ವಾಹನಗಳ ಓಡಾಟಕ್ಕೆ ಮುಖ್ಯವಾಗಿ ಬೇಕಾಗಿರುವುದು ಪೆಟ್ರೋಲ್ ಮತ್ತು ಡೀಸೆಲ್. ಪ್ರತಿಯೊಂದು ವ್ಯವಹಾರಗಳಲ್ಲಿಯೂ ವಾಹನ ಅಗತ್ಯವಾಗಿ ಬೇಕಾಗುತ್ತದೆ. ವಾಹನ ಚಲನೆಗೆ ಪೆಟ್ರೋಲ್ ಅವಶ್ಯಕವಾಗಿದೆ. ಆದರೆ ಪೆಟ್ರೋಲ್ ನ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಲಾಕ್ ಡೌನ್ನ್ನಲ್ಲಿ ಹಣದುಬ್ಬರದಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಮತ್ತೆ ಹೆಚ್ಚಿಸಲಾಗಿದೆ. ಇದರೊಂದಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇಂದು ಹೊಸ ದಾಖಲೆಯನ್ನು ನಿರ್ಮಿಸಿವೆ. ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಇತರ ಸೇವೆಗಳ ಮೇಲೂ ಪರಿಣಾಮ ಬೀರುತ್ತವೆ. ಆದ್ದರಿಂದ ನಾವು ಇಲ್ಲಿ ಪೆಟ್ರೋಲ್ ನ ಏರಿಕೆಗೆ ಮುಖ್ಯ ಕಾರಣವೇನೆಂಬುದನ್ನು ತಿಳಿದುಕೊಳ್ಳೋಣ.
ಸುಮಾರು ಹತ್ತು ವರ್ಷಗಳ ಹಿಂದೆ ಅಂದರೆ 2010ರಲ್ಲಿ ಪೆಟ್ರೋಲ್ ನ ಬೆಲೆ ಒಂದು ಲೀಟರ್ ಗೆ 60 ರೂ ಇತ್ತು. ಆದರೆ ಈಗ ಹಲವಾರು ನಗರಗಳಲ್ಲಿ ಪೆಟ್ರೋಲ್ ನ ಬೆಲೆ 100 ರೂ ಗಿಂತಲೂ ಹೆಚ್ಚಾಗಿದೆ. ಹತ್ತು ವರ್ಷಗಳಲ್ಲಿ ಸರಿಸುಮಾರು ಎಲ್ಲಾ ವಸ್ತುಗಳಿಗೂ ಬೆಲೆ ಏರಿಕೆಯಾಗಿದೆ. ಆದರೆ ಪೆಟ್ರೋಲ್ ಬೆಲೆ ಏರಿಕೆ ಕಾರಣವಾಗಿಲ್ಲ. ಹತ್ತು ವರ್ಷಗಳ ಹಿಂದೆ ಪೆಟ್ರೋಲ್ ಬೆಲೆ ಕಡಿಮೆ ಇತ್ತು. ಆದರೂ ಆಯಿಲ್ ನ ಬೆಲೆ ಬಂದು ಬ್ಯಾರೆಲ್ ಗೆ 90ಡಾಲರ್ ಇತ್ತು. ಆದರೂ ನಮಗೆ 60 ರೂಪಾಯಿಗೆ ಪೆಟ್ರೋಲ್ ಬರುತ್ತಿತ್ತು. ಈಗ 1ಲೀಟರ್ ಆಯಿಲ್ ನ ಬೆಲೆ 72 ಡಾಲರ್ ಗೆ ಇಳಿಕೆಯಾಗಿದ್ದರೂ ಸಹ ಪೆಟ್ರೋಲ್ ನ ಬೆಲೆ ನೂರು ರೂಪಾಯಿನ ಮೇಲೆ ಏರಿಕೆ ಕಂಡಿದೆ.
ಮೊದಲನೇದಾಗಿ ತಿಳಿದುಕೊಳ್ಳುವ ವಿಷಯವೇನೆಂದರೆ ನಮ್ಮದು ಆಯಿಲ್ ನಿಕ್ಷೇಪವಿರುವ ರಾಷ್ಟ್ರವಲ್ಲ ಮತ್ತು ಪೆಟ್ರೋಲ್ಗೆ ಪರಾವಲಂಬಿ ರಾಷ್ಟ್ರವಾಗಿದೆ. ಬೇರೆ ರಾಷ್ಟ್ರದಿಂದ ತಂದ ಆಯಿಲ್ ಅನ್ನು ಅನೇಕ ಫಿಲ್ಟರ್ ಪ್ರೊಸೀಜರ್ ನ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಮುಂತಾದ ಇಂಧನಗಳನ್ನು ಆಗಿ ಪರಿವರ್ತಿಸಿ ಮಾರಾಟ ಮಾಡಬೇಕು. ಹೀಗಾಗಿ ಎಲ್ಲಿಂದ ಪೆಟ್ರೋಲನ್ನು ತರಿಸಿಕೊಳ್ಳುತ್ತೇವೇಯೋ ಅಲ್ಲಿನ ಬ್ಯಾರೆಲ್ ರೇಟ್ ವ್ಯತ್ಯಯವಾದಂತೆ ಭಾರತದಲ್ಲಿ ಪೆಟ್ರೋಲ್ ದರ ವ್ಯತ್ಯಯ್ಯವಾಗುತ್ತದೆ. ಕೊರೋನಾ ಅಲೆಯಿಂದ ಲಾಕ್ಡೌನ್ ಆದ ಪರಿಣಾಮ ಬ್ಯಾರೆಲ್ ನ ಧರ ಕುಸಿದಿದೆ. ಇದರಿಂದಾಗಿ ಅನೇಕ ದೇಶಗಳಲ್ಲಿ ಪೆಟ್ರೋಲ್ ನ ಬೆಲೆ ಕುಸಿಯಿತು. ಆದರೆ ಭಾರತದಲ್ಲಿ ಮಾತ್ರ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಸೌದಿ ರಾಷ್ಟ್ರದಿಂದ ಬೇರಲ್ಗೆ ರೇಟನ್ನು ಫಿಕ್ಸ್ ಮಾಡಿ ಭಾರತವು ಖರೀದಿ ಮಾಡುತ್ತದೆ. ಭಾರತವು ಲಾಕ್ಡೌನ್ ಸಮಯದಲ್ಲಿ ತನ್ನ ತೆರಿಗೆಯನ್ನು ಹೆಚ್ಚು ಮಾಡಿದರ ಪರಿಣಾಮ ಪೆಟ್ರೋಲ್ ನ ಬೆಲೆ ಏರಿಕೆಯಾಗಿದೆ. ಲಾಕ್ಡೌನ್ ಆದ ಸಂದರ್ಭದಲ್ಲಿ ಯಾವ ರಾಷ್ಟ್ರವೂ ಕೂಡ ಪೆಟ್ರೋಲನ್ನು ಖರೀದಿ ಮಾಡದೆ ಪೆಟ್ರೋಲ್ ಉತ್ಪನ್ನ ಮಾಡುವ ದೇಶಗಳು ತುಂಬಾ ನಷ್ಟವನ್ನು ಅನುಭವಿಸಿದೆ. ಇದರ ಪರಿಣಾಮವಾಗಿ ಕಡಿಮೆ ದರದಲ್ಲಿ ಪೆಟ್ರೋಲನ್ನು ಮಾರಬೇಕಾಗುತ್ತದೆ. ಈ ಸಮಯದಲ್ಲಿಯೇ ರಿಫೈನರಿ ಗಳ ಬಾಡಿಗೆ ಮತ್ತು ಅದರ ಪ್ರೊಸೀಜರ್ಗೆ ತಗಲುವ ವೆಚ್ಚ ತಾವೇ ಕೈಯಿಂದ ಹಾಕಿ ಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಭಾರತವು ಹೆಚ್ಚೆಚ್ಚು ಬ್ಯಾರಲ್ ಅನ್ನು ಖರೀದಿ ಮಾಡಿತು. ಈ ಸಂದರ್ಭದಲ್ಲಿ ಭಾರತ ಸರ್ಕಾರ ಪೆಟ್ರೋಲ್ ನ ಮೇಲಿನ ತೆರಿಗೆಯನ್ನು ಜಾಸ್ತಿ ಮಾಡುತ್ತದೆ. ಇದರ ಪರಿಣಾಮ ಪೆಟ್ರೋಲ್ನ ಬೆಲೆ ಜಾಸ್ತಿ ಆಗಿದೆ.