ಸಾಮಾನ್ಯವಾಗಿ ಈರುಳ್ಳಿಯನ್ನು ನೋಡದವರು ಹಾಗೂ ಅದನ್ನು ಬಳಸಿದವರು ಯಾರು ಇಲ್ಲ ಅಡುಗೆಮನೆಯಲ್ಲಿ ಈರುಳ್ಳಿಯನ್ನು ಬಳಸೇ ಬಳಸುತ್ತಾರೆ. ಈರುಳ್ಳಿಯನ್ನು ಒಳ್ಳೆಯ ಗಡ್ಡೆ ಎಂದು ಕರೆಯಬಹುದು ಇದರಲ್ಲಿ ಅನೇಕ ಆರೋಗ್ಯಕರ ಅಂಶಗಳು ಇವೆ ಅದರ ಬಗ್ಗೆ ನಾವಿಂದು ನಿಮಗೆ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಈರುಳ್ಳಿಯಲ್ಲಿ ಒಳ್ಳೆಯ ಅಂಶಗಳಿದ್ದು ಗಾಯವನ್ನು ಮಾಸುವಂತಹ ಗುಣವನ್ನು ಇದು ಹೊಂದಿದೆ. ಕೆಲವರಿಗೆ ಹಳೆಯ ಗಾಯಗಳು ಇರುತ್ತವೆ ಎಷ್ಟೇ ಮಾಡಿದರೂ ವಾಸಿಯಾಗುವುದಿಲ್ಲ ಅಂಥವರು ಹಸಿ ಈರುಳ್ಳಿಯನ್ನು ಸೇವಿಸಬೇಕು ಅದರಲ್ಲಿ ಬಿಳಿ ಈರುಳ್ಳಿಯನ್ನು ಸೇವಿಸುವುದು ಬಹಳ ಉತ್ತಮ. ಇರುಳಿನ ಸೇವಿಸುವುದರಿಂದ ದೇಹದಲ್ಲಿ ಹೆಚ್ಚಾಗಿರುವಂತಹ ಕೊಬ್ಬಿನ ಅಂಶವನ್ನು ಅದು ಹೋಗಲಾಡಿಸುತ್ತದೆ ತೂಕ ಹೆಚ್ಚಿಗೆ ಇರುವಂತವರು ಈರುಳ್ಳಿಯನ್ನು ಸೇವಿಸಬೇಕು.

ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಿ ಕೊಬ್ಬಿನಂಶ ಹೆಚ್ಚಾದಾಗ ರಕ್ತನಾಳಗಳು ಬ್ಲಾಕ್ ಆಗುತ್ತದೆ ಆಗ ಆಪರೇಷನ್ ಮಾಡಬೇಕು ಎಂದು ಹೇಳುತ್ತಾರೆ ಅದರ ಬದಲಿಗೆ ಅಂತಹ ಸಮಯದಲ್ಲಿ ಈರುಳ್ಳಿ ರಸವನ್ನು ಬಳಕೆಮಾಡಬೇಕು. ಈರುಳ್ಳಿ ರಸ ಒಳಗೆ ಇರುವಂತಹ ಕೊಬ್ಬನ್ನು ಕರಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ತಲೆ ಕೂದಲು ಉದುರುವುದು ಎಲ್ಲರನ್ನು ಕಾಡುತ್ತಿರುವಂತಹ ಸಮಸ್ಯೆಯಾಗಿದೆ ಜಾಹಿರಾತುಗಳಲ್ಲಿ ಶಾಂಪೂಗಳಲ್ಲಿ ಈರುಳ್ಳಿಯನ್ನು ಬಳಕೆ ಮಾಡಿರುವ ರೀತಿಯಲ್ಲಿ ತೋರಿಸುತ್ತಾರೆ. ಹೇರಳವಾಗಿ ಕೂದಲನ್ನ ಬೆಳೆಸುವುದಕ್ಕೆ ಈರುಳ್ಳಿ ಯನ್ನ ಬಳಸಬಹುದು. ಇನ್ನು ಈರುಳ್ಳಿಯಲ್ಲಿ ಕಾಮೋತ್ತೇಜಕ ಗುಣಗಳಿರುವುದರಿಂದ ವಿದ್ಯಾರ್ಥಿಗಳು ಬ್ರಹ್ಮಚಾರಿಗಳು ಸನ್ಯಾಸಿಗಳು ಇದನ್ನ ಬಳಸುವುದಿಲ್ಲ.

ಕೆಂಪು ಈರುಳ್ಳಿಯಲ್ಲಿ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ತಡೆಗಟ್ಟುವ ಆರ್ಗನೋಸಲ್ಫ್ ಗಳು ಸಮೃದ್ಧವಾಗಿರುತ್ತವೆ ಇದರಲ್ಲಿ ರಕ್ತವನ್ನು ತೆಳ್ಳಗಾಗಿಸುವ ಥಿಯೋಸ್ಫೆಲೇಟ್ ಗಳಿವೆ ಅವು ಹೃದಯಾಘಾತ ಆಗುವುದನ್ನು ತಡೆಯುತ್ತವೆ. ಈರುಳ್ಳಿ ಕರುಳಿಗೆ ಅನುಕೂಲಕರವಾದ ಬ್ಯಾಕ್ಟೀರಿಯಾವನ್ನು ಆಹಾರದ ಮೂಲವಾಗಿ ಉತ್ತೇಜಿಸುತ್ತದೆ ಇದರಲ್ಲಿ ಆರೋಗ್ಯಕರವಾದ ಉತ್ತಮ ಮಟ್ಟವನ್ನು ಕಾಪಾಡಿಕೊಳ್ಳಲು ನಿಮ್ಮ ದೇಹಕ್ಕೆ ಸಹಾಯಮಾಡುತ್ತದೆ.

ಈರುಳ್ಳಿ ಅತಿಸಾರ ಮತ್ತು ಮಲಬದ್ಧತೆಯನ್ನು ತಡೆಗಟ್ಟಲು ಮತ್ತು ಆರೋಗ್ಯಕರ ಕ್ರಿಯೆಯನ್ನು ಪ್ರೋತ್ಸಾಹಿಸುತ್ತದೆ. ದೇಹದ ಶಕ್ತಿ ಸಾಮರ್ಥ್ಯವನ್ನು ವೃದ್ಧಿಸುವ ಸಾಮರ್ಥ್ಯ ಈರುಳ್ಳಿಯಲ್ಲಿ ಇರುತ್ತದೆ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಅಡಕವಾಗಿರುತ್ತದೆ.

ಕೀಲು ನೋವನ್ನು ನಿವಾರಿಸುವಲ್ಲಿ ಈರುಳ್ಳಿ ಉತ್ತಮವಾಗಿ ಕೆಲಸವನ್ನು ಮಾಡುತ್ತದೆ ಕೆಲವರಿಗೆ ದೇಹದ ಮೂಳೆಗಳಲ್ಲಿ ಕೀಲುನೋವು ಕಾಣಿಸಿಕೊಳ್ಳುತ್ತದೆ ಅಂಥವರು ಈರುಳ್ಳಿಯ ರಸವನ್ನು ಎಣ್ಣೆಯಲ್ಲಿ ಹಾಕಿ ನೋವಿರುವ ಜಾಗಕ್ಕೆ ಮಸಾಜ್ ರೀತಿಯಲ್ಲಿ ಬಳಸುವುದರಿಂದ ಕೀಲುನೋವು ಬಹು ಬೇಗನೆ ವಾಸಿಯಾಗುತ್ತದೆ. ಅಷ್ಟೇ ಅಲ್ಲದೆ ಈರುಳ್ಳಿ ದೇಹದಲ್ಲಿ ರಕ್ತಕಣಗಳು ಸರಾಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಈ ರೀತಿಯಾಗಿ ಈರುಳ್ಳಿಯಲ್ಲಿ ಅನೇಕ ಔಷಧೀಯ ಗುಣಗಳಿದ್ದು ಈರುಳ್ಳಿಯನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಾಗಿ ಬೇಕಾಗುವಂತಹ ಆರೋಗ್ಯಕರ ಅಂಶವನ್ನು ನಾವು ಪಡೆದುಕೊಳ್ಳಬಹುದಾಗಿದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆಗೆ ನಿಮ್ಮ ಪರಿಚಿತರು ಹಾಗು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!