ಇತ್ತೀಚಿನ ದಿನಗಳಲ್ಲಿ ಒಯೋ ತುಂಬಾ ಹೆಸರು ಮಾಡುತ್ತಿದೆ. ಆದರೆ ಇದರ ಬಗ್ಗೆ ಎಲ್ಲರಿಗೂ ತಿಳಿದಿಲ್ಲ. ಇದು ಅನೇಕ ದೇಶಗಳಲ್ಲಿ ತನ್ನ ಸೇವೆಯನ್ನು ಸಲ್ಲಿಸುತ್ತಿದೆ. ಹಾಗೆಯೇ ಇದರಿಂದ ಅನೇಕ ಜನರು ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಇದರ ಸ್ಥಾಪಕ ಇಂಜಿನಿಯರಿಂಗ್ ಮಾಡುತ್ತಿದ್ದ ಒಬ್ಬ ಹುಡುಗ ಆಗಿದ್ದಾನೆ. ಈತನ ಹೆಸರು ರಿತೇಶ್ ಅಗರ್ವಾಲ್. ಒಯೋ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಹೋಟೆಲ್ ಗಳು ಎಂದರೆ ತಾಜ್ ಹೋಟೆಲ್ ನೆನಪಾಗುತ್ತಿತ್ತು. ಆದರೆ ಈಗ ಹೆಚ್ಚಾಗಿ ಹೋಟೆಲ್ ಗಳ ಮೇಲೆ ಒಯೋ ಎಂದು ಬರೆದಿರುತ್ತದೆ. ನವೆಂಬರ್ 16 1993ರಲ್ಲಿ ಒರಿಸ್ಸಾದ ಕಥಕ್ ನಲ್ಲಿ ರಿತೇಶ್ ಅಗರ್ವಾಲ್ ಅವರು ಜನಿಸಿದರು. ತನ್ನ 15ನೇ ವಯಸ್ಸಿನಲ್ಲಿ ಒಂದು ಪುಸ್ತಕವನ್ನು ಬರೆದರು. ಈ ಪುಸ್ತಕ ಫ್ಲಿಪ್ಕಾರ್ಟ್ ನಲ್ಲಿ ಬಹಳ ಮಾರಾಟವಾಗುತ್ತದೆ. ಹಾಗೆಯೇ 2011ರಲ್ಲಿ ಸಾಟ್ ಬರೆಯಲು ದೆಹಲಿಗೆ ಬಂದು ಈ ಪರೀಕ್ಷೆಯಲ್ಲಿ ನಪಾಸಾಗುತ್ತಾರೆ.

ಇದ್ದ ಹಣವೆಲ್ಲಾ ಖಾಲಿಯಾಗಿ ಊಟಕ್ಕಾಗಿ ಪಾರ್ಟ್ ಟೈಮ್ ಜಾಬ್ ಮಾಡುತ್ತಾರೆ. ಒಂದು ದಿನ ಒಂದು ಹೋಟೆಲ್ ನೋಡಿದಾಗ ಅದು ತುಂಬಾ ಕೆಟ್ಟದಾಗಿ ಇರುತ್ತದೆ. ಆಗ ಅಂಗಡಿಯ ಮಾಲೀಕನ ಹತ್ತಿರ ಹೋಗಿ ಎರಡು ರೂಮ್ ಗಳನ್ನು ನನಗೆ ಕೊಡಿ ಗ್ರಾಹಕರು ಬರುವ ಹಾಗೆ ಮಾಡುತ್ತೇನೆ ಎಂದರು. ನಂತರ ಈ ರೂಮನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ. ಈ ರೂಮುಗಳು ಅತಿ ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದಲ್ಲಿ ಎಲ್ಲರಿಗೂ ಸಿಗುವಂತೆ ಮಾಡುತ್ತಾನೆ. ನಂತರ ಓಯೋವನ್ನು ಸ್ಥಾಪಿಸಿ ಸುಲಭವಾಗಿ ಜನರಿಗೆ ರೂಮುಗಳು ಸಿಗುವಂತೆ ಮಾಡುತ್ತಾರೆ.

ಈಗ ಇದು ಅತಿ ದೊಡ್ಡ ದೊಡ್ಡ ಪ್ರಮಾಣದಲ್ಲಿ ಹೆಸರನ್ನು ಮಾಡುತ್ತಿದೆ. ಈಗ 4,58,000 ರೂಮುಗಳು ಮತ್ತು 2,00,000 ಹೋಟೆಲ್ ಗಳಲ್ಲಿ ಇದು ಇದೆ. ಚೀನಾ, ಮಲೇಷಿಯಾ ಮುಂತಾದ ದೇಶಗಳಲ್ಲಿ ಇದು ಒಳ್ಳೆಯ ಯಶಸ್ಸನ್ನು ಕಾಣುತ್ತಿದೆ. ಈಗ 6000ಕೋಟಿ ರೂಪಾಯಿಗಳ ಅಧಿಪತಿ ಆಗಿದ್ದಾರೆ. ಇವರು ಈಗಿನ ಯುವಜನತೆಗೆ ಮಾದರಿಯಾಗಿದ್ದಾರೆ. ಒಂದು ಉಪಾಯ ಮನುಷ್ಯನ ಜೀವನವನ್ನು ಬದಲಾಯಿಸುತ್ತದೆ ಎಂಬ ಸಂದೇಶವನ್ನು ನಾವು ಇದರಿಂದ ತಿಳಿಯಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!