹಣಕ್ಕೆ ಮಾರಾಟ ಮಾಡಿದರು ಸಹ, 20 ಸಾವಿರಕ್ಕಿಂತ ಹೆಚ್ಚು ನಗದು ವಹಿವಾಟು ಮಾಡುವ ಹಾಗಿಲ್ಲ. ಒಂದು ವೇಳೆ ನಿಯಮವನ್ನು ಮೀರಿ ನಡೆದರೆ, ನಿಮಗೆ ತೊಂದರೆ, ಈ ರೀತಿಯ ವ್ಯವಹಾರದ ಮೇಲೆ ಆದಾಯ ತೆರಿಗೆ ಇಲಾಖೆ ವಿಶೇಷ ಗಮನ ಕೊಡುತ್ತದೆ.

20 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ಹಣವನ್ನು ವಹಿವಾಟಿನ ಮೂಲಕ ನಡೆಸಿದರೆ, ನೀವು ದೊಡ್ಡ ಪ್ರಮಾಣದ ದಂಡ ಕಟ್ಟಬೇಕಾಗಿ ಬರಬಹುದು. ರಾಜ್ಯದಲ್ಲಿ ಅಕ್ರಮ ಹಣದ ವಹಿವಾಟು ನಡೆಯಬಾರದು ಎಂದು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಈ ನಿಯಮಗಳು ಇರುವ ಕಾರಣ, ಆಸ್ತಿ ಖರೀದಿ ಮಾಡುವಾಗ, ಮಾರಾಟ ಮಾಡುವಾಗ ಎರಡು ಬಾರಿ ಯೋಚಿಸಿ, ಯಾವುದೇ ನಿಯಮದ ಉಲ್ಲಂಘನೆ ಆಗದ ಹಾಗೆ, ತೊಂದರೆ ಆಗದ ಹಾಗೆ ಆಸ್ತಿ ಖರೀರಿ, ಮಾರಾಟ ಕೆಲಸಗಳನ್ನು ಮಾಡಿಕೊಳ್ಳಿ. ರಿಜಿಸ್ಟ್ರೇಷನ್ ಬಗ್ಗೆ ಸರ್ಕಾರವು ಯಾವೆಲ್ಲಾ ನಿಯಮಗಳನ್ನು ಜಾರಿಗೆ ತಂದಿದೆಯೋ ಅದೆಲ್ಲವನ್ನು ಕೂಡ ತಿಳಿದುಕೊಂಡು, ನಂತರ ಯಾವುದೇ ವ್ಯವಹಾರ ಇದ್ದರೂ ಮಾಡಿ, ಆಗ ನಿಮಗೆ ಒಳ್ಳೆಯದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!