Married Couples: ಜತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ ಅಂದರೆ ಎಲ್ಲಿ ಹೆಣ್ಣನ್ನು ಪೂಜಿಸಲಾಗುತ್ತದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ. ಎಲ್ಲಿ ಹೆಣ್ಣನ್ನು ಪೂಜಿತ ಭಾವದಿಂದ ಕಾಣಲಾಗುತ್ತೋ ಅಲ್ಲಿ ದೇವರು ಇದ್ದೆ ಇರುತ್ತಾನೆ, ಅದರಲ್ಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣನ್ನು ದೇವರು ಎಂದು ಪೂಜಿಸಲಾಗುತ್ತದೆ ಅಂತಹ ಹೆಣ್ಣಿಗೆ ನಾವು ಏನು ಮಾಡ್ತಿವಿ? ಮನೆಯಲ್ಲಿ ನಮ್ಮ ತಾಯಿಗೆ ಎನ್ನನ್ನು ನೀಡ್ತಿವಿ. ಒಂದು ಹೆಣ್ಣು ತನ್ನ ಪತಿಗಾಗಿ, ತನ್ನ ತಂದೆಗಾಗಿ, ತನ್ನ ಮಕ್ಕಳಿಗಾಗಿ, ತನ್ನ ಸಹೋದರ ಸಹೋದರಿಯರಿಗೆ ಹಲವಾರು ಕರ್ತವ್ಯಗಳನ್ನು ಕಾರ್ಯಗಳನ್ನು ಮಾಡುತ್ತಾರೆ.
ಆದರೆ ಯಾವತ್ತೂ ಸಹ ಆಕೆ ತನಗೆ ಇವರಿಂದ ಏನಾದರೂ ಸಿಗುತ್ತದೆ ಎಂದು ಅನ್ನಿಸಿಕೊಂಡು ಮಾಡುವುದಿಲ್ಲ. ಒಂದು ಹೆಣ್ಣು ಯಾವುದೋ ಒಂದು ಆಪೇಕ್ಷೆ ಇಟ್ಟುಕೊಂಡು ಕೆಲಸ ಮಾಡುವುದಿಲ್ಲ ಆಕೆ ಬೇರೆಯವರ ಖುಷಿಗಾಗಿ ತನ್ನ ಖುಷಿಯನ್ನು ಸಹ ತ್ಯಾಗ ಮಾಡುತ್ತಾಳೆ ಅಂತಹ ಹೆಣ್ಣಿಗೆ ನೀವೇನನ್ನ ಮಾಡಿದ್ದೀರಾ?
ಒಂದು ಹೆಣ್ಣು ತನ್ನ ಪ್ರೀತಿ ಪಾತ್ರರಾದವರಿಂದ ಹಣವನ್ನು ಕೇಳುವುದಿಲ್ಲ, ಒಡವೆ ವಸ್ತ್ರಗಳನ್ನು ಕೇಳುವುದಿಲ್ಲ ಅಥಾವ ಆಡಂಬರದ ಜೀವನವನ್ನು ಕೇಳುವುದಿಲ್ಲ ಆಕೆ ನಿಮ್ಮ ಬಳಿ ಬಯಸುವುದು ಕೇವಲ ಪ್ರೀತಿ ಮತ್ತು ಅವಳ ಜೊತೆ ನೀವು ಅವಳಿಗಾಗಿ ನೀಡತಕ್ಕಂತ ಸ್ವಲ್ಪ ಸಮಯ. ನಿಮಗಾಗಿ ಆಕೆ ಕೇಳೋದು ಸಹ ಅದೇ, ಆಕೆ ನಿಮ್ಮ ಮೇಲೆ ನಾನು ನಿಮ್ಮವಳು ಅನ್ನೋ ನೀಡುತ್ತಕ್ಕಂತ ಒಂದು ಧೈರ್ಯ ಆಕೆಗೆ ಬೇಕು.
ನೀವು ನಿಮ್ಮ ತಾಯಿಗೆ ಉಡುಗೊರೆಗಳನ್ನ ಕೊಡುವುದರ ಬದಲು ಆಕೆಗೆ ನಿಮ್ಮ ಸಮಯವನ್ನು ನೀಡಿ, ನಿಮ್ಮ ಪ್ರೀತಿಯನ್ನ ನೀಡಿ, ನಿಮ್ಮ ಮಮತೆಯನ್ನು ನೀಡಿ ಆಗ ನಿಮ್ಮ ತಾಯಿ ಪ್ರಸನ್ನಳಾಗುತ್ತಾಳೆ, ಇನ್ನು ಅತಿ ಹೆಚ್ಚು ಪ್ರೀತಿಯನ್ನ ನೀಡುತ್ತಾಳೆ ನೀವು ಆಕೆಯನ್ನ ಗೌರವಿಸಿದಷ್ಟು ಆಕೆ ನಿಮ್ಮನ್ನು ಪ್ರೀತಿಸುತ್ತಾಳೆ. ಇದನ್ನ ಹೇಳ್ತಾರೆ ಜತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ, ನಿಮ್ಮ ಮನೆಯಲ್ಲಿ ನೀವು ಹೆಣ್ಣನ್ನು ಗೌರವಿಸಿದರೆ ನಿಮ್ಮ ಮನೆಯಲ್ಲಿ ದೇವರು ನೆಲೆಸಿರುತ್ತಾನೆ ಜೊತೆಗೆ ನೀವು ಸಹ ಸುಖ ಶಾಂತಿ ನೆಮ್ಮದಿಯಿಂದ ಇರ್ತೀರಾ