Plant medicine: ನಿಮಗೆ ಲಕ್ವ ಹೊಡೆದಿದ್ದರೆ ಅದಕ್ಕೆ ಒಂದು ಉತ್ತಮವಾದ ನಾಟಿ ಔಷಧೀಯ (Plant medicine) ಬಗ್ಗೆ ಹೇಳುತ್ತೇವೆ. ನಾವು ನೀಡಿರುವಂತಹ ಮಾರ್ಗದರ್ಶನವನ್ನು ಪಾಲಿಸಿದರೆ ಅತಿ ಶೀಘ್ರದಲ್ಲಿ ಲಕ್ವ ಹೊಡೆದಿರುವ ಭಾಗ ಸರಿಯಾಗುತ್ತದೆ. ಲಕ್ವ ಕಾಯಿಲೆ ಸರ್ವೇಸಾಮಾನ್ಯವಾಗಿದೆ ವೃದ್ಧರಿಗಷ್ಟೇ ಅಲ್ಲದೆ ಯುವಕರಿಗೂ ಈ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಜನರು ಈ ಕಾಯಿಲೆಗೆ ಆಸ್ಪತ್ರೆ ಔಷಧಿಗಿಂತ ನಾಟಿ ಔಷಧಿಯನ್ನು ಹೆಚ್ಚು ಬಳಸಲು ಇಷ್ಟಪಡುತ್ತಾರೆ. ಲಕ್ವ ಹೊಡೆದು ಮೂರು ತಿಂಗಳಾದರೂ ಸರಿ ಮೂರು ವರ್ಷವಾದರೂ ಅದಕ್ಕೆ ನಾಟಿ ಔಷಧಿಯನ್ನು ನೀಡುತ್ತಿದ್ದಾರೆ ಅವರು ವಂಶ ಪಾರಂಪರ್ಯವಾಗಿ ಈ ಔಷಧಿಯನ್ನು ಮಾಡಿ ಜನರಿಗೆ ನೀಡುತ್ತಿದ್ದಾರೆ.
ಗುಲ್ಬರ್ಗ (Gulbarga) ಜಿಲ್ಲೆಯ ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ ನಾಟಿವೈದ್ಯ ನರಸಮ್ಮ ಲಕ್ವಾಗೆ ಔಷಧಿಯನ್ನು ನೀಡುತ್ತಾಳೆ. ಇವರಲ್ಲಿ ಔಷಧಿ ಪಡೆದವರು ಎಷ್ಟೋ ಜನ ಗುಣಮುಖರಾಗಿರುವ ಉದಾರಣೆಯು ಕೂಡ ಇದೆ ಹೊರ ರಾಜ್ಯದಿಂದಲೂ ಕೂಡ ಇವರ ಔಷಧಿಗಾಗಿ ಬರುತ್ತಾರೆ. ನಿಮಗೂ ಈ ರೀತಿಯ ಸಮಸ್ಯೆ ಇದ್ದರೆ ನೀವು ಒಮ್ಮೆ ಭೇಟಿ ನೀಡಿ.
ಲವಂಗ, ಮೆಣಸು, ಏಲಕ್ಕಿ, ಜೀರಿಗೆ, ರಸ ಕಪೂರ್, ಎವನ್, ಕಾಗದಬಂದ್, ನಾಗರಾಶಿ, ತಾನ್ ಮಖಾನ್ ಇವುಗಳ ಜೊತೆಗೆ ಕಾಡಿನಿಂದ ಹುಡುಕಿ ತಂದ ಗಿಡಮೂಲಿಕೆಗಳಿಂದ ಇವರು ಔಷಧಿಯನ್ನು ತಯಾರಿಸಿ ಉಂಡೆಗಳನ್ನಾಗಿ ಮಾಡಿಕೊಡುತ್ತಾರೆ. ಮೊದಲಿಗೆ ಔಷಧಿಗಾಗಿ ಬಂದವರಿಗೆ 10 ದಿನಕ್ಕೆ 20 ಉಂಡೆಗಳನ್ನು ನೀಡುತ್ತಾರೆ ಅದನ್ನು ಸೇವಿಸಿದ ನಂತರ ಲಕ್ವಾ ಸ್ವಲ್ಪ ಕಮ್ಮಿ ಆಗಿದ್ದರೆ ಮತ್ತೆ ಬರಲು ಹೇಳುತ್ತಾರೆ ಆಗ ಮತ್ತೆ 10 ಉಂಡೆಗಳನ್ನು ಕೊಡುತ್ತಾರೆ ಅದನ್ನು ಸೇವಿಸಿದರೆ ಮೂರು ತಿಂಗಳ ಒಳಗೆ ನಿಮಗೆ ಈ ಕಾಯಿಲೆ ಸಂಪೂರ್ಣವಾಗಿ ದೂರವಾಗುತ್ತದೆ.
ಅವರು ಒಂದು ಚೂರ್ಣವನ್ನು ಕೊಡುತ್ತಾರೆ ಅದನ್ನು ನೀವು ನಿಮಗೆ ಲಕ್ವ ಹೊಡೆದಿರುವ ಭಾಗಕ್ಕೆ ಲೇಪನ ಮಾಡಬೇಕು. ಹೀಗೆ ಮೂರು ತಿಂಗಳು ಮಾಡುವುದರಿಂದ ಸಂಪೂರ್ಣವಾಗಿ ಗುಣಮುಖರಾಗುತ್ತೀರಿ. ಅಷ್ಟೇ ಅಲ್ಲದೆ ಕೆಲವು ಪಥ್ಯವನ್ನು ಮಾಡಬೇಕಾಗುತ್ತದೆ ಕಿತ್ತಳೆ ಸೇಬು ಮುಸುಂಬಿ ಇಂತಹ ಹಣ್ಣುಗಳನ್ನು ಸೇವಿಸಬಾರದು ಅಷ್ಟೇ ಅಲ್ಲದೆ ಹಾಲಿಗೆ ಸಂಬಂಧಿಸಿದ ಯಾವುದೇ ಪದಾರ್ಥವನ್ನು ಸ್ವೀಕರಿಸಬಾರದು ಅಂದರೆ ಹಾಲು,ಮೊಸರು, ಬೆಣ್ಣೆ ಆದರೆ ಮಾಂಸಾಹಾರಿ ಆಹಾರ ಪದಾರ್ಥಕ್ಕೆ ಯಾವುದೇ ಪಥ್ಯ ಇರುವುದಿಲ್ಲ.