ಈ ಭೂಮಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ ಸಾವು ಒಂದಲ್ಲಾ ಒಂದು ದಿನ ನಿಶ್ಚಿತ. ಹಾಗೆಯೇ ಮನುಷ್ಯ ಕೂಡ ಹುಟ್ಟಿದ ಮೇಲೆ ಒಂದಲ್ಲಾ ಒಂದು ದಿನ ಸಾಯಲೇಬೇಕು. ಸತ್ತ ದೇಹವನ್ನು ಹಿಂದೂ ಪದ್ಧತಿಯಲ್ಲಿ ಸುಡುತ್ತಾರೆ. ಆದರೆ ಬೇರೆ ಬೇರೆ ಧರ್ಮಗಳಲ್ಲಿ ಬೇರೆ ಬೇರೆ ವಿಧಾನಗಳು ಇವೆ. ಕೆಲವೊಮ್ಮೆ ಸತ್ತ ದೇಹದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಕಾರಣ ವ್ಯಕ್ತಿ ಸತ್ತಿರುವ ಕಾರಣವನ್ನು ತಿಳಿಯಬೇಕೆಂಬ ಉದ್ದೇಶ ಇರುತ್ತದೆ. ಆದ್ದರಿಂದ ನಾವು ಇಲ್ಲಿ ಸತ್ತ ದೇಹದ ಮರಣೋತ್ತರ ಪರೀಕ್ಷೆಯನ್ನು ಹೇಗೆ ಮಾಡುತ್ತಾರೆ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮರಣೋತ್ತರ ಪರೀಕ್ಷೆಯನ್ನು ಮಾಡಿದ ನಂತರ ದೇಹ ಹೇಗೆ ಮರಣ ಹೊಂದಿದೆ, ಎಷ್ಟು ಸಮಯದ ಒಳಗೆ ಮರಣ ಹೊಂದಿದೆ ಹಾಗೆಯೇ ಮರಣ ಹೊಂದಲು ಕಾರಣವೇನು ಈ ಎಲ್ಲಾ ಮಾಹಿತಿಗಳನ್ನು ತಿಳಿಯಬಹುದು. ಈ ಪರೀಕ್ಷೆ ನಡೆಸುವ ಸರ್ಜನ್ ನ್ನು ಪ್ಯಾಥೋಲಜಿಸ್ಟ್ ಎಂದು ಕರೆಯಲಾಗುತ್ತದೆ. ಇವರಿಗೆ ನುರಿತ ಅನುಭವ ಮತ್ತು ಜ್ಞಾನ ಇರುತ್ತದೆ. ಇದರಲ್ಲಿ ಜೊತೆಗೆ ಕೆಲಸದಲ್ಲಿ ತೊಡಗುವವರನ್ನು ಕೊರೊನರ್ ಎಂದು ಕರೆಯುತ್ತಾರೆ. ಸಾವು ಸಹಜವಾಗಿ ನಡೆಯಿತೋ ಅಥವಾ ಅಸಹಜವಾಗಿ ನಡೆಯಿತೋ ಎನ್ನುವುದನ್ನು ಇದರಿಂದ ತಿಳಿಯಬಹುದು. ಎಲ್ಲಾ ಸಾವುಗಳಿಗೆ ಈ ಪರೀಕ್ಷೆ ನಡೆಸುವುದಿಲ್ಲ.
ಅನುಮಾನಾಸ್ಪದ ಸಾವುಗಳಿಗೆ ಮಾತ್ರ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪೊಲೀಸ್ ಇಲಾಖೆಗಳಿಗೆ ಈ ಪರೀಕ್ಷೆ ಬಹಳ ಪ್ರಯೋಜನಕಾರಿ ಆಗಿದೆ. ದೇಹವನ್ನು ಲ್ಯಾಬ್ ಗೆ ಒಯ್ದು ಮೊದಲು ಹೊಟ್ಟೆಯ ಅಡ್ಡ ಅಥವಾ ಉದ್ದವನ್ನು ಸೀಳಲಾಗುತ್ತದೆ. ನಂತರ ಒಳಗಿನ ಎಲ್ಲಾ ಅವಯವಗಳನ್ನು ಪರೀಕ್ಷೆ ಮಾಡಲಾಗುತ್ತದೆ. ನಂತರ ಒಳಗೆ ಉಂಟಾದ ಪೆಟ್ಟು ಮತ್ತು ರಕ್ತಸ್ರಾವಗಳನ್ನು ಪರೀಕ್ಷೆ ಮಾಡಲಾಗುತ್ತದೆ. ನಂತರ ಅದನ್ನು ಮುಚ್ಚಿ ಆ ಭಾಗವನ್ನು ಹೊಲಿಯಲಾಗುತ್ತದೆ. ಇಲ್ಲಿ 4 ರೀತಿಯ ಪರೀಕ್ಷೆಗಳು ಇವೆ. ಮೊದಲು ಕಾನೂನು ವೈದ್ಯ ಮರಣೋತ್ತರ ಪರೀಕ್ಷೆ. ಇದನ್ನು ಪೊಲೀಸ್ ಕೇಸ್ ಗೆ ಸಂಬಂಧಿಸಿದಂತೆ ಇದನ್ನು ನಡೆಸಲಾಗುತ್ತದೆ.
ಎರಡನೆಯದು ಪ್ಯಾಥಲೋಗಿಕಲ್ ಪರೀಕ್ಷೆ ಹಾಗೆಯೇ ಮೂರನೆಯದು ವೈದ್ಯಕೀಯ ಕಾಲೇಜಿನಲ್ಲಿ ಅವರಿಂದ ನಡೆಯುವ ಪರೀಕ್ಷೆ ಕೊನೆಯದು ಸ್ಕ್ಯಾನಿಂಗ್ ನಡೆಸಿ ನಡೆಸುವ ಪರೀಕ್ಷೆ ಇದಕ್ಕೆ ಆಧುನಿಕ ಮಷಿನ್ಗಳು ಬೇಕಾಗುತ್ತದೆ. ಸತ್ತ ದೇಹವನ್ನು ಒಂದು ಸ್ಟೀಲ್ ಕಂಟೇನರ್ ನಲ್ಲಿ ಸುತ್ತಿ ಲ್ಯಾಬ್ ಗೆ ಕಳುಹಿಸಲಾಗುತ್ತದೆ. ದೇಹದ ಎಲ್ಲಾ ಭಾಗಗಳ ಚಿತ್ರವನ್ನು ಸೆರೆ ಹಿಡಿಯಲಾಗುತ್ತದೆ. ನಂತರ ದೇಹದ ಬಟ್ಟೆಯನ್ನು ಬಿಚ್ಚಿ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಸತ್ತ ದೇಹ ಕೊಳೆತ ಸ್ಥಿತಿಯಲ್ಲಿ ಇದ್ದರೆ ವಿಶೇಷ ದ್ರಾವಕಗಳನ್ನು ಬಳಸಿ ಸ್ವಚ್ಛ ಮಾಡಲಾಗುತ್ತದೆ. ಆದರೆ ಎಲ್ಲಾ ದೇಶಗಳಲ್ಲಿ ಹೀಗೆ ಮಾಡುವುದಿಲ್ಲ. ಕೆಲವು ದೇಶಗಳಲ್ಲಿ ಅಷ್ಟು ಆ ಅವಶ್ಯಕತೆ ಇದ್ದರೆ ಮಾತ್ರ ಪರೀಕ್ಷೆ ಮಾಡಲಾಗುತ್ತದೆ.