peanuts benefits for Health ನೆನೆಸಿದ ಬಾದಾಮಿ ಹೇಗೆ ಆರೋಗ್ಯಾಭಿವೃದ್ಧಿಗೆ ಸಹಾಯವೋ ಅದೇ ರೀತಿ ನೆನೆಸಿದ ಶೇಂಗಾ ತಿನ್ನುವುದರಿಂದಲೂ ಹಲವು ಆರೋಗ್ಯಕರ ಲಾಭಗಳಿದೆ. ಹಾಗಾದ್ರೆ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.
ಮಧುಮೇಹದಿಂದ ದೂರವಿರಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಸೇವಿಸಿ. (Eat soaked peanuts) ಇದರಿಂದ ಬ್ಲಡ್ ಶುಗರ್ ಲೆವಲ್ (BP sugar level) ಕಂಟ್ರೋಲಿನಲ್ಲಿರುತ್ತದೆ. ನೆನೆಸಿಟ್ಟ ಶೇಂಗಾ ಸೇವನೆಯಿಂದ ಸಂಧಿವಾತದ ಸಮಸ್ಯೆ ದೂರವಾಗುತ್ತದೆ. ಅಲ್ಲದೇ ಮೂಳೆ ಗಟ್ಟಿಯಾಗಿರುತ್ತದೆ. ವಿದ್ಯಾರ್ಥಿಗಳು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ.
ಇದನ್ನೂ ಓದಿ..ಸಪೋಟ ಹಣ್ಣಿನಲ್ಲಿದೆ ಹೇರಳ ಅರೋಗ್ಯ, ಇಂತವರು ಮಿಸ್ ಮಾಡದೇ ತಿನ್ಬೇಕು ಯಾಕೆ ಗೊತ್ತಾ
ಬಡವರ ಬಾದಾಮಿ ಅಂತಾನೇ ಪ್ರಚಲಿತವಾಗಿರೋ ಶೇಂಗಾ ಬೀಜದ ಸೇವನೆ ಆರೋಗ್ಯಕ್ಕೆ ತುಂಬಾನೇ ಲಾಭಕಾರಿ ಅದರಲ್ಲೂ ಚಳಿಗಾಲದಲ್ಲಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ತಿನ್ನುವುದು ಉತ್ತಮ ನೆನೆಸಿಟ್ಟ ಶೇಂಗಾ ಸೇವನೆಯಿಂದ ರಕ್ತ ಸಂಚಲನೆ ಸರಾಗವಾಗಲಿದ್ದು, ಹೃದಯ ಸಂಬಂಧಿ ಖಾಯಿಲೆಯಿಂದ ದೂರವಿರಿಸುತ್ತದೆ. ಪಚನಕ್ರಿಯೆ ಸರಿಯಾಗಿರಬೇಕು ಹೊಟ್ಟೆಗೆ ಸಂಬಂಧಿಸಿದ ರೋಗಗಳು ಬಾಧಿಸಬಾರದು ಎಂದಾದರೆ ನೆನೆಸಿಟ್ಟ ಶೇಂಗಾ ಕಾಳು ಸೇವಿಸಿ.
ಚಳಿಗಾಲದಲ್ಲಿ ನೆನೆಸಿಟ್ಟ ಶೇಂಗಾ ಸೇವಿಸುವುದರಿಂದ ದೇಹಕ್ಕೆ ಅಗತ್ಯವಿರುವ ಉಷ್ಣತೆ ದೊರಕುವುದಲ್ಲದೇ ಶಕ್ತಿಯುತವಾಗಿರಲು ಸಹಾಯವಾಗುತ್ತದೆ. ನೆನೆಸಿಟ್ಟ ಶೇಂಗಾ ತಿನ್ನುವುದರಿಂದ ಬಿಪಿ ಕಂಟ್ರೋಲಿನಲ್ಲಿರುತ್ತದೆ ಜಿಮ್ಗೆ ಹೋಗುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ಶೇಂಗಾ ಬೀಜದ ಸೇವನೆ ಮಾಡಬೇಕು.
ಇದನ್ನೂ ಓದಿ.ಕಪ್ಪು ಬೆಲ್ಲ ತಿನ್ನೋದ್ರಿಂದ ಕೂದಲು ಉದುರುವ ಸಮಸ್ಯೆ ಅಷ್ಟೇ ಅಲ್ಲ, ಹತ್ತಾರು ಲಾಭಗಳಿವೆ
ಇದರಲ್ಲಿ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಇರುವುದರಿಂದ ಬಾಡಿ ಬಿಲ್ಡ್ ಮಾಡುವಲ್ಲಿ ಸಹಾಯವಾಗುತ್ತದೆ. ಶೇಂಗಾ ಕಾಳಿನಲ್ಲಿ ಒಮೇಗಾ-3 ಇರುವುದರಿಂದ ಇದರ ಸೇವನೆ ತ್ವಚೆಯ ಆರೋಗ್ಯ ಕಾಪಾಡುವುದಕ್ಕೆ ಸಹಕಾರಿಯಾಗಿದೆ ನೆನಪಿರಲಿ ಪ್ರತಿನಿತ್ಯ 15ರಿಂದ 20 ನೆನೆಸಿಟ್ಟ ಶೇಂಗಾ ಬೀಜಗಳನ್ನ ಸೇವಿಸಿ. ಅದಕ್ಕೂ ಹೆಚ್ಚು ಸೇವಿಸದಿರಿ. ಅತಿಯಾದರೆ ಅಮೃತವು ವಿಷ ಅನ್ನೋದು ನೆನಪಿರಲಿ