Post Office Savings Scheme: ಎಲ್ಲರೂ ಕೂಡ ತಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಹೂಡಿಕೆ ಮಾಡಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಈ ಎರಡು ಕೂಡ ಒಳ್ಳೆಯ ಆಯ್ಕೆ ಆಗಿರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ನಿಮಗೆ ಹೆಚ್ಚು ಆಯ್ಕೆ ಜೊತೆಗೆ ಒಳ್ಳೆಯ ಲಾಭ ಕೂಡ ಸಿಗುತ್ತದೆ. ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣ ಡಬಲ್ ಆಗೋದು ಗ್ಯಾರೆಂಟಿ. ಹಾಗಿದ್ದಲ್ಲಿ ಆ ಯೋಜನೆ ಯಾವುದು ಎಂದು ತಿಳಿಸಿಕೊಡುತ್ತೇವೆ ನೋಡಿ..

ಪೋಸ್ಟ್ ಆಫೀಸ್ ನಲ್ಲಿ FD ಯೋಜನೆಗೆ ಭಾರಿ ಬೇಡಿಕೆ ಇದೆ. ಇದು ಒಳ್ಳೆಯ ಲಾಭ ನೀಡುವ ಯೋಜನೆ ಆಗಿದ್ದು, ಇದನ್ನು ಪೋಸ್ಟ್ ಆಫೀಸ್ ಫಿಕ್ಸ್ಡ್ ಟರ್ಮ್ ಡೆಪಾಸಿಟ್ ಎಂದು ಕೂಡ ಕರೆಯುತ್ತಾರೆ. ಈ ಯೋಜನೆಯ ಬಗ್ಗೆ ಪೂರ್ತಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ.. ಪೋಸ್ಟ್ ಆಫೀಸ್ ಈ ಯೋಜನೆವಲ್ಲಿ 1, 2, 3 ಅಥವಾ 5 ವರ್ಷಕ್ಕೆ ಹಣವನ್ನು ಠೇವಣಿ ಇಡಬಹುದು. ನೀವು ಠೇವಣಿ ಇಡುವ ಮೊತ್ತ ಎಷ್ಟು ವರ್ಷಕ್ಕೆ ಎನ್ನುವುದರ ಮೇಲೆ ಬಡ್ಡಿ ನಿರ್ಧಾರ ಆಗುತ್ತದೆ.

ಸಾಮಾನ್ಯವಾಗಿ 5 ವರ್ಷದ ಠೇವಣಿಗೆ 7.5% ಬಡ್ಡಿ ಇರುತ್ತದೆ. ಒಂದು ವೇಳೆ ನಿಮ್ಮ ಬಡ್ಡಿ ಸಮಯ ಮುಗಿಯುವುದಕ್ಕಿಂತ ಮೊದಲೇ ಅಕೌಂಟ್ ಕ್ಲೋಸ್ ಮಾಡಿದರೆ, ನಿಗದಿ ಆಗುವುದಕ್ಕಿಂತ ಕಡಿಮೆ ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ನೀವು ಹಣ ಠೇವಣಿ ಮಾಡಿದರೆ, ನಿಮ್ಮ ಹಣ ಡಬಲ್ ಆಗೋದಕ್ಕೆ 9 ವರ್ಷ 6 ತಿಂಗಳು ಅಥವಾ 114 ತಿಂಗಳುಗಳ ಸಮಯ ತೆಗೆದುಕೊಳ್ಳುತ್ತದೆ.

ಈ ಯೋಜನೆಯ ಬಡ್ಡಿದರ ಹಾಗೂ ಅದಕ್ಕೆ ಸಂಬಂಧಿಸಿದ ವಿವರ ಹೀಗಿವೆ..
ಠೇವಣಿ ಇಡುವ ಮೊತ್ತ :- 5 ಲಕ್ಷ
ಬಡ್ಡಿದರ :- 7.5%
ಮೆಚ್ಯುರಿಟಿ ಸಮಯ :- 5 ವರ್ಷಗಳು
ಮೆಚ್ಯುರಿಟಿ ಆದ ಬಳಿಕ ಸಿಗುವ ಮೊತ್ತ :- 7,24,974 ರೂಪಾಯಿಗಳು
ಬಡ್ಡಿಯ ಲಾಭ :- 2,24,974 ರೂಪಾಯಿಗಳು
ಈ ಯೋಜನೆಯಲ್ಲಿ ತೆರಿಗೆ ವಿನಾಯಿತಿ ಪ್ರಯೋಜನ ಇರುವುದು ಮತ್ತೊಂದು ವಿಶೇಷ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!