ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BNPL) ಇಲ್ಲಿ ಖಾಲಿ ಇರುವಂತಹ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭ ಆಗಿದ್ದು , ಆಸಕ್ತಿ ಉಳ್ಳವರು ಮತ್ತು ಅರ್ಹತೆ ಉಳ್ಳವರು ಇದಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಇದಕ್ಕೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಮತ್ತು ಏನೆಲ್ಲಾ ದಾಖಲೆಗಳನ್ನು ಒದಗಿಸಬೇಕು ಈ ಎಲ್ಲಾ ಮಾಹಿತಿಗಳನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅರ್ಜಿ ಸಲ್ಲಿಸಬೇಕಾದ ಹುದ್ದೆಯ ಹೆಸರು ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (BNPL). ಭಾರತದಾದ್ಯಂತ ನಡೆಯುವ ನೇಮಕಾತಿಗೆ ಇಲ್ಲಿ ಒಟ್ಟೂ ಖಾಲಿ ಇರುವಂತಹ ಹುದ್ದೆಗಳು 3764. ಹಾಗಾಗಿ ಭಾರತದಾದ್ಯಂತ ಎಲ್ಲಿ ಬೇಕಿದ್ದರೂ ಈ 3764 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಮೊದಲಿಗೆ ಟ್ರೇನಿಂಗ್ ಅಸಿಸ್ಟೆಂಟ್ ಹುದ್ದೆಗಳು ಒಟ್ಟು ಖಾಲಿ ಇರುವುದು 2870. ಇದಕ್ಕೆ ಅರ್ಜಿ ಸಲ್ಲಿಸುವವರು SSLC ಉತ್ತೀರ್ಣ ಆಗಿರಬೇಕು ಹಾಗೂ ಅರ್ಜಿದಾರರಿಗೆ 18 ವರ್ಷ ಆಗಿರಬೇಕು ಹಾಗೂ 40 ವರ್ಷ ಮೇಲ್ಪಟ್ಟಿರಬಾರದು. ಹಾಗೂ ಇವರಿಗೆ 12,800 ರೂಪಾಯಿ ಸಂಬಳವನ್ನು ನೀಡಲಾಗುವುದು. ಟ್ರೇನಿಂಗ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಶುಲ್ಕ 590 ರೂಪಾಯಿ ಕಟ್ಟಬೇಕಾಗುವುದು.
ಎರಡನೆಯದಾಗಿ , ಟ್ರೇನಿಂಗ್ ಕೋ ಆರ್ಡಿನೆಟರ್ ನ 571 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು , ಪಿಯುಸಿ ಪಾಸಗಿರಬೇಕು. ಹಾಗೂ ಅರ್ಜಿದಾರರಿಗೆ 21 ವರ್ಷ ಆಗಿರಬೇಕು ಹಾಗೂ 40 ವರ್ಷ ಮೇಲ್ಪಟ್ಟಿರಬಾರದು. ಹಾಗೂ ಇವರಿಗೆ 15,600 ರೂಪಾಯಿ ಸಂಬಳವನ್ನು ನೀಡಲಾಗುವುದು. ಟ್ರೇನಿಂಗ್ ಕೊ ಆರ್ಡಿನೆಟರ್ ಹುದ್ದೆಗೆ ಅರ್ಜಿ ಶುಲ್ಕ 708 ರೂಪಾಯಿ ಅರ್ಜಿ ಶುಲ್ಕ ನೀಡಬೇಕಾಗುವುದು.
ಮೂರನೆಯದಾಗಿ ಖಾಲಿ ಇರುವ ಟ್ರೇನಿಂಗ್ ಚಾರ್ಜ್ ನ 287 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು , ಇದಕ್ಕೆ ಯಾವುದೇ ಪದವಿಯಲ್ಲಿ ಉತ್ತೀರ್ಣ ಆದ ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸುವವರ ವಯಸ್ಸು 21 ರಿಂದ 40 ವರ್ಷದ ಒಳಗೆ ಇರಬೇಕು. ಇವರಿಗೆ ಪ್ರತೀ ತಿಂಗಳು 18,500 ರೂಪಾಯಿ ಸಂಬಳವನ್ನು ನೀಡಲಾಗುವುದು. ಟ್ರೇನಿಂಗ್ ಚಾರ್ಜ್ ಹುದ್ದೆಗಳಿಗೆ 826 ರೂಪಾಯಿ ಅರ್ಜಿ ಶುಲ್ಕ ನೀಡಬೇಕು.
ನಾಲ್ಕನೆಯದಾಗಿ , ಟ್ರೇನಿಂಗ್ ಕಂಟ್ರೋಲ್ ಆಫೀಸರ್. ಇಲ್ಲಿ ಒಟ್ಟೂ 33 ಹುದ್ದೆಗಳು ಖಾಲಿ ಇದ್ದು, ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳ ವಯಸ್ಸು 25 ವರ್ಷ ಮೇಲ್ಪಟ್ಟು ಹಾಗೂ 45 ವರ್ಷ ದಾಟಿರಬಾರದು. ಇವರಿಗೆ 21,700 ರೂಪಾಯಿ ಸಂಬಳವನ್ನು ನೀಡಲಾಗುವುದು. ಟ್ರೇನಿಂಗ್ ಕಂಟ್ರೋಲ್ ಆಫೀಸರ್ ಹುದ್ದೆಗೆ 944 ರೂಪಾಯಿ ಅರ್ಜಿ ಶುಲ್ಕ ನೀಡಬೇಕು.
ಇನ್ನು ಅರ್ಜಿ ಸಲ್ಲಿಸಲು ಆರಂಭದ ದಿನಾಂಕ ಡಿಸೆಂಬರ್ 7 ರಿಂದ ಆರಂಭ ಆಗಿದ್ದು , ಕೊನೆಯ ದಿನಾಂಕ ಇದೆ ಡಿಸೆಂಬರ್ 21 ಕೊನೆಯ ದಿನ ವಾಗಿರುತ್ತದೆ. ಮುಖ್ಯವಾಗಿ ಈ ಹುದ್ದೆಗಳಿಗೆ ಹೊರಡಿಸಿರುವ ಅಧಿಸೂಚನೆಯು ಹಿಂದಿಯಲ್ಲಿ ಇದ್ದು, ಸಾಧ್ಯವಾದರೆ ತಪ್ಪದೆ ಒಮ್ಮೆ ಅಧಿಸೂಚನೆಯನ್ನು ಓದಿಕೊಳ್ಳಿ. ವೆಬ್ಸೈಟ್ ಲಿಂಕ್ :- http://bit.ly/3aWoVgM ಈ ವೆಬ್ಸೈಟ್ ಗೆ ಭೇಟಿ ನೀಡಿ .