ಉದ್ಯೋಗವನ್ನು ಹುಡುಕುತ್ತಿರುವವರಿಗೆ ಒಂದು ಸಿಹಿ ಸುದ್ದಿ ಇದೆ. ಅದೇನೆಂದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ಬೃಹತ್ ನೇಮಕಾತಿ ಎಂಬ ಮೆಸೇಜ್ ಎಲ್ಲಾ ಕಡೆ ವೈರಲ್ ಆಗುತ್ತಿದೆ ಪಿಯುಸಿ ತತ್ಸಮಾನ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಆರು ಸಾವಿರದ ನಾಲ್ಕು ನೂರ ಆರು ಹುದ್ದೆಗಳ ಸಂಪೂರ್ಣವಾದ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬುದನ್ನು ನೋಡುವುದಾದರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹುದ್ದೆಗಳು ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ (ಗ್ರೇಡ್ 2 ) ಹುದ್ದೆ, ಇಲ್ಲಿ ಸುಮಾರು ಮೂರು ಸಾವಿರದ ಎಂಟುನೂರ ಇಪ್ಪತ್ತೇಳು ಹುದ್ದೆಗಳು ಇದೆ. ಇದು ನೋಟಿಫೈ ಆದಾಗ ನೀವು ಇದನ್ನು ವಿವರಣಾತ್ಮಕವಾಗಿ ನೋಡಬೇಕಾಗುತ್ತದೆ ಯಾಕೆಂದರೆ ಯಾರು ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿಲ್ಲವೊ ಅವರು ಮೂರು ಸಾವಿರದ ಎಂಟುನೂರ ಇಪ್ಪತ್ತೇಳು ಹುದ್ದೆಗಳು ನಮ್ಮದು ಎಂದು ಸೆಲೆಬ್ರೇಟ್ ಮಾಡುವಂತಿಲ್ಲ
ಏಕೆಂದರೆ ಇಲ್ಲಿ ಸೆವೆಂಟಿ ಇಷ್ಟು ಥರ್ಟಿ ಅನುಪಾತದಲ್ಲಿ ನೇಮಕಾತಿ ನಡೆಯುತ್ತದೆ. ಸೇವೆ ಯೊಳಗಿನ ನೇಮಕಾತಿ ಅಂದರೆ ಈಗಾಗಲೇ ಆರ್ ಡಿ ಪಿ ಆರ್ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬೇರೆಬೇರೆ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಎರಡು ಸಾವಿರದ ಆರುನೂರ ಎಪ್ಪತ್ತೊಂಬತ್ತು ಹುದ್ದೆಗಳನ್ನು ಪ್ರಮೋಷನ್ ಬದಲಾಗಿ ಅವರು ಪರೀಕ್ಷೆಯನ್ನು ಬರೆದು ಉನ್ನತ ಹುದ್ದೆಗೆ ಆಯ್ಕೆ ಆಗಬೇಕು. ಇನ್ನು ನೇರ ನೇಮಕಾತಿಯಲ್ಲಿ ಒಂದು ಸಾವಿರದ ಒಂದು ನೂರಾ ನಲವತ್ತೆಂಟು ಹುದ್ದೆಗಳು ಇವೆ. ಈಗಾಗಲೇ ಹೊರಡಿಸಿರುವ ಪರೀಕ್ಷಾ ವಿಧಾನ ಈ ನೇರ ನೇಮಕಾತಿಯ ಅಭ್ಯರ್ಥಿಗಳಿಗೆ ಸಂಬಂಧಿಸಿರುವುದಿಲ್ಲ ಅವರಿಗೆ ಕೆಇಎ ಮೂಲಕ ಹೊಸದಾದ ಸಪ್ರೇಟ್ ನೋಟಿಫಿಕೇಶನ್ ಬರುತ್ತದೆ ಅದಲ್ಲದೆ ವಿಶೇಷವಾದ ಮಾಹಿತಿಗಳು ಕೂಡ ಇರುತ್ತದೆ.
ಇನ್ನೂ ಸಂಬಳದ ವಿಷಯಕ್ಕೆ ಬಂದರೆ ಇಪ್ಪತ್ತೊಂದು ಸಾವಿರದ ನಾಲ್ಕು ನೂರು ರೂಪಾಯಿ ಸಂಬಳ ಇರುತ್ತದೆ. ಅಂದರೆ ಬೇಸಿಕ್ ಸಾಲರಿ ಚೆನ್ನಾಗಿರುತ್ತದೆ ಅದಕ್ಕೆ ಡಿಎ ಮತ್ತು ಎಚ್ ಆರ್ ಎ ಸೇರಿಕೊಂಡು ಮುವತ್ತೈದರಿಂದ ನಲವತ್ತು ಸಾವಿರ ಸಂಬಳ ಸಿಗುವ ಸಾಧ್ಯತೆ ಇರುತ್ತದೆ. ಇಲ್ಲಿ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದದ್ದು ಸೇವೆಯಲ್ಲಿನ ನೇರ ನೇಮಕಾತಿಯ ಬಗ್ಗೆ. ಆರ್ ಡಿ ಪಿ ಆರ್ ಮತ್ತು ಗ್ರಾಮೀಣ ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವಂತಹ ಅಭ್ಯರ್ಥಿಗಳಿಗೆ ಪ್ರಮೋಷನ್ ಅನ್ನು ವಿಭಿನ್ನ ರೂಪದಲ್ಲಿ ಪರೀಕ್ಷೆಯ ಮೂಲಕ ಮಾಡುವ ನೇಮಕಾತಿ ಆಗಿದೆ
ಹಾಗಾದರೆ ಅವರಿಗೆ ಯಾವ ಎಲ್ಲ ಅರ್ಹತೆಗಳು ಇರಬೇಕು ಎಂಬುದನ್ನು ನೋಡುವುದಾದರೆ, ಅದಕ್ಕೂ ಮೊದಲು ಇನ್ನೊಂದು ಹುದ್ದೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆ ಇದು ಕೂಡ ನೋಟಿಫೈ ಆಗುತ್ತಿದೆ ಇದು ಗೆಜೆಟ್ ಆರ್ಡರ್ ಅಲ್ಲ ಇದು ಎಕ್ಸಿಕ್ಯೂಟಿವ್ ಆರ್ಡರ್. ಎಕ್ಸಿಕ್ಯೂಟಿವ್ ಆರ್ಡರ್ ಗೆಜೆಟ್ ಆಗಬೇಕು ಅದಾದ ನಂತರ ರಿಕ್ರೂಟ್ಮೆಂಟ್ ಅಥಾರಿಟಿ ಯನ್ನ ನೇಮಿಸಿದ್ದಾರೆ ಆ ರಿಕ್ರೂಟ್ಮೆಂಟ್ ಅಥಾರಿಟಿ ಅವರು ಮುಂದೆ ಪ್ಲಾನ್ ಗಳನ್ನು ಮಾಡಿಕೊಂಡು ಪಂಚಾಯತರಾಜ್ ಸಹಯೋಗದೊಂದಿಗೆ ನೇಮಕಾತಿಯ ಬಗ್ಗೆ ಯೋಜನೆ ಮಾಡಬೇಕು. ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿ ಒಟ್ಟು ಎರಡು ಸಾವಿರದ ಐದುನೂರು ಇಪ್ಪತ್ತೊಂಬತ್ತು ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ.
ಈ ಹುದ್ದೆಯಲ್ಲಿ ಐವತ್ತು ಅನುಪಾತ ಐವತ್ತರ ರೀತಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅಂದರೆ ಸೇವೆ ಒಳಗಿರುವವರ ಆಯ್ಕೆಮಾಡಿಕೊಳ್ಳಲು ಅವರಿಗೆ ಸಾವಿರದ ಎರಡುನೂರಾ ಎಂಬತ್ತೊಂಬತ್ತು ಮತ್ತು ಹೊರಗಿನ ಅಭ್ಯರ್ಥಿಗಳಿಗೆ ಸಾವಿರದ ಎರಡುನೂರಾ ಎಂಬತ್ತೊಂಬತ್ತು ಹುದ್ದೆಗಳನ್ನು ಒಟ್ಟು ಎರಡು ಸಾವಿರದ ಐದುನೂರಾ ಎಪ್ಪತ್ತೊಂಬತ್ತು ಹುದ್ದೆಗಳಿಗೆ ನೇಮಕಾತಿ ಯನ್ನು ನಡೆಸಲಾಗುತ್ತದೆ ಈ ವಿಭಾಗದಲ್ಲಿಯೂ ಕೂಡ ಸಂಬಳ ಇಪ್ಪತ್ತೊಂದು ಸಾವಿರದ ನಾಲ್ಕುನೂರು ಬೇಸಿಕ್ ಇರುತ್ತದೆ ಈ ಹುದ್ದೆಗೂ ಕೂಡ ಮೂವತ್ತರಿಂದ ಮೂವತ್ತೈದು ಸಾವಿರದವರೆಗೆ ಬರುವ ಸಂಭವವಿರುತ್ತದೆ ಸಂಬಳದ ವಿಷಯದಲ್ಲಿ ಈ ಎರಡು ಹುದ್ದೆಗಳಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡುಬರುವುದಿಲ್ಲ.
ಸೇವೆ ಒಳಗಿನ ಹುದ್ದೆಗಳಲ್ಲಿ ಬಿಲ್ ಕಲೆಕ್ಟರ್ ಅಕೌಂಟೆಂಟ್ ಕ್ಲರ್ಕ್ ಟೈಪಿಸ್ಟ್ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಲ್ಲಿ ಈಗಾಗಲೇ ಕೆಲಸ ಮಾಡುತ್ತಿದ್ದರೆ ಅವರು ಕೆಲಸ ಮಾಡುತ್ತಾ ಆರು ವರ್ಷವಾಗಿರಬೇಕು ಆರು ವರ್ಷ ದ ಮೇಲ್ಪಟ್ಟು ಕೆಲಸ ಮಾಡಿದವರ ಒಂದು ಲಿಸ್ಟ್ ಅನ್ನು ತಯಾರಿಸುತ್ತಾರೆ. ಲಿಸ್ಟ್ ನಲ್ಲಿರುವ ಆರು ವರ್ಷ ಸೇವೆ ಸಲ್ಲಿಸಿದ ಸದಸ್ಯರು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ ಅರ್ಜಿ ಸಲ್ಲಿಸಿದ ನಂತರ ಪರೀಕ್ಷೆಯನ್ನು ನಡೆಸಿ ಅದರ ಮೂಲಕ ಆಯ್ಕೆಮಾಡಿಕೊಳ್ಳಲಾಗುತ್ತದೆ ಇವರು ಪರೀಕ್ಷೆಯಲ್ಲಿ ಕನಿಷ್ಠ ನಲವತ್ತು ಅಂಕಗಳನ್ನು ಆದರೂ ತೆಗೆದುಕೊಳ್ಳಬೇಕು ನಲವತ್ತು ಅಂಕವನ್ನು ತೆಗೆದುಕೊಂಡವರು ಈ ಹುದ್ದೆಗೆ ಕ್ವಾಲಿಫೈ ಆಗುತ್ತಾರೆ ಅವರಲ್ಲಿ ಮತ್ತೆ ಸೀನಿಯಾರಿಟಿ ಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇದನ್ನು ಸೇವೆ ಒಳಗಿನ ನೇರ ನೇಮಕಾತಿ ಎಂದು ಕರೆಯಲಾಗುತ್ತದೆ.
ಪರೀಕ್ಷೆಯಲ್ಲಿ ನೂರು ಅಂಕದ ಪ್ರಶ್ನೆ ಪತ್ರಿಕೆ ಇರುತ್ತದೆ ಅದನ್ನು ತೊಂಬತ್ತು ನಿಮಿಷದಲ್ಲಿ ಬರೆಯಬೇಕು. ಇದರಲ್ಲಿ ನಲವತ್ತು ಪ್ರಶ್ನೆಗಳು ಕರ್ನಾಟಕದ ಗ್ರಾಂ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ1993 ಮತ್ತು ಸ್ಕೀಮ್ ಆಫ್ ದಿ ಸ್ಟೇಟ್ ಅಂಡ್ ಸೆಂಟ್ರಲ್ ಗೌರ್ಮೆಂಟ್ ಇದರ ಒಂದು ಯೋಜನೆಗಳಿಗೆ ಸಂಬಂಧಿಸಿದಂತೆ ನಲವತ್ತು ಅಂಕದ ಪ್ರಶ್ನೆಗಳು ಬರುತ್ತವೆ ಮುವತ್ತು ಅಂಕದ ಪ್ರಶ್ನೆಗಳು ಜನರಲ್ ನಾಲೆಜ್ ಇನ್ನುಳಿದ ಮುವತ್ತು ಅಂಕಗಳು ಕಂಪ್ಯೂಟರ್ ನಾಲೆಡ್ಜ್ ಗೆ ಸಂಬಂಧಿಸಿದ ವಾಗಿರುತ್ತವೆ. ಇದು ಕೇವಲ ಸೇವೆ ಒಳಗಿದ್ದು ಉನ್ನತ ಹುದ್ದೆಗೆ ಹೋಗಬೇಕೆಂದು ಅರ್ಜಿ ಸಲ್ಲಿಸಿದವರಿಗೆ ಮಾತ್ರ ಇದು ನೇರನೇಮಕಾತಿ ಅಭ್ಯರ್ಥಿಗಳಿಗೆ ಅನ್ವಯಿಸುವುದಿಲ್ಲ.
ಇದರಲ್ಲಿ ಸಿಲೆಬಸ್ ಗಳನ್ನು ನೋಡುವುದಾದರೆ ಎಂ ಜಿ ನರೇಗಾದ ಬಗ್ಗೆ ಹದಿನೈದನೇ ಹಣಕಾಸು ಯೋಜನೆಬಗ್ಗೆ ಪಂಚಾಯತ್ ರಾಜ್ ಆಕ್ಟ್ ನ ಬಗ್ಗೆ ಇವುಗಳ ಬಗ್ಗೆ ನಲವತ್ತು ಅಂಕದ ಪ್ರಶ್ನೆ ಕೇಳಲಾಗುತ್ತದೆ ಜನರಲ್ ನಾಲೆಜ್ ಗೆ ಸಂಬಂಧಿಸಿದಂತೆ ಮುವತ್ತು ಅಂಕದ ಪ್ರಶ್ನೆಗಳು ಕಂಪ್ಯೂಟರ್ ವಿಷಯಕ್ಕೆ ಸಂಬಂಧಿಸಿದಂತೆ ಮುವತ್ತು ಅಂಕದ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಈ ಒಂದು ಪರೀಕ್ಷೆಯನ್ನು ಬರೆಯುವವರು ಯಾವ ಬುಕ್ಕನ್ನು ರೆಫರೆನ್ಸ್ ಮಾಡಬೇಕು ಎಂಬುದನ್ನು ನೋಡುವುದಾದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಗ್ರಾಮ ಪಂಚಾಯತ್ ಅಧಿನಿಯಮ 1993 ಈ ಒಂದು ಪುಸ್ತಕವನ್ನು ಆರ್ ಡಿ ಪಿ ಆರ್ ಹುದ್ದೆಗಳಿಗೆ ನಡೆಯುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಇದನ್ನು ಬೈಬಲ್ ಎಂದು ಕರೆಯಲಾಗುತ್ತದೆ. ಈ ಪುಸ್ತಕದಲ್ಲಿರುವ ಆಕ್ಟ್ ಗಳನ್ನು ಓದಿ ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟವಾಗುತ್ತದೆ ಎಂದರೆ ಅಶೋಕ್ ಮಿರ್ಜಿ ಅವರು ಬರೆದಿರುವ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ ಪುಸ್ತಕವನ್ನು ಓದಬಹುದು ಇನ್ನೂ ಜನರಲ್ ನಾಲೆಜ್ ಗೆ ಸಂಬಂಧಿಸಿದಂತೆ ಚಾಣಕ್ಯ ಕಣಜ ನೂತನ ಜಿಕೆ ಮತ್ತು ಸಾಮಾನ್ಯ ಅಧ್ಯಯನ ಈ ಮೂರು ಪುಸ್ತಕಗಳಲ್ಲಿ ನೀವು ಮುವತ್ತು ಅಂಕಗಳಿಗೆ ಯಾವುದಾದರೂ ಒಂದು ಪುಸ್ತಕವನ್ನ ಆಯ್ಕೆ ಮಾಡಿಕೊಳ್ಳಬಹುದು
ಕಂಪ್ಯೂಟರ್ ವಿಷಯಕ್ಕೆ ಸಂಬಂಧಿಸಿದಂತೆ ಗುರುರಾಜ್ ಬುಲ್ ಬುಲೆ ಅವರ ಪುಸ್ತಕ ಇದೆ ಸ್ಪರ್ಧಾ ಉನ್ನತಿ ಅವರು ಹೊರಡಿಸಿರುವ ಕಂಪ್ಯೂಟರ್ ಜ್ಞಾನ ಈ ಪುಸ್ತಕ ಕನ್ನಡದಲ್ಲಿಯೇ ಇದೆ ಈ ಎಲ್ಲಾ ಪುಸ್ತಕಗಳನ್ನು ಓದಿ ಕೊಳ್ಳುವುದರ ಜೊತೆಗೆ ನೀವು ಪ್ರಚಲಿತ ಘಟನೆಗಳ ಬಗ್ಗೆಯೂ ಮಾಹಿತಿಯನ್ನು ಸಂಗ್ರಹಿಸಬೇಕು ಇದಿಷ್ಟನ್ನು ಓದಿಕೊಂಡರೆ ನೀವು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಬಹುದು. ಇದಿಷ್ಟು ಸೇವೆಯೊಳಗಿನ ನೇರ ನೇಮಕಾತಿ ಅಭ್ಯರ್ಥಿಗಳಿಗೆ ಸಂಬಂಧಿಸಿದ ಮಾಹಿತಿ.
ಇನ್ನೂ ಹೊರಗಿನ ಅಭ್ಯರ್ಥಿಗಳಿಗೆ ಕೆಇಎ ಮೂಲಕ ನೇಮಕಾತಿ ನಡೆಯುತ್ತದೆ ಇವರಿಗೆ ಪರೀಕ್ಷೆಯಲ್ಲಿ ಯಾವೆಲ್ಲ ವಿಷಯಗಳನ್ನು ಕೇಳಬಹುದು ಎಂಬುದನ್ನು ನೋಡುವುದಾದರೆ ಪೇಪರ್ ಒಂದರಲ್ಲಿ ಜನರಲ್ ಅವೆರ್ನೆಸ್ ಸಾಮಾನ್ಯ ಕನ್ನಡ ಜನರಲ್ ಇಂಗ್ಲಿಷ್ ಮತ್ತು ಕಂಪ್ಯೂಟರ್ ವಿಷಯದ ಮೇಲೆ ಪ್ರತಿಯೊಂದು ವಿಷಯದ ಮೇಲೆ ಇಪ್ಪತ್ತೈದು ಅಂಕಗಳಂತೆ ಒಟ್ಟು ನೂರು ಅಂಕಗಳಿಗೆ ಪರೀಕ್ಷೆ ನಡೆಸಬಹುದು.
ಇನ್ನೊಂದು ಪೇಪರಲ್ಲಿ ಪಂಚಾಯತ್ ರಾಜ್ ಕಾಯ್ದೆಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬಹುದು. ನೇರ ನೇಮಕಾತಿಗೆ ಸಂಬಂಧಿಸಿದ ಅಭ್ಯರ್ಥಿಗಳು ಕೂಡ ಮೇಲೆ ತಿಳಿಸಿರುವ ಪುಸ್ತಕಗಳನ್ನು ಓದಬಹುದು ಇದರ ಜೊತೆಗೆ ಸಾಮಾನ್ಯ ಕನ್ನಡಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಅಭಿರಾಮ್ ಅವರ ಸಾಮಾನ್ಯ ಕನ್ನಡ ಲಕ್ಷ್ಮಣ ಗಡೇಕರ್ ಅವರ ಕನ್ನಡ ರತ್ನ ಮತ್ತು ಕನ್ನಡ ಸಾಹಿತ್ಯ ಪರಿಷತ್ ಅವರ ಪುಸ್ತಕವನ್ನು ಕೂಡ ಓದಬಹುದು. ಇನ್ನು ಜನರಲ್ ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದಂತೆ ಒಬ್ಜೆಕ್ಟಿವ್ ಇಂಗ್ಲಿಷ್ ಅನ್ನುವ ಪುಸ್ತಕವನ್ನು ಬೇರೆಬೇರೆ ಪಬ್ಲಿಕೇಶನ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿಸಿದ್ದಾರೆ ಅವುಗಳನ್ನು ಓದಬಹುದು. ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ಬಳಿ ಕಂಪ್ಯೂಟರ್ ಸರ್ಟಿಫಿಕೇಟ್ ಇರುವುದು ಅವಶ್ಯಕ.
ನೋಡಿದ್ರಲ್ಲ ಸ್ನೇಹಿತರೆ ಪಂಚಾಯತ್ ರಾಜ್ ಇಲಾಖೆಯಲ್ಲಿ ಬೃಹತ್ ಮಟ್ಟದಲ್ಲಿ ನೇಮಕಾತಿ ನಡಿಯುವ ಸೂಚನೆ ಸಿಕ್ಕಿದೆ ನೀವು ಕೂಡ ಹುದ್ದೆಯ ನೇಮಕಾತಿಯ ನೋಟಿಫೈ ಆದಾಗ ಅರ್ಜಿಯನ್ನು ಸಲ್ಲಿಸಿ ಪರೀಕ್ಷೆಗೆ ಬೇಕಾದ ಪೂರ್ವ ತಯಾರಿ ಇಂದಿನಿಂದಲೇ ನಡೆಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನುಗಳಿಸಿ ಸರ್ಕಾರಿ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ. ಈ ಮಾಹಿತಿಯನ್ನು ಇತರರಿಗೂ ತಿಳಿಸಿ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430