ಕೇಂದ್ರ ಸರ್ಕಾರವು ನಮ್ಮ ದೇಶದ ಜನರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಅನೇಕ ಕಲ್ಯಾಣ ಯೋಜನಗೆಳ ಮೂಲಕ ಬಡವರಿಗೆ, ಉದ್ಯೋಗ ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದೆ. ಇದೀಗ ಇದೇ ಸಾಲಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಕಳೆದ ವರ್ಷ ಪಿಎಮ್ ಮೋದಿ ಅವರು ಜಾರಿಗೆ ತಂದ ಯೋಜನೆ ಇದು. 2023ರ ಸೆಪ್ಟೆಂಬರ್ ನಲ್ಲಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಹೆಸರು ಪಿಎಮ್ ವಿಶ್ವಕರ್ಮ ಯೋಜನೆ ಆಗಿದೆ.

ಈ ಯೋಜನೆಯ ಮೂಲಕ ಸರ್ಕಾರವು ಕುಶಲಕರ್ಮಿಗಳಿಗೆ ಸಾಲ ಸೌಲಭ್ಯ ಒದಗಿಸಿಕೊಡುತ್ತದೆ. 18 ವಿವಿಧ ರೀತಿಯ ಕುಶಲಕರ್ಮಿ ಉದ್ಯೋಗಿಗಳಿಗೆ ಈ ಯೋಜನೆಯ ಮೂಲಕ ಸಬ್ಸಿಡಿ ಸಾಲ ಕೊಡುವುದರ ಜೊತೆಗೆ ಕೌಶಲ್ಯ ತರಬೇತಿಯನ್ನು ಸಹ ಕೊಡುತ್ತದೆ. ಈ ಯೋಜನೆಗೆ ಅರ್ಹತೆ ಪಡೆಯುವ ವ್ಯಕ್ತಿಗಳಿಗೆ, ವಿಶ್ವಕರ್ಮ ಯೋಜನೆಯ ಸರ್ಟಿಫಿಕೇಟ್ ಜೊತೆಗೆ, ಐಡೆಂಟಿಟಿ ಕಾರ್ಡ್ ಕೂಡ ಕೊಡಲಾಗುತ್ತದೆ. ಜೊತೆಗೆ 500 ರೂಪಾಯಿ ಸ್ಟೈಪಂಡ್ ಕೊಡಲಾಗುತ್ತದೆ.

ಇದಷ್ಟೇ ಅಲ್ಲ ₹15,000 ರೂಪಾಯಿಗಳ ಮೌಲ್ಯದ ಟೂಲ್ ಕಿಟ್ ಗಳನ್ನು ಸಹ ವಿತರಣೆ ಮಾಡಲಾಗುತ್ತದೆ. ಜೊತೆಗೆ 5% ಬಡ್ಡಿಯಲ್ಲಿ 3 ಲಕ್ಷ ಸಾಲವನ್ನು ಕೂಡ ಕೊಡಲಾಗುತ್ತದೆ. ನೀವು ಬೇರೆ ರೀತಿಯಲ್ಲಿ ಬ್ಯಾಂಕ್ ಇಂದ ಸಾಲ ಪಡೆದರೆ, 13% ವರೆಗು ಬಡ್ಡಿ ವಿಧಿಸುತ್ತದೆ. ಆದರೆ ವಿಶ್ವಕರ್ಮ ಯೋಜನೆಯಲ್ಲಿ ನಿಮಗೆ 8% ಇಂದ ಸಾಲ ಸಿಗುತ್ತದೆ. ಮೊದಲಿಗೆ 1 ಲಕ್ಷ ಸಾಲ ಸಿಗಲಿದ್ದು, 18 ತಿಂಗಳುಗಳ ಒಳಗೆ ಸಾಲ ತೀರಿಸಿದರೆ, ಮತ್ತೆ 2 ಲಕ್ಷ ಸಾಲ ಸಿಗುತ್ತದೆ. ಮರುಪಾವತಿ 30 ತಿಂಗಳುಗಳ ಸಮಯ ಸಿಗುತ್ತದೆ. ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯ ಯೋಜನೆ ಆಗಿದೆ..

ಅಕ್ಕಸಾಲಿಗರು, ವಿಗ್ರಹ ತಯಾರಕರು, ಚಮ್ಮಾರರು, ಗಾರೆ ಕೆಲಸಗಾರರು, ಜಾನಪದ ಗೊಂಬೆ ತಯಾರಕರು, ಕ್ಷೌರಿಕರು, ಮಾಲೆ ತಯಾರಕರು, ಟೈಲರ್‌ಗಳು, ಬಡಗಿಗಳು, ದೋಣಿ ತಯಾರಕರು, ಆಯುಧ ತಯಾರಕರು, ಕಬ್ಬಿಣದ ಉಪಕರಣ ತಯಾರಕರು, ಕಮ್ಮಾರರು, ಬೀಗ ಹಾಕುವವರು, ಕುಂಬಾರರು, ಮೀನು ಬಲೆ ತಯಾರಕರು ಇವರೆಲ್ಲರೂ ಸಹ ವಿಶ್ವಕರ್ಮ ಯೋಜನೆಗೆ ಅರ್ಹತೆ ಪಡೆಯುತ್ತಾರೆ. ಈಗಾಗಲೇ ಕರಕುಶಲ ಕೆಲಸ ಮಾಡುತ್ತಿರುವವರು ಕೂಡ ಅರ್ಹತೆ ಪಡೆಯುತ್ತಾರೆ. 18 ವರ್ಷ ತುಂಬಿರುವ ಯಾರೇ ಆದರೂ ಅರ್ಜಿ ಸಲ್ಲಿಸಬಹುದು.

ಹಿಂದಿನ 5 ವರ್ಷಗಳಿಂದ ಸರ್ಕಾರದ ಈ ಥರದ ಯಾವುದೇ ಯೋಜನೆಯಲ್ಲಿ ಸಾಲ ಪಡೆಯದೇ ಇರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎಂದು ನೋಡುವುದಾದರೆ, http://pmvishwakarma.gov.in/ ಈ ವೆಬ್ಸೈಟ್ ಗೆ ಭೇಟಿ ನೀಡಿ. ಫೋನ್ ನಂಬರ್ ಮತ್ತು ಕ್ಯಾಪ್ಚ ಕೋಡ್ ಇಂದ ಲಾಗಿನ್ ಮಾಡಿ, ಅಪ್ಲಿಕೇಶನ್ ಫಾರ್ಮ್ ನಲ್ಲಿ ಕೇಳಿರುವ ಎಲ್ಲಾ ಪ್ರಶ್ನೆಗಳನ್ನು ಸರಿಯಾಗಿ ಫಿಲ್ ಮಾಡಿ. ನಂತರ ಅರ್ಜಿ ಸಲ್ಲಿಸಿ, ಅಧಿಕಾರಿಗಳು ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸುತ್ತಾರೆ. ತರಬೇತಿ ಸಿಗಬೇಕಾದ ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ತರಬೇತಿ ಕೊಡಲಾಗುತ್ತದೆ. ಟ್ರೇನಿಂಗ್ ನಲ್ಲಿ ಅರ್ಹತೆ ಪಡೆಯುವವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ. ಈ ಯೋಜನೆಯ ಸೌಲಭ್ಯವನ್ನು ಎಲ್ಲರೂ ಪಡೆಯಿರಿ.

Leave a Reply

Your email address will not be published. Required fields are marked *