ವಿಜ್ಞಾನ ಮುಂದುವರೆದಂತೆ ಭೂಮಿ ಉಳುಮೆ ಮಾಡಲು ಎತ್ತಿನ ಬದಲಿಗೆ ಟ್ರ್ಯಾಕ್ಟರ್ ಬಂದಿದೆ. ರೈತರಿಗೆ ಆಧುನಿಕ ಸೌಕರ್ಯಗಳು ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಬಂಡವಾಳಕ್ಕೆ ಹಣದ ಕೊರತೆ ಇರುವ ರೈತ ಜನರಿಗೆ ಒಂದು ಸಂತಸದ ಸುದ್ದಿ.
ಟ್ರ್ಯಾಕ್ಟರ್ ಖರೀದಿಸಲು ಹಣ ಇಲ್ಲದ ಜನರಿಗೆ ಸಿಗುತ್ತಿದೆ ಸಬ್ಸಿಡಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೋಸ್ಕರ ವಿವಿಧ ರೀತಿಯ ಬೇರೆ ಬೇರೆ ಯೋಜನೆಗಳನ್ನು ಜಾರಿ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ಮೊದಲೇ ರೈತರಿಗೋಸ್ಕರ ಕಿಸಾನ್ ಯೋಜನೆ ಜಾರಿ ಮಾಡಿದೆ. ಅದರಿಂದ, ರೈತರಿಗೆ ಆರ್ಥಿಕ ಸೌಲಭ್ಯ ಸಹ ನೀಡುತ್ತಿದೆ. ಅದೇ, ರೈತರಿಗೆ ಕೆಲಸ ಸುಲಭ ಆಗಬೇಕು.
ಕೃಷಿಗೆ ಸಂಬಂಧಪಟ್ಟ ಚಟುವಟಿಕೆಗಳನ್ನು ಅತೀ ಬೇಗವಾಗಿ ಪೂರೈಕೆ ಮಾಡಲು ಮತ್ತು ಆಧುನಿಕ ಕೃಷಿ ವಿಧಾನಗಳನ್ನು ಅಡವಳಿಕೆ ಮಾಡಲು ಸರ್ಕಾರ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಕೃಷಿ ಕ್ಷೇತ್ರ ಮುಖ್ಯವಾಗಿ ಬೇರೆ ಬೇರೆ ಉಪಕರಣಗಳನ್ನು ಅಡವಳಿಸಿಕೊಳ್ಳುವ ಮೂಲಕ ಅಭಿವೃದ್ಧಿ ಹೊಂದುತ್ತಿದೆ. ಅದೇ, ರೀತಿ ಕೇಂದ್ರ ಸರ್ಕಾರ ನೂತನ ಯೋಜನೆಯನ್ನು ಜಾರಿ ಮಾಡಿದೆ.
ಯಾವುದು ಆ ನೂತನ ಯೋಜನೆ ಎಂದರೆ?
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಟ್ರ್ಯಾಕ್ಟರ್ ( PM KISAAN TRACTOR ) ಯೋಜನೆಯನ್ನು ಜಾರಿ ಮಾಡಿದೆ. ಈ ಯೋಜನೆಯ ಕೆಳಗೆ ರೈತರಿಗೆ ಯಾವುದೇ ಕಂಪನಿಯ ಟ್ರ್ಯಾಕ್ಟರ್ ಖರೀದಿ ಮಾಡಲು ಅವಕಾಶ ಇದೆ, ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು ಶೇಖಡಾ 50%ರಷ್ಟು ಸಬ್ಸಿಡಿ ದೊರಕುತ್ತದೆ, ದೇಶದ ಎಲ್ಲ ರೈತಾಪಿ ವರ್ಗದ ಜನರಿಗೆ ಈ ಸೌಕರ್ಯ ದೊರಕುತ್ತದೆ.
ರೈತರು ಟ್ರ್ಯಾಕ್ಟರ್ ಖರೀದಿ ಮಾಡಲು ಅರ್ಧದಷ್ಟು ಬೆಲೆಯನ್ನು ಮಾತ್ರ ಪಾವತಿ ಮಾಡಬೇಕು. ಉಳಿದ ಅರ್ಧವನ್ನು ಕೇಂದ್ರ ಸರ್ಕಾರ ಪಾವತಿ ಮಾಡುತ್ತದೆ. ಈ ಯೋಜನೆಯು ರೈತರನ್ನು ಸ್ವವಲಂಬಿಗಳನ್ನಾಗಿ ಮಾಡುತ್ತದೆ ಹಾಗೂ ಆಧುನಿಕ ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ರೈತರಿಗೆ ಇನಷ್ಟು ಉತ್ತೇಜನ ನೀಡುತ್ತದೆ.
ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ರೈತನಿಗೆ ಕನಿಷ್ಠ ಕೃಷಿ ಆದರೂ ಆಗಬೇಕು. ಅರ್ಜಿ ಸಲ್ಲಿಕೆ ಮಾಡುವ ವ್ಯಕ್ತಿ ಭಾರತೀಯ ಪ್ರಜೆ ಆಗಿದ್ದರೆ ರೈತರು ಟ್ರ್ಯಾಕ್ಟರ್ ಖರೀದಿ ಮಾಡಲು ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸುವವರ ವಯಸ್ಸು 18 ವರ್ಷಕ್ಕಿಂತ ಹೆಚ್ಚಾಗಿ ಇರಬೇಕು ಹಾಗು 60 ವರ್ಷಕ್ಕಿಂತ ಹೆಚ್ಚಾಗಿ ಇರಬಾರದು. ಟ್ರ್ಯಾಕ್ಟರ್ ಖರೀದಿ ಮಾಡುವ ರೈತರ ಹೆಸರಿನಲ್ಲಿ ಏನಾದರೂ ಕೃಷಿ ಭೂಮಿ ಇದ್ದರೆ, ಅವರು ಅರ್ಜಿ ಸಲ್ಲಿಕೆ ಮಾಡಬಹುದು.
ಈ ದಾಖಲೆಗಳ ಅಗತ್ಯ ಇರುತ್ತದೆ:-
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ಮಾಹಿತಿ
- ಪ್ಯಾನ್ ಕಾರ್ಡ್
- ಮತದಾರರ ಗುರುತಿನ ಚೀಟಿ ( Voter ID )
- ಭೂ ದಾಖಲೆಗಳು
- ಫೋಟೋ
- ಇತ್ಯಾದಿ ದಾಖಲೆಗಳು ಬೇಕಾಗುತ್ತದೆ.
ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ ಯೋಜನೆಗೆ ಅರ್ಜಿಯನ್ನು ಕೆಳಗೆ ನೀಡಿರುವ ವೆಬ್ಸೈಟ್ ಮೂಲಕ ಸಲ್ಲಿಕೆ ಮಾಡಬಹುದು www.pmkisan.gov.in ಹಾಗು pmkisan.nic.in ವೆಬ್ಸೈಟ್ ಮುಖಾಂತರ ಕೂಡ ಸಲ್ಲಿಕೆ ಮಾಡಬಹುದು.