Home Loan: ಹೋಮ್ ಲೋನ್ ಮೇಲಿನ ಬಡ್ಡಿದರ ಕಡಿಮೆ ಪಡೆಯಲು ಇಲ್ಲಿದೆ ಸುಲಭ ದಾರಿ

0 996

Home loan interest rates: ಹೋಮ್ ಲೋನ್ ಪಡೆದು ಸಾಕಷ್ಟು ಜನರು ಸಾಲ ಮರುಪಾವತಿ ಮಾಡುತ್ತಿದ್ದಾರೆ. ಆದರೆ ಹೆಚ್ಚಿನ ಜನರಿಗೆ RBI ಇಂದ ರೆಪೊ ರೇಟ್ ಜಾಸ್ತಿಯಾದ ನಂತರ, ಹೋಮ್ ಲೋನ್ ಮೇಲಿನ ಬಡ್ಡಿದರ ಕೂಡ ಜಾಸ್ತಿಯಾಗಿದೆ. ರೆಪೊ ರೇಟ್ ನಲ್ಲಿ 250 ಬೇಸ್ ಪಾಯಿಂಟ್ಸ್ ಜಾಸ್ತಿ ಆಗಿದ್ದು, ಇದರಿಂದ ಇಎಂಐ ಮೊತ್ತ ಹಾಗೂ ಬಡ್ಡಿದರ ಜಾಸ್ತಿಯಾಗಿ, ಇದೆಲ್ಲವನ್ನು ನಿಭಾಯಿಸಲು ಸಾಲ ಪಡೆದವರಿಗೆ ಕಷ್ಟವಾಗುತ್ತಿದೆ. ಒಂದು ವೇಳೆ ನಿಮಗೂ ಇದು ಹೊರೆ ಅನ್ನಿಸಿದರೆ, ಈ ಕ್ರಮಗಳನ್ನು ಅನುಸರಿಸುವ ಮೂಲಕ ಹೋಮ್ ಲೋನ್ ಮೇಲಿನ ಬಡ್ಡಿಯನ್ನು ಕಡಿಮೆ ಮಾಡಬಹುದು..

ಮೊದಲಿಗೆ ನೀವು ಬಡ್ಡಿದರವನ್ನು ಕಡಿಮೆ ಮಾಡಲು, ತಾವು ಸಾಲ ಪಡೆದಿರುವ ಬ್ಯಾಂಕ್ ಸಂಪರ್ಕಿಸಬಹುದು, ಬ್ಯಾಂಕ್ ಇಂದ ಸಾಲ ಕಡಿಮೆ ಆಗುವುದು ಯಾವಾಗ ಎಂದರೆ ಈಗಿನ ಬಡ್ಡಿದರ ಹಾಗೂ ಹೊಸದಾಗಿ ಸಾಲ ಪಡೆಯುತ್ತಿರುವವರಿಗೆ ನೀಡುತ್ತಿರುವ ಬಡ್ಡಿದರ ಎರಡು ಕೂಡ ಕಡಿಮೆ ಇದ್ದಾಗ ಮಾತ್ರ ನೀವು ಪಾವತಿ ಮಾಡಬೇಕಾದ ಬಡ್ಡಿದರ ಕಡಿಮೆ ಆಗುತ್ತದೆ.

Home loan interest rates

ಸಾಲ ಪಡೆದಿರುವವರು ಮರುಪಾವತಿ ಪ್ರಕ್ರಿಯೆಯನ್ನು ಶುರು ಮಾಡಲು ತಮ್ಮ ಬ್ಯಾಂಕ್ ನ ಸಾಲ ಇರುವ ಬ್ಯಾಂಕ್ ಗೆ ಮೊದಲು ಇಮೇಲ್ ಕಳಿಸಬೇಕಾಗುತ್ತದೆ. ನಂತರ ಸಾಲ ಮರುಪಾವತಿ ಅಥವಾ ಪರಿವರ್ತನೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇಲ್ಲಿ ನೀವು ಸಾಲ ಪಡೆದಿರುವ ಮೊತ್ತವು 0.25% ಇಂದ 0.50% ವರೆಗು ಇರಲಿದೆ, ಒಂದು ವೇಳೆ ಸಾಲ ಪಡೆದಿರುವವರಿಗೆ ಇದು ಬೇಡ ಎಂದರೆ ಇದರ ಬದಲಾಗಿ ಬೇರೆ ಪರಿಹಾರವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಹಾಗೆ ನೀವು ಸಾಲದ ಮೊತ್ತವನ್ನು ಬೇರೆ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ನೀವು ಬಡ್ಡಿ ಕಟ್ಟುತ್ತಿರುವ ಬ್ಯಾಂಕ್ ನಲ್ಲಿ ಬಡ್ಡಿದರ ಜಾಸ್ತಿ ಇದ್ದರೆ, ಕಡಿಮೆ ಬಡ್ಡಿದರ ಇರುವ ಬ್ಯಾಂಕ್ ಗೆ ಹೋಮ್ ಲೋನ್ ಅನ್ನು ಟ್ರಾನ್ಸ್ಫರ್ ಮಾಡಿಕೊಳ್ಳಬಹುದು. ನೀವು ಸಾಲ ಪಡೆದ ಅಸಲು ಮೊತ್ತ, ಬಡ್ಡಿ, EMI ಕಡಿಕೆ ಆಗುತ್ತದೆ. ಓದು ದೀರ್ಘಾವಧಿ ಸಮಯಕ್ಕೆ ಹಣ ಉಳಿಸಬಹುದಾದ ಆಯ್ಕೆ ಆಗಿದೆ.
ಬ್ಯಾಂಕ್ ಇಂದ ಈ ಸೌಲಭ್ಯ ಪಡೆಯಲು ಸಾಲ ಪಡೆಯುತ್ತಿರುವವರು ಕೆಲವು ವೆಚ್ಚಗಳನ್ನು ನೀಡಬೇಕಾಗುತ್ತದೆ.

ಇದರ ಜೊತೆಗೆ ಸಾಲ ಕಟ್ಟುತ್ತಿರುವವರು 0.25% ಇಂದ 2% ವರೆಗು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಸಂಸ್ಕರಣಾ ಶುಲ್ಕ, ಕಾನೂನು ಶುಲ್ಕ, ಮೌಲ್ಯಮಾಪನ ಶುಲ್ಕ, ದಾಖಲೆ ಪರಿಶೀಲನೆ ಶುಲ್ಕ ಇದೆಲ್ಲವನ್ನು ಪಾವತಿ ಮಾಡಬೇಕಾಗುತ್ತದೆ. ಮತ್ತೊಂದು ಮುಖ್ಯವಾದ ವಿಚಾರ ಏನು ಎಂದರೆ ಲಾಕ್ ಇನ್ ಸಮಯ ಮುಗಿಯುವುದಕ್ಕಿಂತ ಮೊದಲು ಸಾಲವನ್ನು ಟ್ರಾನ್ಸ್ಫರ್ ಮಾಡಿಕೊಂಡರೆ, ಸಾಲದ ಮೊತ್ತದ ಮೇಲೆ 0.4% ಇಂದ 4% ವರೆಗು ಮರುಪಾವತಿಯ ಮೇಲೆ ದಂಡವನ್ನು ವಿಧಿಸಲಾಗುತ್ತದೆ.

ಕ್ರೆಡಿಟ್ ಪ್ರೊಫೈಲ್ ಸುಧಾರಣೆ ಆದಾಗಿನಿಂದ ಮಾಸಿಕ ಆದಾಯ ಕೂಡ ಜಾಸ್ತಿಯಾಗುತ್ತದೆ. ಸಾಲ ಪಡೆದಿರುವವರಿಗೆ ಒಳ್ಳೆಯ ಕೆಲಸ ಸಿಕ್ಕಾಗ ಬೇರೆ ಬ್ಯಾಂಕ್ ಇಂದ ಕಡಿಮೆ ಬಡ್ಡಿದರ ಪಡೆಯುವ ಅರ್ಹತೆ ಹೊಂದುತ್ತಾರೆ. ಈ ರೀತಿ ಮಾಡುವ ಮೂಲಕ ಹೋಮ್ ಲೋನ್ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಿಕೊಳ್ಳಬಹುದು.

Leave A Reply

Your email address will not be published.