ದೇಶದಲ್ಲಿ ಇದೀಗ ಕೊರೋನ ಅನ್ನೋ ಮಾರಕ ವೈರಸ್ ಮರಣ ಮೃದಂಗ ಬಾರಿಸುತ್ತಿದೆ, ಇದರ ನಡುವೆ ದೇಶದ ಆರ್ಥಿಕತೆ ಸಂಕಷ್ಟಕ್ಕೀಡಾಗಿದೆ, ಈ ನಡುವೆ ದೇಶದಲ್ಲಿ ಕೊರೋನ ವೈರಸ್ ವಿರುದ್ಧ ಹೋರಾಡಲು ಹತ್ತಾರು ಜನ ಬಹು ದೊಡ್ಡ ಮೊತ್ತದ ಹಣವನ್ನು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ ದಣಿಗೆ ನೀಡಿದ್ದಾರೆ, ರಾಜ್ಯದಲ್ಲಿ ಕೂಡ ಹಲವರು ಕೊರೋನ ಮಹಾಮಾರಿಯ ವಿರುದ್ಧ ಹೋರಾಡಲು ದಣಿಗೆ ನೀಡಿದ್ದಾರೆ, ಅದೇ ನಿಟ್ಟಿನಲ್ಲಿ ದೇಶದಲ್ಲಿ ಒಟ್ಟಾರೆಯಾಗಿ ಯಾರೆಲ್ಲ ಎಷ್ಟು ಮೊತ್ತದ ಹಣವನ್ನು ನೀಡಿದ್ದಾರೆ ಅನ್ನೋದನ್ನ ನೋಡುವುದಾದರೆ, ಹಲವು ಸಂಘ ಸಂಸ್ಥೆಗಳು ಹಾಗು ಕ್ರೀಡಾ ಕ್ಷೇತ್ರ ಸಿನಿಮಾ ಕ್ಷೇತ್ರ ಹಲವು ಕಡೆಗಳಿಂದ ದಣಿಗೆ ಹಣ ಬಂದಿದೆ.
ಇದೆ ಮಾರ್ಚ್ ೨೮ ರಂದು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಗೆ ಹಣ ಸಹಾಯ ಮಾಡಿ ಎಂಬುದಾಗಿ ಕೇಳಿಕೊಂಡಿದ್ದರು ಆಗಾಗಿ ಅದೇ ನಿಟ್ಟಿನಲ್ಲಿ ಸೆಲೆಬ್ರಿಟಿಗಳು ಮತ್ತು ಉದ್ಯಮಗಳಿಂದ ಮೂರು ದಿನಗಳಲ್ಲಿ 7,300 ಕೋಟಿ ರೂ. ಹರಿದು ಬಂದಿದೆ. ಈ ನಿಧಿಯಲ್ಲಿ ಕಾರ್ಪೊರೇಟ್ ಸಂಸ್ಥೆಗಳಾದ ಟಾಟಾ ಗ್ರೂಪ್ 1,500 ಕೋಟಿ ರೂ. ರಿಲಯನ್ಸ್ ಇಂಡಸ್ಟ್ರೀಸ್ 500 ಕೋಟಿ ರೂ., ಒಎನ್ಜಿಸಿ 300 ಕೋಟಿ ರೂ., ಸರ್ಕಾರಿ ಸಂಸ್ಥೆಗಳಾದ ಭಾರತೀಯ ರೈಲ್ವೆ 151 ಕೋಟಿ ರೂ. ಮತ್ತು ಲಾರ್ಸೆನ್ ಮತ್ತು ಟೂಬ್ರೊ 150 ಕೋಟಿ ರೂ. ದೇಣಿಗೆ ಸೇರಿದೆ.
ಅದೇನೇ ಇರಲಿ ಜನ ಆದಷ್ಟು ಮನೆಯಲ್ಲಿದ್ದು ಈ ಮಹಾಮಾರಿ ಕೊರೋನ ವೈರಸ್ ವಿರುದ್ಧ ಹೋರಾಡಬೇಕಾಗಿದೆ ಇಲ್ಲದಿದ್ದರೆ ಮುಂದಿನ ದಿನಗಳು ಅತಿ ಕೆಟ್ಟ ದಿನಗಳನ್ನು ನಾವು ನೀವುಗಳು ಎದುರಿಸಬೇಕಾಗುತ್ತದೆ.