ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎನ್ನುವುದು ಬಹಳಷ್ಟು ಯುವಕರ ಕನಸು, ಈ ಇಲಾಖೆ ನ್ಯಾಯದ ಪರವಾಗಿದ್ದು, ಜನರಿಗೆ ಅನ್ಯಾಯವಾದಾಗ ಅವರಿಗೆ ಸರಿಯಾದ ರೀತಿಯಲ್ಲಿ ನ್ಯಾಯ ಕೊಡಿಸಿ, ಅನ್ಯಾಯ ಮಾಡುವವರನ್ನು ಹಿಡಿದು ನ್ಯಾಯಾಂಗಕ್ಕೆ ಒಪ್ಪಿಸುವ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವುದು ಹಲವರ ಕನಸು. ಆದರೆ ಪೊಲೀಸ್ ನೇಮಕಾತಿಯ, PSI ಪರೀಕ್ಷೆ ವಿಚಾರದಲ್ಲಿ ನಡೆದ ಹಗರಣಗಳ ಕಾರಣ ಜನರಲ್ಲಿ ನಂಬಿಕೆ ಇರಲಿಲ್ಲ.

PSI ನೇಮಕಾತಿ ಪರೀಕ್ಷೆ ವಿಚಾರದಲ್ಲಿ ಏನೆಲ್ಲಾ ಹಗರಣ ನಡೆದಿದೆ ಎನ್ನುವುದು ಗೊತ್ತೇ ಇದೆ. ಆ ಎಲ್ಲಾ ತೊಂದರೆಗಳನ್ನು ಸರಿಪಡಿಸಿ, ಶೀಘ್ರದಕ್ಕೆ ಪೊಲೀಸ್ ಇಲಾಖೆಯ ನೇಮಕಾತಿ ಪ್ರಕ್ರಿಯೆಯನ್ನು ಶುರು ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ PSI ನೇಮಕಾತಿ ಬಗ್ಗೆ ಸಚಿವರಾದ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಒಟ್ಟು 17,000 ಸಾವಿರ ಹುದ್ದೆಗಳು ಖಾಲಿ ಇವೆ.

ನಿಧನ ಆಗಿರುವವರು, ನಿವೃತ್ತಿ ಹೊಂದಿರುವವರು ಈ ಎಲ್ಲಾ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು ಎಂದು ತಿಳಿಸಲಾಗಿದೆ. ಈ ನೇಮಕಾತಿಯಲ್ಲಿ ಮೊದಲಿಗೆ 4547 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇದರಲ್ಲಿ 3000 ಕಾನ್ಸ್ಟೇಬಲ್ ಹುದ್ದೆಗಳು, 1457 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಸೇರಿರುತ್ತವೆ. ಇದಿಷ್ಟು ಹುದ್ದೆಗಳನ್ನು ಮೊದಲ ಹಂತದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ..

15,000 ಹುದ್ದೆಗಳನ್ನು ಒಂದೇ ಸಾರಿ ನೇಮಕಾತಿ ಮಾಡಿಕೊಳ್ಳಲು ಸಾಧ್ಯ ಆಗದ ಕಾರಣ, ಹಂತ ಹಂತವಾಗಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಇನ್ನು 6 ತಿಂಗಳ ಒಳಗೆ ಅರ್ಜಿ ಆಹ್ವಾನಿಸಿ, ಪರೀಕ್ಷೆ ನಡೆಸಲಾಗುವುದು ಎಂದು ಮಾಹಿತಿ ಸಿಕ್ಕಿದೆ. ಸರ್ಕಾರದಿಂದ ಸಿಕ್ಕಿರುವ ಈ ಸುದ್ದಿ ನಿಜಕ್ಕೂ ಸಂತೋಷದಾಯಕ ಎಂದರೆ ತಪ್ಪಲ್ಲ.

Leave a Reply

Your email address will not be published. Required fields are marked *