ಕೆಲವೊಂದು ಸಂಘ ಮತ್ತು ಸಂಸ್ಥೆಗಳು ತಮಗೆ ಅಭ್ಯರ್ಥಿಗಳು ಬೇಕಾದಾಗ ಅರ್ಜಿಯನ್ನು ಆಹ್ವಾನಿಸುತ್ತವೆ. ಹಾಗೆಯೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಬ್ಯಾಂಕ್ ಸಿಬ್ಬಂದಿ ನೇಮಕಾತಿಯ ವಿವಿಧ ಹುದ್ದೆಗಳ ಅರ್ಜಿಯ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹುದ್ದೆಗಳು:- ಸಿಬ್ಬಂದಿ ನೇಮಕಾತಿ ಆಯೋಗದಲ್ಲಿ ಹಲವಾರು ಹುದ್ದೆಗಳಿವೆ. ಮೊದಲು ಆಫೀಸರ್ಸ್ ನಂತರ ಅದರಲ್ಲಿ ಸ್ಕೇಲ್ ಒಂದು, ಎರಡು ಮತ್ತು ಮೂರು ಇದೆ.ನಂತರದಲ್ಲಿ ಆಫೀಸ್ ಅಸಿಸ್ಟೆಂಟ್ ಎಂಬ ಹುದ್ದೆ ಇದೆ. ಈ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ:- ಒಟ್ಟಾರೆಯಾಗಿ 10,676 ಹುದ್ದೆಗಳಿಗೆ ನೇಮಕಾತಿ ಕರೆಯಲಾಗಿದೆ. ಭಾರತದಲ್ಲಿ ಎಲ್ಲಾ ಕಡೆ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.
ವಿದ್ಯಾರ್ಹತೆ :- ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅನುಗುಣವಾಗಿ ಯಾವುದೇ ಪದವಿ ಚಾರ್ಟರ್ಡ್ ಅಕೌಂಟೆಂಟ್ ಮತ್ತು ಎಮ್. ಬಿ.ಎ. ವಿದ್ಯಾರ್ಹತೆಯನ್ನು ಹೊಂದಿರಬೇಕು. ಇನ್ನುಳಿದ ಯಾವುದೇ ಪದವಿ ಪಾಸಾಗಿರುವ ಅವಶ್ಯಕತೆ ಇಲ್ಲ.
ವಯೋಮಿತಿ:-ಈ ಅರ್ಜಿ ಸಲ್ಲಿಸುವವರು ಆಫೀಸರ್ ಸ್ಕೇಲ್ ಒಂದು ಹುದ್ದೆಗೆ 18 ರಿಂದ 30ವರ್ಷ ವಯೋಮಿತಿ ಹೊಂದಿರಬೇಕು. ಸ್ಕೇಲ್ ಎರಡರ ಹುದ್ದೆಗೆ 21 ರಿಂದ 32 ವರ್ಷ ವಯೋಮಿತಿ ಹೊಂದಿರಬೇಕು. ಸ್ಕೇಲ್ ಮೂರರ ಹುದ್ದೆಗೆ 21 ರಿಂದ 40 ವರ್ಷ ಹೊಂದಿರಬೇಕು. ಆಫೀಸ್ ಅಸಿಸ್ಟೆಂಟ್ ಗೆ 18 ರಿಂದ 28 ವರ್ಷ ವಯೋಮಿತಿ ಇದೆ. ಅದೇ ರೀತಿ ಎಸ್.ಸಿ.ಎಸ್.ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಓ.ಬಿ.ಸಿ. ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪಿ.ಡಬ್ಲ್ಯೂ.ಡಿ. ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಆಯ್ಕೆಯ ನೇಮಕಾತಿ:- ಇಲ್ಲಿ ಹಲವಾರು ಪರೀಕ್ಷೆಗಳನ್ನು ಮಾಡಲಾಗುತ್ತದೆ. ಮೊದಲು ಪ್ರಿಲಿಮಿನರಿ ಮತ್ತು ನಂತರ ಮೇನ್ಸ್ ಪರೀಕ್ಷೆ ಮಾಡಿ ನಂತರ ಸಿಂಗಲ್ ಲೆವೆಲ್ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ದಿನಾಂಕ:-ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 8-06-2021 ಆಗಿದೆ. ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-06-2021 ಆಗಿದೆ. ಹಾಗೆಯೇ ಶುಲ್ಕ ಪಾವತಿಸಲು ಕೊನೆಯ ದಿನಾಂಕ 17-12-2020 ಆಗಿದೆ.
ಅರ್ಜಿ ಸಲ್ಲಿಸುವ ವಿಧಾನ:- ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಹೋಗಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬೇಕು. WWW.ibps.in
ಅರ್ಜಿ ಶುಲ್ಕ:-ಎಸ್ಸಿ.ಎಸ್ಟಿ, ಪಿ.ಡಬ್ಲ್ಯೂ.ಡಿ. ಅಭ್ಯರ್ಥಿಗಳಿಗೆ 175 ರೂಪಾಯಿಗಳು. ಉಳಿದ ಅಭ್ಯರ್ಥಿಗಳು 850 ರೂಪಾಯಿಗಳನ್ನು ಕಟ್ಟಬೇಕು. ಶುಲ್ಕವನ್ನು ಆನ್ ಲೈನ್ ಮುಖಾಂತರ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.