Piles Remedies Food: ನೀವು ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಇದಕ್ಕೆ ಸರಿಯಾದಂತಹ ಔಷಧಿ ಬಗ್ಗೆ ನಿಮಗೆ ಮಾಹಿತಿ ಬೇಕೆಂದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಸರಳವಾಗಿ ಮೂಲವ್ಯಾಧಿ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂದು ನಾವು ಇಲ್ಲಿ ತಿಳಿಸಿ ಕೊಡುತ್ತಿದ್ದೇವೆ.
ಮೂಲವ್ಯಾದಿ ಸಮಸ್ಯೆಯನ್ನು ನೀವು ಎಲ್ಲೆಡೆ ನೋಡಬಹುದು ನಿಮ್ಮ ಸ್ನೇಹಿತರಿಗೆ ಅಥವಾ ಕುಟುಂಬದಲ್ಲೂ ಈ ರೀತಿ ಸಮಸ್ಯೆ ಇರುವುದನ್ನು ಕೇಳಿರುತ್ತೀರಾ. ಸರಿಯಾದ ಆರೋಗ್ಯ ಕ್ರಮ ಇಲ್ಲದಿದ್ದರೆ ಅಥವಾ ಯಾವಾಗಲೂ ಕುಳಿತುಕೊಂಡು ಕೆಲಸ ಮಾಡುವುದು ಹಾಗೂ ದೇಹದ ಉಷ್ಣತೆ ಹೆಚ್ಚಾದಾಗ ಇನ್ನು ಕೆಲವರಿಗೆ ವಂಶಪಾರಂಪರ್ಯವಾಗಿ ಈ ಸಮಸ್ಯೆ ಬಂದಿರುತ್ತದೆ. ದೈಹಿಕವಾಗಿ ಕಾಡುವುದಲ್ಲದೆ ಮಾನಸಿಕವಾಗಿ ಕೂಡ ಬಹಳ ಕಿರಿಕಿರಿಯನ್ನು ಉಂಟು ಮಾಡುತ್ತದೆ.
ಮೂಲವ್ಯಾಧಿ ಬರದಂತೆ ಕಾಪಾಡಿಕೊಳ್ಳಿ ಮತ್ತು ಸರಿಯಾದ ಆಹಾರ ಹಾಗೂ ನೀರನ್ನು ಜಾಸ್ತಿ ಕುಡಿಯಿರಿ. ಹೊರಗಿನ ಜಂಕ್ ಫುಡ್ಸ್ ತಿನ್ನುವುದನ್ನು ಕಡಿಮೆ ಮಾಡಿ ಆಗ ನೀವು ಅನೇಕ ರೋಗಗಳು ಬರದಂತೆ ತಡೆಯಬಹುದು. ಮೂಲವ್ಯಾಧಿ ಎಂದರೆ ಗುದದ್ವಾರದಲ್ಲಿ ಉಂಟಾಗುವ ಗಂಟುಗಳಂತಹ ರಚನೆಗಳಾಗಿವೆ. ಗುದದ್ವಾರದಲ್ಲಿರುವ ರಕ್ತನಾಳಗಳ ಮೇಲೆ ನಿರಂತರವಾಗಿ ಒತ್ತಡ ಬಿದ್ದಾಗ ಅವು ಬಾತು ಕೊಳ್ಳುತ್ತವೆ. ಮಲವಿಸರ್ಜಿಸುವಾಗ ತುರಿಕೆ ಉಂಟಾಗುವುದು, ನೋವು ಅನುಭವಿಸುವುದು , ರಕ್ತಸ್ರಾವ ಮುಂತಾದವು ಮೂಲವ್ಯಾಧಿಯ ಲಕ್ಷಣಗಳಾಗಿವೆ.
Piles Remedies Food
ಈ ಮೂಲವ್ಯಾಧಿ ಕಾಯಿಲೆಗೆ ನೀವು ಶಸ್ತ್ರಚಿಕಿತ್ಸೆ ಮಾಡಿಸಬೇಕೆಂದಿಲ್ಲ ಸರಳವಾಗಿ ಈ ಕಾಯಿಲೆಯಿಂದ ಗುಣಪಡಿಸಿಕೊಳ್ಳಲು ಒಂದು ಒಳ್ಳೆಯ ಮಾರ್ಗವನ್ನು ನಾವು ಇಲ್ಲಿ ತಿಳಿಸುತ್ತೇವೆ. ಅದು ಏನೆಂದರೆ ಮೂಲವ್ಯಾಧಿ ಇದ್ದಂತಹ ವ್ಯಕ್ತಿ ಪ್ರತಿದಿನ ಎಳನೀರಲ್ಲಿ ಒಂದು ಚಮಚ ಜೀರಿಗೆ ಹಾಕಿ ಅದನ್ನು ಮಿಕ್ಸ್ ಮಾಡಿ ರಾತ್ರಿ ಪೂರ್ತಿ ಮುಚ್ಚಿಡಬೇಕು ಜೀರಿಗೆ ಸಂಪೂರ್ಣವಾಗಿ ನೆನೆಯಬೇಕು ನಂತರ ಮರುದಿನ ಬೆಳಿಗ್ಗೆ ಅದನ್ನು ಶೋಧಿಸಿ ಅದನ್ನು ಕಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಈ ರೀತಿಯಾಗಿ 1 ತಿಂಗಳು ಮಾಡಿದರೆ ಮೂಲವ್ಯಾಧಿ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ಕೆಲವರು ಶಸ್ತ್ರಚಿಕಿತ್ಸೆಗೆ ಹೆದರುತ್ತಾರೆ ಅಂತವರಿಗೆ ಇದು ಬಹಳ ಉಪಯುಕ್ತವಾಗಿದೆ ಎಳೆನೀರಿನಲ್ಲಿ ಜೀರಿಗೆ ಹಾಕಿ ಕುಡಿಯುವುದರಿಂದ ಮೂಲವ್ಯಾಧಿ ಅಷ್ಟೇ ಅಲ್ಲದೆ ಯಾವುದೇ ರೀತಿಯ ಜೀರ್ಣಕ್ರಿಯೆ ತೊಂದರೆ ಇದ್ದರೂ ಅದು ಸಂಪೂರ್ಣವಾಗಿ ಕಡಿಮೆಯಾಗುತ್ತದೆ ಹಾಗೂ ಇದು ದೇಹಕ್ಕೆ ತಂಪು ನೀಡುತ್ತದೆ. ನೀವು ಕೂಡ ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಮನೆ ಮದ್ದು ಉಪಯೋಗಿಸಿ ಹಾಗೂ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೂ ಕೂಡ ಈ ಮನೆ ಮದ್ದಿನ ಔಷಧಿಯ ಬಗ್ಗೆ ತಿಳಿಸಿ. (ಇದನ್ನೂ ಓದಿ) Ayurvedic Tips: ಈ ಬಿಳಿ ತೊನ್ನು ಸಮಸ್ಯೆಗೆ ರಾಮಬಾಣ ಈ ಕಾಡು ಕೊತ್ತಂಬರಿ ಸೊಪ್ಪು