ಬಗೆ ಬಗೆಯಾದ ತಿಂಡಿಗಳನ್ನು ತಿನ್ನುವುದಕ್ಕೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಿಯೆ ಸ್ವಚ್ಛವಾಗಿ, ಚಿಕ್ಕವಾಗಿ ಮಾಡಿಕೊಂಡು, ಕುಟುಂಬದ ಜೊತೆಗೆ ಕುಳಿತು ತಿನ್ನುವುದು ಹಬ್ಬವೇ ಸರಿ. ಹೀಗೆ ಮನೆಯಲ್ಲಿಯೆ ಮಾಡಿಕೊಳ್ಳುವ ಜನರಿಗೆ ರುಚಿ ರುಚಿಯಾಗಿರುವ ಪಾಲಕ್ ರೈಸ್ ರೆಸಿಪಿ ಇಲ್ಲಿದೆ.
ಬೇಕಾಗುವ ಸಾಮಾನುಗಳು: ಒಂದು ಕಪ್ ಅನ್ನ, ಅರ್ಧ ಕಟ್ಟು ಪಾಲಕ್ ಸೊಪ್ಪು ಬೇಯಿಸಿಟ್ಟು ಕೊಂಡಿರಬೇಕು. ಕರಿಬೇವು ಚಕ್ಕೆ, ಲವಂಗ, ಪಲಾವ್ ಎಲೆ, ಲವಂಗ, ಮೂರರಿಂದ ನಾಲ್ಕು ಉದ್ದಕ್ಕೆ ಹೆಚ್ಚಿದ ಹಸಿಮೆಣಸಿನಕಾಯಿ, ಜೀರಿಗೆ ಅರ್ಧ ಟೇಬಲ್ ಸ್ಪೂನ್, ಅರಿಶಿನ ಅರ್ಧ ಟೇಬಲ್ ಸ್ಪೂನ್ ಒಂದು ಈರುಳ್ಳಿ, ಕೊತ್ತಂಬೆರಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಒಂದು ಸ್ಪೂನ್, ಉಪ್ಪುಎಣ್ಣೆ
ಮಾಡುವ ವಿಧಾನ: ಪಾಲಕ್ ಸೊಪ್ಪಿನ ಹಸಿ ವಾಸನೆ ಹೋಗಲಾಡಿಸಲು ಐದು ನಿಮಿಷಗಳ ಕಾಲ ಪಾಲಕ್ ಎಲೆಗಳನ್ನು ನೀರಲ್ಲಿ ಕುದಿಸಿ ತಣ್ಣಗಾದ ಮೇಲೆ ರುಬ್ಬಿಕೊಳ್ಳಬೇಕು. ಈಗ ಒಂದು ಪ್ಯಾನ್ ನಲ್ಲಿ ಎಣ್ಣೆ ಹಾಕಿಕೊಳ್ಳಬೇಕು ಒಂದುವೇಳೆ ತುಪ್ಪ ಬೇಕಾದಲ್ಲಿ ಅದನ್ನು ಎಣ್ಣೆಯ ಬದಲಾಗಿ ಬಳಸಬಹುದು. ಎಣ್ಣೆ ಕಾದ ಮೇಲೆ ಜೀರಿಗೆ, ಪಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ ಹಾಕಿಕೊಳ್ಳಬೇಕು. ನಂತರ ಹಸಿಮೆಣಸಿನಕಾಯಿ, ಈರುಳ್ಳಿ, ಕರೀಬೇವು ಹಾಕಬೇಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಪಾಲಕ್ ಸೊಪ್ಪು ಬೇಸಿಗೆಯಲ್ಲಿ ಎಷ್ಟು ತಿನ್ನುತ್ತೆವೆ ಅಷ್ಟು ದೇಹಕ್ಕೆ ಒಳ್ಳೆಯದು. ಐದು ತಿಂಗಳು ಆರು ತಿಂಗಳಾದ ಮೇಲೆ ಬಾಣಂತಿಯರಿಗೆ ಪಾಲಕ್ ಸೊಪ್ಪುಗಳನ್ನು ಕೊಟ್ಟರೆ ಎದೆಯ ಹಾಲು ಚೆನ್ನಾಗಿ ಉತ್ಪಾದನೆ ಆಗುತ್ತದೆ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ರುಬ್ಬುರುವ ಪಾಲಕ್ ಪೇಸ್ಟ್ ಹಾಕಿ, ಜೀರಿಗೆ, ಅರಿಶಿನ ಹಾಕಿ ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಎಣ್ಣೆ ಬಿಡುವವರೆಗೂ ಕುದಿಸಬೇಕು. ಎಣ್ಣೆ ಬಿಟ್ಟಾಗ ಪಾಲಕ್ ಸೊಪ್ಪಿನ ರುಚಿಯೆ ಬದಲಾಗಿಬಿಡುತ್ತದೆ. ಗೊಜ್ಜಿನಂತೆ ರೆಡಿಯಾಗಿರುವ ಪಾಲಕ್ ಪೇಸ್ಟ್ ಗೆ ಅನ್ನ ಹಾಕಿ ಕಲಸಿಕೊಂಡರೆ ಪಾಲಕ್ ರೈಸ್ ರೆಡಿಯಾಗುತ್ತದೆ. ಹಾಗೆ ರೈಸ್ ಅನ್ನು ತಿನ್ನಬಹುದು ಆಥವಾ ಇದರೊಂದಿಗೆ ಚಟ್ನಿ ಅಥವಾ ಮೊಸರು ಪಚಡಿಯೊಂದಿಗೆ ಬೇಕಾದರೂ ತಿನ್ನಬಹುದು.