ಮನುಷ್ಯನ ಜೀವನದ ಅವಧಿಯಲ್ಲಿ ಅತಿ ದೊಡ್ಡ ಕನಸು ಎಂದರೆ ಸ್ವಂತ ಮನೆ ನಿರ್ಮಾಣ ಮಾಡುವುದು. ಅನುಕೂಲವಂತರು ಹಣ ಕಾಸಿನ ವ್ಯವಸ್ಥೆ ಚೆನ್ನಾಗಿ ಇರುವವರು ಅದನ್ನು ನನಸು ಮಾಡಿಕೊಳ್ಳುವರು. ಆದರೆ ದುರ್ಬಲ ಸ್ಥಿತಿಯಲ್ಲಿ ಇರುವ ಜನರಿಗೆ ಅದು, ತುಂಬ ಕಷ್ಟ ಮತ್ತು ಕನಸು ಕಾಣುವುದು ಮಾತ್ರ ಅವರ ಪಾಲಿಗೆ ಉಳಿದಿರುತ್ತದೆ. ಸಮಾಜದ ಪ್ರತಿ ಒಬ್ಬರಿಗೂ ಒಂದು ಗೌರವಯುತ ವಾಸಸ್ಥಳ ಒದಗಿಸುವುದು ಸರ್ಕಾರದ ಕರ್ತವ್ಯ. ಇದೆ, ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅವಾಸ್ ಯೋಜನೆಯನ್ನು ಜಾರಿಗೆ ತಂದಿದೆ.

ಇದರ ಮಾನದಂಡಗಳು ಏನು ಎಂದು ತಿಳಿಯೋಣ ಬನ್ನಿ :-
2015 ರಲ್ಲಿ ಆರಂಭವಾದ PMAY-U, ಭಾರತದ ನಗರ ಪ್ರದೇಶಗಳಲ್ಲಿ ವಾಸ ಇರುವ ಎಲ್ಲ ಅರ್ಹ ಫಲಾನುಭವಿಗಳಿಗೆ 2022ರ ಸಮಯಕ್ಕೆ ಪಕ್ಕ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿತ್ತು. ಈ ಯೋಜನೆಯು ಕೊಳಗೇರಿ ನಿವಾಸಿಗಳನ್ನು ಒಳಗೊಂಡಂತೆ, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ( EWS ಮತ್ತು LIG ) ಗಮನ ಹರಿಸುತ್ತದೆ. ಈ ಯೋಜನೆಯನ್ನು 31/12/2024ರ ತನಕ ವಿಸ್ತಾರ ಮಾಡಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) ಕೆಳಗೆ ಪ್ರತಿ ಮನೆಗೆ ಅಡಿಗೆ ಮನೆ, ಶೌಚಾಲಯ, ನೀರು ಮತ್ತು ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಈ ಮಿಷನ್ (mission) ಮಹಿಳಾ ಸದಸ್ಯರ ಹೆಸರಿನಲ್ಲಿ, ಸಂಯುಕ್ತ ಅಥವಾ ಏಕೈಕ ಮಾಲೀಕತ್ವವನ್ನು ನೀಡುವುದರ ಮೂಲಕ ಮಹಿಳಾ ಸಬಲೀಕರಣವನ್ನು ಉತ್ತೇಜಿಸುತ್ತದೆ.

ಮತ್ತಷ್ಟು SC, ST, OBC, ಒಂಟಿ ಮಹಿಳೆಯರು, ಟ್ರಾನ್ಸ್’ಜೆಂಡರ್’ಗಳು, ವಿಕಲಚೇತನರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಸಮಾಜದ ದುರ್ಬಲ ವರ್ಗಗಳಿಗೆ ಆದ್ಯತೆ ನೀಡಲಾಗಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ (PMAY) ಕೆಳಗೆ ಮನೆಗಳನ್ನು ಪಡೆದ ಫಲಾನುಭವಿಗಳು ಅವರ ನಿವಾಸಗಳಲ್ಲಿ ಭದ್ರತೆ, ಹೆಮ್ಮೆಯನ್ನು ಅನುಭವಿಸುತ್ತಾರೆ ಮತ್ತು ಗೌರವಾಯುತ ಬದುಕನ್ನು ನಡೆಸಲು ಈ ಯೋಜನೆ ಪ್ರೋತ್ಸಾಹ ನೀಡುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಕೆಳಗೆ ಕಡಿಮೆ ಬಡ್ಡಿ ದರದಲ್ಲಿ 20 ವರ್ಷಗಳ ತನಕ ಸಾಲವನ್ನು (loan) ಪಡೆಯುವರು. ಪಡೆಯುವ ಸಾಲಕ್ಕೆ (loan) ಕೇವಲ 6.50% ಬಡ್ಡಿಯನ್ನು ಪಾವತಿಸಬೇಕು.

ಅಂಗವಿಕಲರು ಅಥವಾ ಹಿರಿಯ ನಾಗರಿಕರಂತಹ ನಿರ್ದಿಷ್ಟ ಗುಂಪುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲಗಳನ್ನು ನೀಡಲಾಗುತ್ತದೆ. ಬಯಲು ಸೀಮೆಯಲ್ಲಿ ನೆಲೆಸಿರುವ ಅರ್ಹ ನಾಗರಿಕರಿಗೆ ₹1,20,000 ದವರೆಗೂ ನೆರವು ಸಿಗುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ವಾಸ ಮಾಡುವ ಜನರಿಗೆ ₹1,30,000 ದವರೆಗೂ ಆರ್ಥಿಕ ನೆರವು ಸಿಗುತ್ತದೆ.

ಈ ಯೋಜನೆಯ ಕೆಳಗೆ ಯಾರಾದರೂ ಅವರ ಮನೆಯಲ್ಲಿ ಶೌಚಾಲಯ ನಿರ್ಮಿಸಿಕೊಂಡರೆ ₹12,000 ದವರೆಗೂ ಹೆಚ್ಚುವರಿ ನೆರವು ಸಿಗುತ್ತದೆ. ಯೋಜನೆಯ ಕೆಳಗೆ ಪಡೆಯುವ ಹಣವನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು :-

 • ಒಂದು ಇಲ್ಲವೇ ಎರಡು ಕೋಣೆಗಳು, ಕಚ್ಚಾ ಗೋಡೆಗಳು ಹಾಗು ಕಚ್ಚಾ ವಸ್ತುಗಳನ್ನು ಹೊಂದಿರುವ ಕುಟುಂಬದವರು.
 • 25 ವರ್ಷಕ್ಕಿಂತ ಮೇಲ್ಪಟ್ಟ ಹಾಗು ಅನಕ್ಷರಸ್ಥರಾದ ಕುಟುಂಬದ ಮುಖ್ಯಸ್ಥ.
 • 16 ಹಾಗು 59 ವಯಸ್ಸಿನ ವಯಸ್ಕ ಪುರುಷ ಸದಸ್ಯರನ್ನು ಹೊಂದಿರುವ ಕುಟುಂಬಗಳು.
 • 16 ಹಾಗು 59 ವಯಸ್ಸಿನ ವಯಸ್ಕ ಮಹಿಳಾ ಸದಸ್ಯರನ್ನು ಹೊಂದಿರುವ ಕುಟುಂಬಗಳು.
 • ಯಾವುದೇ ಕೆಲಸ ಮಾಡುವ ಸಾಮರ್ಥ್ಯ ಇಲ್ಲದ ಮತ್ತು ಅಂಗವಿಕಲ ಸದಸ್ಯರನ್ನು ಹೊಂದಿರುವ ಕುಟುಂಬಗಳು.
 • ಭೂಮಿಯನ್ನು ಹೊಂದಿರುವ ಹಾಗು ಸಾಂದರ್ಭಿಕ ಕೆಲಸದ ಮೂಲಕ ಜೀವನೋಪಾಯ ಗಳಿಸುವ ಕುಟುಂಬಗಳು.
  *ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಅಲ್ಪಸಂಖ್ಯಾತರಿಗೆ ಸೇರಿದ ಕುಟುಂಬಗಳು.

ಅರ್ಜಿದಾರರು ಈ ಕೆಳಗಿನ ಬೋಧ್ಯಾತೆಗಳನ್ನು ಸಹ ಹೊಂದಿರಬೇಕು :-

 • ಅರ್ಜಿದಾರರು ಭಾರತೀಯ ನಿವಾಸಿ ಆಗಿರಬೇಕು.
 • ಶಾಶ್ವತ ಮನೆ ಹೊಂದಿರಬಾರದು.
 • ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು.
 • ವಾರ್ಷಿಕ ಆದಾಯ ₹3 ಲಕ್ಷದಿಂದ – ₹6 ಲಕ್ಷದ ನಡುವೆ ಇರಬೇಕು.
 • ಪಡಿತರ ಚೀಟಿ ಇಲ್ಲವೇ BPL ಪಟ್ಟಿಯಲ್ಲಿ ಇರಬೇಕು.
 • ಮತದಾರರ ಪಟ್ಟಿಯಲ್ಲಿ ಹೆಸರು ಇರಬೇಕು.
 • ಮಾನ್ಯ ಗುರುತಿನ ಚೀಟಿಯನ್ನು ಹೊಂದಿರಬೇಕು.

ಅಗತ್ಯ ಇರುವ ದಾಖಲೆಗಳು :-
ಅರ್ಜಿಯ ಪ್ರಕ್ರಿಯೆಯಲ್ಲಿ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು.

 • ಆಧಾರ್ ಕಾರ್ಡ್ (Aadhar card).
 • ಅರ್ಜಿದಾರರ ಫೋಟೋ (photo).
 • ಆದಾಯ ಪುರಾವೆ (Job card or Job card number).
 • ಬ್ಯಾಂಕ್ ಪಾಸ್ ಬುಕ್ (Bank passbook).
 • ಸ್ವಚ್ಛ ಭಾರತ್ ಮಿಷನ್ ನೋಂದಣಿ ಸಂಖ್ಯೆ (Swach Bharat registration number).
 • ಮೊಬೈಲ್ ನಂಬರ್ (Mobile number).

ಆನ್’ಲೈನ್ ಅರ್ಜಿ ಪ್ರಕ್ರಿಯೆ :-
ಪ್ರಧಾನಮಂತ್ರಿ ಆವಾಸ್ ಯೋಜನೆ ( PMAY ) ಕೆಳಗೆ ಆನ್’ಲೈನ್’ನಲ್ಲಿ ಅರ್ಜಿ ಸಲ್ಲಿಸುವ ವಿಧಾನ :

ಅಧಿಕೃತ ವೆಬ್’ಸೈಟ್’ಗೆ ಭೇಟಿ ನೀಡಬೇಕು :
https://pmaymis.gov.in/ಮೆನು ಬಾರ್’ನಲ್ಲಿ ” Awaassoft ” ಮೇಲೆ ಕ್ಲಿಕ್ ಮಾಡಿ.” ಡೇಟಾ ಎಂಟ್ರಿ ಫಾರ್ ಆವಾಸ್ ” ಆಯ್ಕೆ ಮಾಡಿ.ರಾಜ್ಯ ಜಿಲ್ಲೆ ಆಯ್ಕೆ ಮಾಡಿ.ಬಳಕೆದಾರ ಹೆಸರು, ಪಾಸ್’ವರ್ಡ್, ಕ್ಯಾಪ್ಚಾ ( captcha ) ನಮೂದಿಸಿ ಲಾಗಿನ್ ಮಾಡಿ. ವೈಯಕ್ತಿಕ ವಿವರಗಳು, ಬ್ಯಾಂಕ್ ಖಾತೆ ವಿವರಗಳು, ಜಾಬ್ ಕಾರ್ಡ್ ಸಂಖ್ಯೆ, SBM ಸಂಖ್ಯೆ ಮುಂತಾದ ವಿವರವನ್ನು ಭರ್ತಿ ಮಾಡಿ.

ಅರ್ಜಿದಾರರು ಎಲ್ಲಾ ಮಾಹಿತಿ ಶುದ್ಧವಾಗಿ ಭರ್ತಿ ಮಾಡಿದ ನಂತರ, ಫಲಾನುಭವಿಗಳ ಪಟ್ಟಿಯನ್ನು ಈ ಲಿಂಕ್ https://rhreporting.nic.in/netiay/newreport.aspx ನಲ್ಲಿ ಪರಿಶೀಲನೆ ಮಾಡಬಹುದು. ಈ ವಿಧಾನವನ್ನು ಅನುಕರಣೆ ಮಾಡಿ ಪ್ರಧಾನಮಂತ್ರಿ ಆವಾಸ್ ಯೋಜನೆಯ ಕೆಳಗೆ ಮನೆ ಪಡೆಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!