ಉದ್ಯೋಗ ಹುಡುಕುತ್ತಿರುವವರಿಗೆ ಒಂದು ಸುವರ್ಣ ಅವಕಾಶ ಬಂದಿದೆ ಎಂದು ಹೇಳಬಹುದು ನಾವಿಂದು ನಿಮಗೆ ಪಶು ಸಂಗೋಪನಾ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ಬೃಹತ್ ಹುದ್ದೆಗಳ ನೇಮಕಾತಿಯ ಮಾಹಿತಿಯ ಬಗ್ಗೆ ತಿಳಿಸಿಕೊಡುತ್ತೇವೆ. ಈ ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಶುಲ್ಕ ಎಷ್ಟಿರುತ್ತದೆ ಮತ್ತು ಯಾವ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಪಶು ಸಂಗೋಪನ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಕುರಿತಾದ ಪತ್ರಿಕಾ ಪ್ರಕಟಣೆ ಹೊರಬಿದ್ದಿದೆ. ಪಶುವೈದ್ಯಕೀಯ ಮತ್ತು ಪಶು ಸಂಗೋಪನೆ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದು ಅರ್ಧದಷ್ಟು ಹುದ್ದೆಗಳು ಖಾಲಿ ಇದೆ ಎಂದು ಹೇಳಿದ್ದಾರೆ. ಇಲ್ಲಿ ಯಾವೆಲ್ಲ ಹುದ್ದೆಗಳು ಖಾಲಿ ಇವೆ ಎಂಬುದನ್ನು ನೋಡುವುದಾದರೆ ಹಿರಿಯ ಪಶುವೈದ್ಯಾಧಿಕಾರಿ ಇಲ್ಲಿ ನೂರಾ ಐವತ್ಮೂರು ಹುದ್ದೆಗಳು ಖಾಲಿಯಿವೆ.

ಹಾಗೆ ಪಶು ವೈದ್ಯಾಧಿಕಾರಿ ಒಂದುಸಾವಿರದ ಇಪ್ಪತ್ತೆಂಟು ಹುದ್ದೆಗಳು ಖಾಲಿ ಇವೆ, ಜಾನುವಾರು ಅಭಿವೃದ್ಧಿ ಅಧಿಕಾರಿ ಎಂಬತ್ತೈದು ಹುದ್ದೆಗಳು ಖಾಲಿ ಇವೆ, ಜಾನುವಾರು ಅಧಿಕಾರಿ ಒಂದುನೂರಾ ನಲವತ್ತೆರಡು ಹುದ್ದೆಗಳು ಕಾಲಿ ಇವೆ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಹುದ್ದೆ ಇಲ್ಲಿ ನಾಲ್ಕು ನೂರಾ ಇಪ್ಪತ್ತು ಹುದ್ದೆಗಳು ಖಾಲಿ ಇವೆ. ಪಶು ವೈದ್ಯಕೀಯ ಪರೀಕ್ಷಕ ಒಂದುನೂರಾ ಐವತ್ಮುರು ಹುದ್ದೆಗಳು ಖಾಲಿ ಇವೆ, ಹಾಗೆ ಪಶು ವೈದ್ಯಕೀಯ ಸಹಾಯಕ ಒಂಬೈನೂರಾ ಐವತ್ತು ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳು ಈ ವರ್ಷದ ಕೊನೆಗೆ ಅಥವಾ ಮುಂದಿನ ವರ್ಷ ಬರುವಂತಹ ಸಂಭವ ಇದೆ. ಇದಿಷ್ಟು ಪಶು ಖಾಲಿ ಇರುವ ಹುದ್ದೆಗಳ ಮಾಹಿತಿ

ಎರಡನೆಯದಾಗಿ ಪೊಲೀಸ್ ಇಲಾಖೆಯಿಂದಲೂ ಕೂಡ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುದನ್ನು ನೋಡುವುದಾದರೆ ಪಿಸಿ ಪಿಎಸ್ಐ ಹಾಗೂ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಯುತ್ತದೆ. ಒಟ್ಟು ಮೂರು ಸಾವಿರದ ಎರಡುನೂರಾ ಅರವತ್ತೊಂದು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಹದಿನೆಂಟರಿಂದ ಮುವತ್ತು ವರ್ಷದವರೆಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಐದುವರ್ಷ ಸಡಿಲಿಕೆ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಹತ್ತು ವರ್ಷ ಸಡಿಲಿಕೆ ಎಂದು ತಿಳಿಸಿದ್ದಾರೆ. ಈ ಒಂದು ಹುದ್ದೆಗೆ ಅಭ್ಯರ್ಥಿಗಳನ್ನು ಯಾವ ರೀತಿಯಾಗಿ ಆಯ್ಕೆಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಗಮನಿಸುವುದಾದರೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಇನ್ನು ಅರ್ಜಿ ಶುಲ್ಕ ಎಷ್ಟಿರುತ್ತದೆ ಎಂಬುದನ್ನು ನೋಡುವುದಾದರೆ ಮಹಿಳಾ ಅಭ್ಯರ್ಥಿಗಳಿಗೆ ಎಸ್ಸಿಎಸ್ಟಿ ಮತ್ತು ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿಯನ್ನು ನೀಡಲಾಗಿದೆ ಹಾಗೂ ಉಳಿದ ಅಭ್ಯರ್ಥಿಗಳಿಗೆ ನೂರು ರೂಪಾಯಿ ಅರ್ಜಿ ಶುಲ್ಕ ವಿಧಿಸಲಾಗಿದೆ.

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ಎಸ್ ಸಿ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು. ಇನ್ನು ಯಾವ ಯಾವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುದನ್ನು ನೋಡುವುದಾದರೆ ಹುದ್ದೆಯ ಹೆಸರು ಜೂನಿಯರ್ ಸೀಡ್ ಅನಲಿಸ್ಟ್, ಸೈಂಟಿಫಿಕ್ ಅಸಿಸ್ಟೆಂಟ್, ಅಕೌಂಟೆಂಟ್ ,ಹೆಡ್ ಕ್ಲರ್ಕ್, ಸ್ಟಾಫ್ ಕಾರ್ ಡ್ರೈವರ್, ಟೆಕ್ನಿಕಲ್ ಸೂಪರಿಂಟೆಂಡಂಟ, ಟೆಕ್ನಿಕಲ್ ಅಸಿಸ್ಟೆಂಟ್, ಜೂನಿಯರ್ ಕಂಪ್ಯೂಟರ್ ಆಪರೇಟರ್, ಮಲ್ಟಿಟಾಸ್ಕಿಂಗ್ ಸ್ಟಾಪ್, ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್, ಲ್ಯಾಬೋರೇಟರಿ ಅಸಿಸ್ಟೆಂಟ್, ಆಫೀಸ್ ಅಟೆಂಡೆಂಟ್ ಹಾಗು ವಿವಿಧ ಹುದ್ದೆಗಳು. ಒಟ್ಟು ಹುದ್ದೆಗಳ ಸಂಖ್ಯೆ ಮೂರುಸಾವಿರ ಎರಡುನೂರ ಅರವತ್ತೊಂದು. ಹುದ್ದೆಗಳು ಉದ್ಯೋಗ ಸ್ಥಳ ಭಾರತದಲ್ಲೆಡೆ ಇದೆ.

ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವವರು ಎಷ್ಟು ವಿದ್ಯಾರ್ಹತೆಯನ್ನು ಪಡೆದಿರಬೇಕು ಎಂಬುದನ್ನು ನೋಡುವುದಾದರೆ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ಅನುಗುಣವಾಗಿ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸೆಸೆಲ್ಸಿ ಪಿಯುಸಿ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಅರ್ಜಿಯನ್ನು ಸಲ್ಲಿಸುವುದಕ್ಕೆ ಪ್ರಾರಂಭದ ದಿನಾಂಕ ಇಪ್ಪತ್ನಾಲ್ಕು ಸಪ್ಟೆಂಬರ್ ಎರಡು ಸಾವಿರದ ಇಪ್ಪತ್ತೊಂದು ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇಪ್ಪತ್ತೈದು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದು ಹಾಗೂ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ ಇಪ್ಪತ್ತೆಂಟು ಅಕ್ಟೋಬರ್ ಎರಡು ಸಾವಿರದ ಇಪ್ಪತ್ತೊಂದು.

ನೋಡಿದಿರಲ್ಲ ಸ್ನೇಹಿತರೆ ಈ ರೀತಿಯಾಗಿ ಬೃಹತ್ ಸಂಖ್ಯೆಯಲ್ಲಿ ನೇಮಕಾತಿ ನಡೆಯುತ್ತಿದ್ದು ನೀವು ಕೂಡ ಅರ್ಹ ಅಭ್ಯರ್ಥಿಗಳಾಗಿದ್ದರೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೂಲಕ ಪರೀಕ್ಷೆಗೆ ಬೇಕಾದ ಪೂರ್ವತಯಾರಿ ನಡೆಸಿಕೊಂಡು ಪರೀಕ್ಷೆ ಬರೆದು ಉದ್ಯೋಗವನ್ನು ನಿಮ್ಮದಾಗಿಸಿಕೊಳ್ಳಿ.ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಸ್ನೇಹಿತರಿಗು ಮತ್ತು ಪರಿಚಯದವರಿಗೂ ತಿಳಿಸಿರಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *