ಕೊರೋನ ಮಹಾಮಾರಿಯಿಂದ ಜನರು ತತ್ತರಿಸಿದ್ದಾರೆ. ಶಾಲೆಗಳು ಈದೀಗ ಮೊದಲಿನಂತೆ ತೆರೆದಿದೆ ಆದರೆ ಕೊರೋನ ರೋಗದಿಂದ ಬಹಳಷ್ಟು ಜನರಿಗೆ ಮಕ್ಕಳ ಫೀಸ್ ತುಂಬಲು ಕಷ್ಟವಾಗುತ್ತದೆ. ಆದ್ದರಿಂದ ಖಾಸಗಿ ಶಾಲೆಗಳಲ್ಲಿ ಶುಲ್ಕ ಕಡತ ಮಾಡಬೇಕೆಂಬ ವಾದ ಕೇಳಿಬರುತ್ತಿದ್ದು ಅದರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಖಾಸಗಿ ಶಾಲೆಗಳು ಮತ್ತು ಪೋಷಕರ ನಡುವೆ ಶಾಲಾ ಶುಲ್ಕ ಕಡಿತ ಸಂಬಂಧ ನಡೆಯುತ್ತಿರುವ ವಾದ- ವಿವಾದಗಳಿಗೆ ಶಿಕ್ಷಣ ಇಲಾಖೆಯ ಮಟ್ಟಕ್ಕೆ ತೆರೆ ಎಳೆಯುವ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿಲ್ಲ ಆದ್ದರಿಂದ ಎರಡು ಪಕ್ಷದವರ ಅಭಿಪ್ರಾಯ ಆಧರಿಸಿ ಎಷ್ಟು ಪ್ರಮಾಣದ ಶುಲ್ಕ ಕಡಿತ ಮಾಡಬಹುದು ಎಂದು ಶಿಕ್ಷಣ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಲು ತೀರ್ಮಾನಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಬಾರಿ ರಾಜ್ಯಾದ್ಯಂತ ಎಲ್ಲಾ ಖಾಸಗಿ ಶಾಲೆಗಳಲ್ಲಿ ಶೇ 30-35ರಷ್ಟು ಶುಲ್ಕ ಕಡಿತ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆಯಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. ಶಾಲಾ ಶುಲ್ಕ ಕುರಿತು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ನಡುವೆ ಸಹಮತ ಮೂಡಿಸಲು ಶಿಕ್ಷಣ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ.
ಪೋಷಕ ಸಂಘಟನೆಗಳು ಶುಲ್ಕ ಕಡಿತ ಮಾಡಬೇಕೆಂದು ಆಗ್ರಹ ಪಡಿಸಿದರು, ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳಿಂದಲೂ ಸಹಮತ ವ್ಯಕ್ತವಾದರೂ ಪ್ರಮಾಣ ಎಷ್ಟಿರಬೇಕು ಎಂಬ ಬಗ್ಗೆ ಒಮ್ಮತ ಮೂಡದೆ ಸುಮಾರು ಎರಡೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಪೋಷಕರ ಸಂಘಟನೆಗಳು ಕೇಳುತ್ತಿರುವ ಪ್ರಮಾಣದಲ್ಲಿ ಶುಲ್ಕ ಕಡಿತ ಸಾಧ್ಯವಿಲ್ಲ ಎಂದು ಖಾಸಗಿ ಶಾಲೆಗಳು ಸ್ಪಷ್ಟವಾಗಿ ಹೇಳಿದವು. ಕೋವಿಡ್ ಹಿನ್ನೆಲೆಯ ಕಾರಣದಿಂದ ಈ ಬಾರಿ ಬೋಧನಾ ಶುಲ್ಕ ಹೊರತುಪಡಿಸಿ ಬೇರೆ ಯಾವುದೇ ಶುಲ್ಕವನ್ನು ಸಂಗ್ರಹಿಸಬಾರದು ಎಂದು ಪೋಷಕರ ಸಂಘಟನೆಗಳು ವಾದಿಸಿದವು. ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳ ಸಮನ್ವಯ ಸಮಿತಿಯು ಈ ವಾದವನ್ನು ಸಭೆಯ ಮುಂದಿಟ್ಟಿತು. ಕರ್ನಾಟಕ ಖಾಸಗಿ ಶಾಲಾ ಪೋಷಕರ ಸಂಘಟನೆಗಳು ಸಮನ್ವಯ ಸಮಿತಿಯ ವಾದದ ಪ್ರಕಾರ ವಿದ್ಯಾರ್ಥಿಗಳ ಸಂಖ್ಯೆಯ ಅನುಗುಣವಾಗಿ ಬೋಧನಾ ಶುಲ್ಕ ಸಂಗ್ರಹಿಸಬೇಕು ಅಂದರೆ ಗರಿಷ್ಠ 250 ಹಾಗೂ ಅದಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಶೇ 100ರಷ್ಟು ಬೋಧನಾ ಶುಲ್ಕ ಸಂಗ್ರಹಿಸಬಹುದು.
251ರಿಂದ 500 ಮಕ್ಕಳಿರುವ ಶಾಲೆಗಳು ಶೇ 75ರಷ್ಟು, 501ರಿಂದ 1,000 ಮಕ್ಕಳಿರುವ ಶಾಲೆಗಳು ಶೇ 50ರಷ್ಟು ಮತ್ತು 1,000 ಕ್ಕಿಂತ ಹೆಚ್ಚು ಮಕ್ಕಳಿರುವ ಶಾಲೆಗಳು ಶೇ 25ರಷ್ಟು ಶುಲ್ಕವನ್ನು ಮಾತ್ರ ಪಡೆಯಬೇಕು ಆದರೆ ಈ ವಾದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಖಾಸಗಿ ಶಾಲಾ ಸಂಘಟನೆಗಳ ಪ್ರತಿನಿಧಿಗಳು ಒಪ್ಪಲಿಲ್ಲ, ಯಾವ ರೀತಿ ಶುಲ್ಕ ಕಡಿತ ಮಾಡಬೇಕೆಂದು ತಮ್ಮದೇ ಆದ ಫಾರ್ಮುಲಾಗಳನ್ನು ಸಭೆಯಲ್ಲಿ ಮಂಡಿಸಿ ಶೇ 30 ಶುಲ್ಕ ಕಡಿತಕ್ಕೆ ಸಿದ್ಧವಿದೆ ಎಂದು ತಿಳಿಸಲಾಯಿತು. ಪ್ರಮುಖವಾಗಿ ಕರ್ನಾಟಕ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದವರು ಶಾಲೆಗಳನ್ನು ಯಾವುದೇ ರೀತಿಯಲ್ಲಿ ವರ್ಗ ಮಾಡದೆ ಎಲ್ಲ ಶಾಲೆಗಳ ಶುಲ್ಕದಲ್ಲೂ ಏಕರೂಪವಾಗಿ ಶೇ 20- 25ರಷ್ಟುಶುಲ್ಕ ಕಡಿತಗೊಳಿಸಬೇಕೆಂದು ಮನವಿ ಮಾಡಿದರು. ಕರ್ನಾಟಕ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಪ್ರತಿನಿಧಿಗಳು ನಾವು ಶೇ 30ರಷ್ಟು ಶುಲ್ಕ ಕಡಿತಕ್ಕೆ ಸಿದ್ಧರಿರುವುದಾಗಿ ಹೇಳಿದರು.
ಮಾನ್ಯತೆ ಪಡೆದ ಖಾಸಗಿ ಅನುದಾನರಹಿತ ಶಾಲೆಗಳ ಸಂಘದವರ ವಾರ್ಷಿಕ ಪ್ರತಿ ಮಗುವಿಗೆ 15,000ಕ್ಕಿಂತ ಕಡಿಮೆ ಶುಲ್ಕ ಪಡೆಯುವ ಶಾಲೆಗಳಿಗೆ ಶುಲ್ಕ ಕಡಿತ ಮಾಡಬಾರದು. 15,000- 25,000ರೂ ಶುಲ್ಕ ಪಡೆಯುವ ಶಾಲೆಗಳಲ್ಲಿ ಶೇ 10ರಷ್ಟು, 25,000- 30,000 ರೂ ಶುಲ್ಕ ಪಡೆಯುವ ಶಾಲೆಗಳಲ್ಲಿ ಶೇ 15ರಷ್ಟು, 30,000- 50,000ರೂ ಶುಲ್ಕ ಪಡೆಯುವ ಶಾಲೆಗಳಿಗೆ ಶೇ 20ರಷ್ಟುಮತ್ತು 50,000ರೂ ಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಶಾಲೆಗಳಲ್ಲಿ ಶೇ.50ರಷ್ಟು ಶುಲ್ಕ ಕಡಿತಕ್ಕೆ ಮನವಿ ಮಾಡಿದರು ಆದರೆ ಇದಕ್ಕೆ ಪೋಷಕ ಸಂಘಟನೆಗಳು ಒಪ್ಪಲಿಲ್ಲ. ಹೀಗಾಗಿ ಅಂತಿಮ ತೀರ್ಮಾನವನ್ನು ಸರ್ಕಾರಕ್ಕೆ ಬಿಡಲಾಯಿತು. ಹಲವು ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.