ಸಾಮಾನ್ಯವಾಗಿ ಪೊಲೀಸ್ ರು ನೋಡಲು ಫಿಟ್ ಆಗಿರುತ್ತಾರೆ. ಕೆಲಸಕ್ಕೆ ಸೇರುವ ಮೊದಲು ಸರಿಯಾಗಿ ವರ್ಕೌಟ್ ಮಾಡಿ ಕೆಲಸಕ್ಕೆ ಸೇರಿದ ನಂತರ ಬಹಳಷ್ಟು ಪೊಲೀಸರು ಹೊಟ್ಟೆ ಬೆಳೆಸಿಕೊಳ್ಳುತ್ತಾರೆ. ಖಡಕ್ ಐಪಿಎಸ್ ಅಧಿಕಾರಿ ಎಂದೆ ಖ್ಯಾತರಾಗಿರುವ ಕೆಎಸ್ಆರ್ ಪಿ ಎಡಿಜಿಪಿ ಅಲೋಕ್ ಕುಮಾರ್ ಪೊಲೀಸರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಅಲೋಕ್ ಕುಮಾರ್ ನೀಡಿದ ಎಚ್ಚರಿಕೆಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.

ಅಲೋಕ್ ಕುಮಾರ್ ಅವರು ಹೊಟ್ಟೆ ಮುಂದಕ್ಕೆ ಬೆಳೆಸಿಕೊಂಡ ಪೊಲೀಸರನ್ನು ಅತ್ಯುನ್ನತ ಪ್ರಶಸ್ತಿಗಳನ್ನು ನೀಡಲು ಶಿಫಾರಸು ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇನ್ನು ಮುಂದೆ ಹೊಟ್ಟೆ ಬಿಟ್ಟುಕೊಂಡ ಪೊಲೀಸರಿಗೆ ಮುಖ್ಯಮಂತ್ರಿ ಪದಕ ಹಾಗೂ ರಾಷ್ಟ್ರಪತಿ ಪದಕ ಸಿಗುವುದಿಲ್ಲ. ಅಲೋಕ್ ಕುಮಾರ್ ಅವರು ಇನ್ನು ಎರಡು ತಿಂಗಳಲ್ಲಿ ಹೊಟ್ಟೆ ಬೆಳೆಸಿಕೊಂಡ ಪೊಲೀಸರು ತಮ್ಮ ಹೊಟ್ಟೆಯನ್ನು ಕರಗಿಸಿಕೊಳ್ಳದಿದ್ದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನ ಕೆಎಸ್ಆರ್ ಪಿಯಲ್ಲಿ ಸಾವಿರದ ಹತ್ತು ಜನ ಪೊಲೀಸ್ ಸಿಬ್ಬಂದಿಗಳಿದ್ದು ಅವರಲ್ಲಿ 162 ಜನ ಪೊಲೀಸರಿಗೆ ಭಾರಿ ಹೊಟ್ಟೆ ಬಂದಿದೆ. 162 ಜನ ಪೊಲೀಸರನ್ನು ಗ್ರೌಂಡ್ ನಲ್ಲಿ ನಿಲ್ಲಿಸಿಕೊಂಡು ಅಲೋಕ್ ಕುಮಾರ್ ಅವರು ಇನ್ನು ಎರಡು ತಿಂಗಳಲ್ಲಿ ನಿಮ್ಮ ಹೊಟ್ಟೆ ಇಳಿಸಬೇಕು ಎಂದು ವಾರ್ನ್ ಮಾಡಿದ್ದಾರೆ.

ಅಲೋಕ್ ಕುಮಾರ್ ಅವರು ಹೊಟ್ಟೆ ಕರಗಿಸುವುದರ ಜೊತೆಗೆ ಪೊಲೀಸರಿಗೆ ತೂಕದ ಮಿತಿಯನ್ನು ಹಾಕಿದ್ದಾರೆ. 175 ಸೆಂಟಿಮೀಟರ್ ಉದ್ದ ಇರುವವರು 85 ಕೆಜಿ ತೂಕ ಹೊಂದಿರಬಹುದು. 185 ಸೆ.ಮಿ ಉದ್ದ ಇರುವವರು 95 ಕೆಜಿ ತೂಕ ಹೊಂದಿರಬಹುದು. ರಾಜ್ಯಾದ್ಯಂತ ಹತ್ತು ಸಾವಿರಕ್ಕೂ ಅಧಿಕ ಕೆಎಸ್ಆರ್ ಪಿ ಸಿಬ್ಬಂದಿಗಳಲ್ಲಿ ಸುಮಾರು 3,000 ಪೊಲೀಸರು ಹೆಚ್ಚು ತೂಕವನ್ನು ಹೊಂದಿದ್ದಾರೆ.

ಅಲೋಕ್ ಕುಮಾರ್ ಅವರ ಎಚ್ಚರಿಕೆಯ ನಂತರ ಪೊಲೀಸ್ ಸಿಬ್ಬಂದಿಗಳು ತಮ್ಮ ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಉತ್ತಮ ಸೇವೆ ಜೊತೆಗೆ ಸದೃಢ ಆರೋಗ್ಯ ಹೊಂದಿರಬೇಕು ಎಂಬ ಕಾರಣಕ್ಕಾಗಿ 3 ವರ್ಷಗಳ ಹಿಂದೆ ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿತ್ತು. ಮುಖ್ಯಮಂತ್ರಿ ಅಥವಾ ರಾಷ್ಟ್ರಪತಿ ಪದಕ ಪಡೆಯಲು ಪೊಲೀಸರು ತಮ್ಮ ಸಾಧನೆಯ ಜೊತೆಗೆ ಮಾನಸಿಕ ದೈಹಿಕ ಕ್ಷಮತೆಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಹೊಟ್ಟೆ ಬೆಳೆಸಿಕೊಂಡ ಪೊಲೀಸರಿಗೆ ಪ್ರತಿದಿನ ವ್ಯಾಯಾಮ ಪರೇಡ್ ಸೇರಿದಂತೆ ಜಾಗಿಂಗ್ ಹಾಗೂ ಈಜು ಕಡ್ಡಾಯ. ಈ ಬಾರಿ ಐದು ಜನ ಪೊಲೀಸರ ಹೆಸರುಗಳನ್ನು ಮಾತ್ರ ರಾಷ್ಟ್ರಪತಿ ಪದಕಕ್ಕೆ ಶಿಫಾರಸು ಮಾಡಲಾಗಿದೆ. ಒಟ್ಟಿನಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ಅಲೋಕ್ ಕುಮಾರ್ ಅವರು ಪೊಲೀಸರಿಗೆ ನೀಡಿರುವ ಸಂದೇಶಕ್ಕೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿಗಳು ತೂಕ ಕರಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *