ನಮ್ಮ ಸುತ್ತಮುತ್ತಲಿನ ವಿಷಯ, ನಮ್ಮ ದೇಹದ ಅಂಗಾಂಗಗಳ ಬಗ್ಗೆ, ನಾವು ಬಳಸುವ ವಸ್ತುಗಳ ಬಗ್ಗೆ ಕೆಲವು ಮಾಹಿತಿ ನಮಗೆ ಗೊತ್ತಿರುವುದಿಲ್ಲ. ಅವುಗಳನ್ನು ಕೇಳಿದಾಗ ನಮಗೆ ಆಶ್ಚರ್ಯವಾಗುತ್ತದೆ. ಅಂತಹ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೋಡೋಣ.
ರಕ್ತವಿಲ್ಲದ ದೇಹವನ್ನು ಊಹಿಸಲು ಸಾಧ್ಯವಿಲ್ಲ. ರಕ್ತ ಕೊರತೆಯಿಂದ ಕೆಲವು ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಮಾನವನ ದೇಹದಲ್ಲಿ 5 ಲೀಟರ್ ರಕ್ತ ಇರುತ್ತದೆ. ಮನುಷ್ಯನ ದೇಹದಲ್ಲಿ ಪರಿಚಲನೆಯಾಗುವ ರಕ್ತದ ಪ್ರಮಾಣವು ಅವರ ತೂಕ ಮತ್ತು ಎತ್ತರವನ್ನು ಅವಲಂಬಿಸಿರುತ್ತದೆ ಆದರೆ ಸರಾಸರಿ ವಯಸ್ಕರು 5 ಲೀಟರ್ ರಕ್ತವನ್ನು ಹೊಂದಿರುತ್ತಾರೆ. ಅಡುಗೆ ಮಾಡಲು ತರಕಾರಿ ಬೇಕೇಬೇಕು, ಕೆಲವರಿಗೆ ಕೆಲವು ತರಕಾರಿ ಇಷ್ಟವಾಗುತ್ತದೆ. ಇಡಿ ಪ್ರಪಂಚದಲ್ಲಿ ಹೆಚ್ಚು ಉಪಯೋಗಿಸುವ ತರಕಾರಿ ಎಂದರೆ ಅದು ಟೊಮೆಟೊ.
ಕಪ್ಪು ಬಾವುಟ ಪ್ರತಿಭಟನೆಯನ್ನು ಸೂಚಿಸುತ್ತದೆ. ಯಾವುದಾದರೂ ವಿಷಯ ಅಥವಾ ಪ್ರಕರಣದ ಬಗ್ಗೆ ಪ್ರತಿಭಟನೆ ಮಾಡುವಾಗ ಕಪ್ಪು ಬಾವುಟ ಅಥವಾ ಕಪ್ಪು ಪಟ್ಟಿ, ರಿಬ್ಬನ್ ಬಳಸಿ ಪ್ರತಿಭಟನೆ ನಡೆಸುತ್ತಾರೆ. ನಾವು ಬದುಕಬೇಕಾದರೆ ಆಹಾರವನ್ನು ಸೇವಿಸಬೇಕು. ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸಲಾಗುತ್ತದೆ. ಮಹಾಭಾರತದಲ್ಲಿ ಬರುವ ಪಾಂಡವರ ಗುರು ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮ ಶಾಪಕ್ಕೆ ಗುರಿಯಾಗಿ ಚಿರಂಜೀವಿ ಆಗಿದ್ದಾನೆ ಹಾಗೂ ಅವನ ದೇಹದಿಂದ ರಕ್ತ ಯಾವಾಗಲೂ ಸೋರುತ್ತಿರುತ್ತದೆ.
ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರೂ ಇಷ್ಟಪಡುವ ಕುರ್ ಕುರೆ ನಮ್ಮ ದೇಶ ಭಾರತದ ಪ್ರಮುಖ ತಿಂಡಿಯಾಗಿದೆ. ಇದು ಬೇರೆ ದೇಶಗಳಲ್ಲಿ ಸಿಗುವುದಿಲ್ಲ. ಬೇಕರಿಯಲ್ಲಿ ಸಿಗುವ ಪ್ರಮುಖ ಆಹಾರಗಳಲ್ಲಿ ಸಮೋಸ ಒಂದು ಪ್ರಮುಖ ಆಹಾರವಾಗಿದೆ. ಸೋಮಾಲಿಯಾ ಎಂಬ ದೇಶದಲ್ಲಿ ಸಮೋಸ ತಿನ್ನುವುದನ್ನು ನಿಷೇಧಿಸಲಾಗಿದೆ.
ಒಂಭತ್ತು ಗ್ರಹಗಳಲ್ಲಿ ಒಂದೊಂದು ಗ್ರಹವು ತನ್ನದೆ ಆದ ವಿಶೇಷತೆಯನ್ನು ಹೊಂದಿದೆ. ಸೌರಮಂಡಲದಲ್ಲಿ ಭೂಮಿ ಹೆಚ್ಚು ನೀರನ್ನು ಹೊಂದಿರುವ ಗ್ರಹವಾಗಿದೆ. ನಾವು ಯೋಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದೇವೆ ಅದರಂತೆ ಯೋಚಿಸಬೇಕು ಆದರೆ ಅತಿಯಾಗಿ ಯೋಚಿಸಬಾರದು. ಅತಿಯಾಗಿ ಯೋಚಿಸುವುದರಿಂದ ಮರೆಗುಳಿತನ ಎಂಬ ಆರೋಗ್ಯ ಸಮಸ್ಯೆ ಬರುತ್ತದೆ. ಆತಂಕ ಮತ್ತು ಒತ್ತಡದಿಂದ ಪ್ರವಹಿತವಾದ ದೇಹದ ಒಂದು ಭಾಗ ನರಮಂಡಲವಾಗಿದೆ.
ಈ ಭಾಗ ಮೆಮೋರಿ ಮತ್ತು ಕಲಿಕೆಯಂತಹ ಮೂಲಭೂತ ಕಾರ್ಯಗಳಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸುತ್ತದೆ. ನಿರಂತರ ಆತಂಕ ಮತ್ತು ಅತಿಯಾದ ಯೋಚನೆಯಿಂದ ಮರೆಗುಳಿತನ ಉಂಟಾಗಬಹುದು. ದೂರದರ್ಶನದಲ್ಲಿ ಪ್ರಮುಖವಾದ ಕೆಲವು ಚಾನೆಲ್ ಗಳಲ್ಲಿ ಚಂದನ ವಾಹಿನಿಯು ಪ್ರಮುಖ ಚಾನೆಲ್ ಆಗಿದೆ. ಕನ್ನಡ ಚಂದನ ವಾಹಿನಿ 1994 ರಲ್ಲಿ ಪ್ರಾರಂಭವಾಗಿದೆ. ಈ ಮಾಹಿತಿಯು ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾಗುತ್ತದೆ ಆದ್ದರಿಂದ ತಪ್ಪದೆ ಈ ಲೇಖನವನ್ನು ಹೆಚ್ಚಿನ ಜನರಿಗೆ ಅದರಲ್ಲೂ ಯುವಜನತೆಗೆ ಶೇರ್ ಮಾಡಿ.