ಜೀವನದಲ್ಲಿ ಹಠ ಅವಮಾನ ಛಲ ಇದ್ದಾಗ ನಾವು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ನಾವು ಇಂದು ಒಬ್ಬ ವ್ಯಕ್ತಿಯ ಪರಿಚಯವನ್ನು ಮಾಡಿಕೊಡುತ್ತದೆ ಅದಕ್ಕೆ ಅವರೇ ಸಾಕ್ಷಿ. ತಾವು ಕಂಡಂತಹ ಕನಸಿನ್ನು ಸಾಧಿಸಿ ಬಹಳಷ್ಟು ಜನರಿಗೆ ಮಾರ್ಗದರ್ಶಕರಾಗಿರುವವರು ಅವರೇ ಪ್ರದೀಪ್ ಈಶ್ವರ್ ಅವರು. ಸಾಧನೆ ಮಾಡಬೇಕು ಎನ್ನುವವರಿಗೆ ಚಿಕ್ಕ ಕೆಲಸವಾದರೂ ಅವರು ಸಾಧಿಸಿ ತೋರಿಸುತ್ತಾರೆ. ಇವರ ಪ್ರಕಾರ ಸಾಧನೆ ಎಂದರೆ ಸಂತೋಷ ಸಾಧನೆ ಎಂದರೆ ಸ್ವಾಭಿಮಾನ ಸಾಧನೆ ಎಂದರೆ ಅವಮಾನಿಸಿದವರ ನಡುವೆ ಗೆದ್ದು ತೋರಿಸುವುದು. ಇವರು ಚಿಕ್ಕಬಳ್ಳಾಪುರದ ಒಂದು ಹಳ್ಳಿಯಲ್ಲಿ ಹುಟ್ಟಿದವರು ಬಾಲ್ಯದಲ್ಲಿ ಶ್ರೀಮಂತ ಕುಟುಂಬದಲ್ಲಿ ಜನಿಸಿದವರು ಆದರೆ ವಿಧಿಯಾಟ ಬದುಕು ಬದಲಾಗುತ್ತದೆ ಬಡವರಾಗುತ್ತಾರೆ. ಕುಟುಂಬ ಕಷ್ಟದಲ್ಲಿ ಸಿಲುಕಿಕೊಳ್ಳುತ್ತದೆ ಜೀವನ ನಡೆಸುವುದು ಕಷ್ಟ ಆಗುತ್ತದೆ ಇವರು ಸಿದ್ದಲಿಂಗ ಮಠದಲ್ಲಿ ಓದುವುದಕ್ಕೆ ಸೇರಿಕೊಳ್ಳುತ್ತಾರೆ ಪಿಯುಸಿಯಲ್ಲಿ ಓದುತ್ತಿರುವಾಗ ತಂದೆ-ತಾಯಿಯನ್ನು ಕಳೆದುಕೊಳ್ಳುತ್ತಾರೆ.
ಅನೇಕ ಜನರು ಇವರನ್ನು ಅವಮಾನಿಸುತ್ತಾರೆ ಇವರು ಡಿಗ್ರಿಯಲ್ಲಿ ಮೊದಲ ವರ್ಷದಲ್ಲಿ ಇರುವಾಗಲೇ ತಮ್ಮದೇ ಆದ ಕೋಚಿಂಗ್ ಕ್ಲಾಸ್ ಚಿಕ್ಕಬಳ್ಳಾಪುರದಲ್ಲಿ ಪ್ರಾರಂಭಿಸುತ್ತಾರೆ ಅಲ್ಲಿಗೆ ಬರುವಂತಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ ಹೊಟ್ಟೆಪಾಡಿಗಾಗಿ ಮಾಡಿದಂತಹ ಕೋಚಿಂಗ್ ಕ್ಲಾಸ್ ಇಂದು ಅವರನ್ನು ಕೋಟ್ಯಾಧಿಪತಿಯನ್ನಾಗಿ ಮಾಡಿದೆ. ಇವರು ಯಾವುದೇ ಕಾಲೇಜುಗಳಲ್ಲಿ ಕಲಿಸುವುದಕ್ಕೆ ಹೋದಾಗ ಅಲ್ಲಿನ ವಿದ್ಯಾರ್ಥಿಗಳು ಇವರನ್ನು ಅತಿಯಾಗಿ ಹಚ್ಚಿಕೊಳ್ಳುತ್ತಿದ್ದರು ಇವರು ಇಲ್ಲದಿದ್ದರೆ ಕಾಲೇಜು ನಡೆಯುವುದಿಲ್ಲ ಎನ್ನುವಷ್ಟರ ಮಟ್ಟಿಗೆ ವಿದ್ಯಾರ್ಥಿಗಳು ಇವರನ್ನು ಹಚ್ಚಿಕೊಂಡಿದ್ದರು ಇವರ ಮಾತುಗಳಿಂದ ವಿದ್ಯಾರ್ಥಿಗಳು ಪ್ರೇರೇಪಣೆಗೊಳಗಾಗುತ್ತಿದ್ದರು. ಇದರಿಂದ ಕಾಲೇಜು ಆಡಳಿತ ಮಂಡಳಿಗೆ ಇವನು ತಮ್ಮ ಕಾಲೇಜಿನ ಮುಳುಗಿಸುತ್ತಾನೆ ಎನ್ನುವ ಭಯದಿಂದ ಕಾಲೇಜಿನಿಂದ ತೆಗೆದುಹಾಕುತ್ತಾರೆ. ಅಲ್ಲಿಂದ ಹೊರಬಿದ್ದ ಇವರು ಪರಿಶ್ರಮ ನಿಕ್ ಅಕಾಡೆಮಿ ಪ್ರಾರಂಭಿಸುತ್ತಾರೆ.
ಪರಿಶ್ರಮ ಎಂದರೆ ನಂಬಿಕೆ ಪರಿಶ್ರಮ ಎಂದರೆ ಭರವಸೆ ಧೈರ್ಯ ಚದರದ ಏಕಾಗ್ರತೆ ಪರಿಶ್ರಮ ಎಂದರೆ ಭಾರತದ ಭವಿಷ್ಯದ ವೈದ್ಯರ ಪ್ಲಾಟ್ ಫಾರ್ಮ್. ಪರಿಶ್ರಮವನ್ನು ಪ್ರಾರಂಭಿಸಿದಾಗ ಅನೇಕ ಜನರು ಇವರ ಬಳಿ ಹಣ ಇಲ್ಲ ಎಂದು ಇವರನ್ನು ಹೀಯಾಳಿಸುತ್ತಾರೆ. ಇವರು ಕೋಚಿಂಗ್ ಕ್ಲಾಸನ್ನು ಆರಂಭಿಸಿದಾಗ ಪಾಲಕರು ಇವರ ಮಾತನ್ನು ಕೇಳಿ ತಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತಾರೆ 2019ರಲ್ಲಿ ಇವರ ಅರವತ್ತು ಜನ ವಿದ್ಯಾರ್ಥಿಗಳಲ್ಲಿ ನಲವತ್ತೆಂಟು ಜನರಿಗೆ ವೈದ್ಯಕೀಯ ಸೀಟು ಸಿಗುತ್ತದೆ 2020ರಲ್ಲಿ ನೂರಾ ಮೂವತ್ತು ವಿದ್ಯಾರ್ಥಿಗಳಲ್ಲಿ ಎಂಬತ್ತೆಂಟು ಜನರಿಗೆ ವೈದ್ಯಕೀಯ ಸೀಟು ಸಿಗುತ್ತದೆ ನಂತರ ಎರಡು ನೂರಾ ನಲವತ್ತು ವಿದ್ಯಾರ್ಥಿಗಳಲ್ಲಿ ಎರಡುನೂರಾ ಇಪ್ಪತ್ತು ವಿದ್ಯಾರ್ಥಿಗಳಿಗೆ ಇವರ ನೇತೃತ್ವದಲ್ಲಿ ವೈದ್ಯಕೀಯ ಸೀಟು ಸಿಗುತ್ತದೆ. ಈ ವರ್ಷದ ಐದು ನೂರಕ್ಕೆ ಐದು ನೂರು ಸೀಟುಗಳನ್ನು ಯಶಸ್ವಿಯಾಗಿ ಸಾಧಿಸುವ ಉದ್ದೇಶವನ್ನು ಹೊಂದಿದ್ದಾರೆ.
ಪ್ರತಿ ಸರ್ಕಾರಿ ಆಸ್ಪತ್ರೆಯಲ್ಲಿ ಇವರ ಶಿಷ್ಯರು ವೈದ್ಯರಾಗಿರಬೇಕು ಇನ್ನು ಆರು ವರ್ಷದಲ್ಲಿ ಇವರದ್ದೇ ಆದ ಮೆಡಿಕಲ್ ಕಾಲೇಜನ್ನು ನಿರ್ಮಾಣ ಮಾಡಬೇಕು ಎಂಬ ಆಸೆಯನ್ನು ಇಟ್ಟುಕೊಂಡಿದ್ದಾರೆ.ಇವರಿಗೆ ಇವರ ಧೈರ್ಯವೇ ಬಂಡವಾಳ. ಇವರ ಅಕಾಡೆಮಿಯಿಂದ ಐದುನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟ್ ಪಡೆದುಕೊಂಡಿದ್ದಾರೆ. ಇವರ ಪ್ರಕಾರ ಜಗತ್ತಿನ ಶ್ರೇಷ್ಠ ವೈದ್ಯರು ಭಾರತೀಯರಾಗಿರಬೇಕು ಅವರಲ್ಲಿ ಹೆಚ್ಚು ಜನ ಕನ್ನಡದವರಾಗಿರಬೇಕು ಎಂದು ಹೇಳುತ್ತಾರೆ. ಇವರ ಕಂಪನಿಯಲ್ಲಿ ಈಗ 25 ಕೋಟಿ ವ್ಯವಹಾರ ನಡೆಯುತ್ತಿದೆ. ಇವರು ಜೀವನದಲ್ಲಿ ತುಂಬಾ ಕಷ್ಟವನ್ನು ಅನುಭವಿಸುತ್ತಾರೆ ಇವರಿಗೆ ಯಾರು ಹಣಕಾಸಿನ ಸಹಾಯವನ್ನು ಮಾಡುವುದಿಲ್ಲ ಅದನ್ನೇ ಸವಾಲಾಗಿ ಸ್ವೀಕರಿಸಿ ಇಂದು ಇವರು ಸಾಧನೆಯ ಶಿಖರವನ್ನು ಏರಿದ್ದಾರೆ.
ಇನ್ನು ಇವರು ಸಮಾಜಮುಖೀ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಹದಿನಾಲ್ಕು ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಎಂಬಿಬಿಎಸ್ ಓದಿಸುತ್ತಿದ್ದಾರೆ. ಇವರು ಹಿರಿಯ ಪತ್ರಕರ್ತರಾದಂತಹ ವಿಶ್ವೇಶ್ವರ ಭಟ್ ಅವರನ್ನು ತಮ್ಮ ಆರಾಧ್ಯ ದೈವ ಎಂದು ತಿಳಿದುಕೊಂಡಿದ್ದಾರೆ ಅವರು ಬರೆದಂತಹ ಎಲ್ಲಾ ಪುಸ್ತಕಗಳನ್ನು ಇವರು ಓದಿದ್ದಾರೆ ಬಹುಶಹ ಅವರ ಬರಹಗಳನ್ನು ಓದಿ ಓದಿ ನಾನು ಇಷ್ಟು ಪ್ರೇರಿತನಾಗಿರಬಹುದು ಎಂದು ಹೇಳಿದ್ದಾರೆ. ಇವರು ತಮ್ಮನ್ನು ಸ್ವಾಭಿಮಾನಿ ಕನ್ನಡಿಗ ಎಂದು ಕರೆಯುವುದಕ್ಕೆ ಇಚ್ಛೆಪಡುತ್ತಾರೆ
ಜೊತೆಗೆ ಒಂದು ಕನ್ನಡ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ ಅಲ್ಲಿ ಉತ್ತಮ ರೀತಿಯಲ್ಲಿ ಬದಲಾವಣೆಯನ್ನು ಕೂಡಾ ತರುತ್ತಿದ್ದಾರೆ. ಸಾವಿರಾರು ಮಕ್ಕಳಿಗೆ ದಾರಿದೀಪವಾಗುವುದರ ಜೊತೆಗೆ ಅನೇಕ ಜನರಿಗೆ ತಮ್ಮ ಕಂಪನಿಯಲ್ಲಿ ಕೆಲಸ ಕೊಡುವ ಮೂಲಕ ಅವರಿಗೂ ಕೂಡ ಜೀವನವನ್ನು ನಡೆಸುವುದಕ್ಕೆ ಆಧಾರವಾಗಿದ್ದಾರೆ. ಒಬ್ಬ ಮನುಷ್ಯ ಜೀವನದಲ್ಲಿ ಏನೂ ಇಲ್ಲ ಎಂದು ಆಸೆಯನ್ನು ಬಿಟ್ಟಾಗ ಮತ್ತೆ ಆತನಲ್ಲಿ ಉತ್ಸಾಹ ಮೂಡಿ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಮತ್ತೆ ಎಲ್ಲರೂ ಒಟ್ಟಿಗೆ ಬೆರೆಯಬಹುದು ಎಂಬುದಕ್ಕೆ ಪ್ರದೀಪ್ ಈಶ್ವರ್ ಅವರು ಉದಾಹರಣೆ.
ಇವರು ದಕ್ಷಿಣ ಭಾರತದ ಎಲ್ಲಾ ಜಿಲ್ಲೆಗಳಲ್ಲಿ ತಮ್ಮ ಪರಿಶ್ರಮ ನಿಕ್ ಅಕಾಡೆಮಿಯ ಶಾಖೆಯನ್ನು ತೆರೆಯಬೇಕು ಎನ್ನುವ ಕನಸನ್ನು ಹೊಂದಿದ್ದಾರೆ. ಇವರು ಹಳ್ಳಿಯಲ್ಲಿ ಹುಟ್ಟಿದರೂ ಕೂಡ ಸಾಧನೆಯನ್ನು ಮಾಡಿ ಅನೇಕ ಜನರ ಬದುಕು ಕಟ್ಟಿಕೊಳ್ಳುವುದಕ್ಕೆ ಆಸರೆಯಾಗಿದ್ದಾರೆ ತಮ್ಮ ಪ್ರೇರಕ ಭಾಷಣಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದಾರೆ. ಇವರನ್ನು ಬಯೋಲಾಜಿಕಲ್ ಗಾಡ್ ಎಂದು ಕರೆಯಲಾಗುತ್ತದೆ.
ಬೆಂಗಳೂರು ಎಜುಕೇಶನಲ್ ಸಿಟಿ ಆಗಬೇಕು ಜೊತೆಗೆ ಕನ್ನಡವನ್ನು ಇನ್ನೂ ಹೆಚ್ಚಿನ ಮಟ್ಟಕ್ಕೆ ಬೆಳೆಸಬೇಕು ಎಂಬುದು ಇವರ ಬಯಕೆ. ಸ್ವಾಭಿಮಾನಿ ಕನ್ನಡಿಗನಾಗಿ ಸಾಧನೆಯನ್ನು ಮಾಡಿ ವೈದ್ಯರಾಗಬೇಕು ಎಂಬ ಕನಸನ್ನು ಹೊಂದಿರುವ ಅನೇಕ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿರುವಂತಹ ಪ್ರದೀಪ್ ಈಶ್ವರ್ ಅವರ ಎಲ್ಲಾ ಕನಸುಗಳು ನನಸಾಗಲಿ ಇವರು ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡಲಿ ಆ ಶಕ್ತಿಯನ್ನು ಭಗವಂತ ಅವರಿಗೆ ನೀಡಲಿ ಎಂದು ನಾವೆಲ್ಲರೂ ಆಶಿಸೋಣ.