ಗರ್ಭಾವಸ್ಥೆಯಲ್ಲಿ ಮಹಿಳೆಯರು ತೆಗೆದುಕೊಳ್ಳುವ ಆಹಾರದ ಬಗ್ಗೆ ನಿಗಾ ವಹಿಸಬೇಕು. ಆ ಸಮಯದಲ್ಲಿ ಮಹಿಳೆಯರು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಮಹಿಳೆಯರು ಗರ್ಭಾವಸ್ಥೆಯಲ್ಲಿರುವಾಗ ತೆಗೆದುಕೊಳ್ಳುವ ಆಹಾರವು ಮಗುವಿನ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚುವರಿ ಆಹಾರವನ್ನು ತಿನ್ನುವ ಅವಶ್ಯಕತೆ ಇರುತ್ತದೆ. ಹೆಚ್ಚುವರಿ ಆಹಾರ ಹಾಗೂ ಔಷಧಿಗಳನ್ನು ಸೇವಿಸುವುದರಿಂದ ಮಗುವಿನ ಬುದ್ಧಿ, ಕೌಶಲ್ಯ ಹೆಚ್ಚಾಗುತ್ತದೆ. ಗರ್ಭಿಣಿಯರು ಮೊಟ್ಟೆಯನ್ನು ಸೇವಿಸಬೇಕು ಮೊಟ್ಟೆಯಲ್ಲಿರುವ ಕೊಲೈನ್ ಎಂಬ ಅಮೈನೋ ಆಮ್ಲ ಇದು ಮಕ್ಕಳ ಮೆದುಳಿನ ಬೆಳವಣಿಗೆಗೆ ಹಾಗೂ ಜ್ಞಾಪಕಶಕ್ತಿ ಹೆಚ್ಚಾಗಲು ಸಹಕಾರಿಯಾಗಿದೆ. ಪ್ರತಿದಿನ ಎರಡು ಮೊಟ್ಟೆಯನ್ನು ಗರ್ಭಿಣಿ ಮಹಿಳೆಯರು ಸೇವಿಸುವುದು ಅವರ ಆರೋಗ್ಯಕ್ಕೆ ಒಳ್ಳೆಯದು. ಅಲ್ಲದೇ ಮೊಟ್ಟೆಯಲ್ಲಿರುವ ಪ್ರೋಟೀನ್ ಹಾಗೂ ಕಬ್ಬಿಣದ ಅಂಶಗಳು ಮಗು ಅಗತ್ಯ ತೂಕ ಹೊಂದಲು ಸಹಾಯಕಾರಿಯಾಗಿದೆ. ಅಗತ್ಯಕ್ಕಿಂತ ಕಡಿಮೆ ತೂಕದ ಮಕ್ಕಳು ಇತರ ಮಕ್ಕಳಿಗಿಂತ ಐಕ್ಯೂ ಮಟ್ಟ ಕಡಿಮೆ ಹೊಂದಿರುತ್ತಾರೆ.
ಪಾಲಕ್ ಸೊಪ್ಪು, ಬಸಳೆ ಸೊಪ್ಪು, ಕಡಿಮೆ ಕೊಬ್ಬಿನ ಕೋಳಿಮಾಂಸ, ಬೀನ್ಸ್ ಗಳಲ್ಲಿ ಕಬ್ಬಿಣದ ಅಂಶ ಹೇರಳವಾಗಿರುವುದರಿಂದ ಮಗುವಿನ ಬುದ್ಧಿವಂತಿಕೆಯನ್ನು ಹೆಚ್ಚಿಸುತ್ತದೆ. ಕಬ್ಬಿಣದ ಅಂಶವು ಮಗುವಿನ ಮೆದುಳಿನ ಜೀವಕೋಶಗಳ ಬೆಳವಣಿಗೆಗೆ ಅಗತ್ಯವಾಗಿದೆ ಒಂದುವೇಳೆ ಗರ್ಭಿಣಿ ಮಹಿಳೆಯಲ್ಲಿ ಕಬ್ಬಿಣದ ಅಂಶ ಕಡಿಮೆ ಇದ್ದರೆ ಮಗುವಿನ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಮಗುವಿನ ನರಗಳ ಜೀವಕೋಶವನ್ನು ಸೃಷ್ಟಿಸಲು ತಾಯಿಯ ದೇಹ ಶ್ರಮಿಸುವುದರಿಂದ ಪ್ರೋಟೀನ್ ಅವಶ್ಯಕತೆ ಇರುತ್ತದೆ ಆದ್ದರಿಂದ ಪ್ರೊಟೀನಯುಕ್ತ ಆಹಾರದ ಜೊತೆಗೆ ಮೊಸರನ್ನು ಸೇವಿಸುವುದು ಒಳ್ಳೆಯದು ಮೊಸರಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮಗುವಿನ ಮೂಳೆಯ ಬೆಳವಣಿಗೆಗೆ ಸಹಾಯಕಾರಿಯಾಗಿದೆ. ಕೊಬ್ಬುಯುಕ್ತ ಮೀನುಗಳನ್ನು ಸೇವಿಸಬೇಕು ಇದರಲ್ಲಿರುವ ಪೋಷಕಾಂಶಗಳು ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಅಧ್ಯಯನವು ತಿಳಿಸುತ್ತದೆ. ಈ ಎಲ್ಲಾ ಆಹಾರವನ್ನು ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಸೇವಿಸುವುದರಿಂದ ಹುಟ್ಟಿದ ಮಗು ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗುತ್ತದೆ. ಈ ಮಾಹಿತಿಯನ್ನು ಮಹಿಳೆಯರಿಗೆ ತಪ್ಪದೇ ತಿಳಿಸಿ.