ಈಗಿನ ಕಾಲದಲ್ಲಿ ಸಂಬಂಧಗಳ ಮೌಲ್ಯ ಮೊದಲಿನ ಹಾಗಿಲ್ಲ. ಮೊದಲೆಲ್ಲಾ ಪ್ರತಿಯೊಂದು ಸಂಬಂಧಕ್ಕೂ ಅದರದ್ದೇ ಆದ ಮೌಲ್ಯವಿತ್ತು, ಆಯಾ ಸಂಬಂಧಕ್ಕೆ ಎಲ್ಲರೂ ಗೌರವ ಕೊಡುತ್ತಿದ್ದರು, ಆದರೆ ಈಗ ಆ ರೀತಿ ಇಲ್ಲ. ಸಂಬಂಧಗಳನ್ನೇ ಮರೆತು ತಪ್ಪು ಮಾಡಿತ್ತಿರುವ ಸಾಕಷ್ಟು ಘಟನೆಗಳು ನಡೆಯುತ್ತಿದೆ. ಇಂಥದ್ದೊಂದು ಘಟನೆ ಹರಿಯಾಣ ರಾಜ್ಯದ ಪಾಣಿಪತ್ ಜಿಲ್ಲೆಯ ಸೋನಿ ಕಾಲೋನಿಯಲ್ಲಿ ನಡೆದಿದೆ.

ಇಲ್ಲಿ ಸಲೀಂ ಎನ್ನುವ ವ್ಯಕ್ತಿ ತನ್ನ ಸೊಸೆಯ ಜೊತೆಗೆ ಓಡಿ ಹೋಗಿದ್ದಾನೆ. ಈತನ ಸೊಸೆಯ ಹೆಸರು ಅಸ್ಮಾ, ಈಕೆ ಕೆಲ ವರ್ಷಗಳ ಹಿಂದೆ ಸಲೀಂ ಎನ್ನುವ ಈತನ ಮಗ ಅಬ್ದುಲ್ ಜೊತೆಗೆ ಮದುವೆಯಾಗಿದ್ದಳು. ಈಕೆಗೆ 3 ವರ್ಷದ ಮಗಳು ಮತ್ತು 10 ತಿಂಗಳ ಗಂಡು ಮಗುವಿದೆ. ಈಕೆ ತನ್ನ ಮಾವನ ಜೊತೆಗೆ ಬಹಳ ಸಮಯದಿಂದ ಸಂಬಂಧ ಇಟ್ಟುಕೊಂಡಿದ್ದಳು. ಆದರೆ ಈ ವಿಚಾರ ಎಲ್ಲಿಯೂ ಹೊರಗಡೆ ಬೆಳಕಿಗೆ ಬಂದಿರಲಿಲ್ಲ.

ಅದಕ್ಕೆ ಕಾರಣ ಇವರಿಬ್ಬರು ಚೆನ್ನಾಗಿರುವ ಹಾಗೆ ಮನೆಯವರ ಎದುರು ತೋರಿಸಿಕೊಂಡಿರಲಿಲ್ಲ. ಅಸ್ಮಾ, ಅಬ್ದುಲ್ ಮತ್ತು ಮಕ್ಕಳು ಸಲೀಂ ಜೊತೆಗೆ ವಾಸ ಮಾಡುತ್ತಿದ್ದರು. ಸಲೀಂ ಮತ್ತು ಅಸ್ಮಾ ಮನೆಯವರ ಎದುರು ಯಾವಾಗಲೂ ಜಗಳ ಅಡುತ್ತಿದ್ದರು, ಹಾಗಾಗಿ ಯಾರಿಗೂ ಕೂಡ ಇವರಿಬ್ಬರ ನಡುವೆ ಅನುಮಾನವೇ ಬಂದಿರಲಿಲ್ಲ. ಆದರೆ ಯಾರು ಇಲ್ಲದ ವೇಳೆ ಇವರ ಸಂಬಂಧ ನಡೆಯುತ್ತಿತ್ತು. ಕೊನೆಗೆ ಇವರಿಬ್ಬರು ಜೊತೆಯಾಗಿ ವಾಸ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ.

ಹಾಗೆ ಪ್ಲಾನ್ ಮಾಡಿ, ಮನೆಯವರೆಲ್ಲರಿಗೂ ಊಟದಲ್ಲಿ ನಿದ್ದೆ ಮಾತ್ರೆ ಹಾಕಿಕೊಟ್ಟು, ಮನೆಯವರೆಲ್ಲರೂ ಪ್ರಜ್ಞೆ ಇಲ್ಲದೆ ಇದ್ದಾಗ, ಇವರಿಬ್ಬರು ಓಡಿ ಹೋಗಿದ್ದಾರೆ. ಆ ದಿನ ಬೆಳಗ್ಗಿನ ಜಾವ 4 ಗಂಟೆಗೆ ಮನೆಯಿಂದ ಹೊರಬಂದ ಸಲೀಂ ಅಸ್ಮಾಗಾಗಿ ಕಾದಿದ್ದ, ಅಸ್ಮಾ ಕೂಡ ತನ್ನ 10 ತಿಂಗಳ ಮಗುವನ್ನು ಕರೆದುಕೊಂಡು ಬಂದು ಮಾವನ ಜೊತೆಗೆ ಓಡಿ ಹೋಗಿದ್ದಾಳೆ. ಬೆಳಗ್ಗೆ ಎದ್ದು ಮನೆಯವರು ನೋಡಿದಾಗ, ಅವರಿಬ್ಬರು ಇರಲಿಲ್ಲ.

ಮನೆಯಲ್ಲಿ ಯಾರ ಕೈಗೂ ಸಿಕ್ಕಿಹಾಕಿಕೊಳ್ಳಬಾರದು ಎನ್ನುವ ಕಾರಣಕ್ಕೆ ಮೊಬೈಲ್ ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದರು. ಕೊನೆಗೆ ಮನೆಯವರು ಇವರಿಬ್ಬರು ಕಾಣುತ್ತಿಲ್ಲ ಎಂದು ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಅವರಿಬ್ಬರು ಓಡಿ ಹೋಗಿರುವುದು ಗೊತ್ತಾಗಿದೆ. ಮಾವ ಸೊಸೆ ಆಗಿದ್ದು ಇವರಿಬ್ಬರು ಮಾಡಿರುವ ಕೆಲಸ ಇಡೀ ಕುಟುಂಬಕ್ಕೆ ನಾಚಿಕೆ ಆಗುವ ಹಾಗೆ ಮಾಡಿದೆ. ಇದನ್ನೂ ಓದಿ ಬೇರೆಯವನ ಜೊತೆ ಕಬ್ಬಡಿ ಆಡಲು ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿದ ಮಹಿಳೆ, ಕೊನೆಗೆ ಆಗಿದ್ದೇನು ಗೊತ್ತಾ..

By AS Naik

Leave a Reply

Your email address will not be published. Required fields are marked *