ಕರೋನಾ ವೈರಸ್ ವೇಗವಾಗಿ ಹರಡುತ್ತಿರುವ ಈ ಸಮಯದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ. ಇದನ್ನು ಸರಕಾರ ಜನಗಳ ಒಳಿತಿಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿರಲೆ ಬೇಕು. ಹೊರಗೆ ಹೋದ ಸಂದರ್ಭದಲ್ಲಿ ಆಗಾಗ ಕೈಗಳಿಗೆ ಸ್ಯಾನಿಟೈಸರ್ ಬಳಸಬೇಕು. ಒಬ್ಬ ಮನುಷ್ಯನಿಂದ ಆರು ಅಡಿಗಳ ಅಂತರ ಕಾಯ್ದುಕೊಳ್ಳಬೇಕು. ಅನಿವಾರ್ಯತೆ ಇದ್ದಾಗ ಮಾತ್ರ ಹೊರಗೆ ಹೋಗುವುದು ಉತ್ತಮ ಎಂಬ ಕಾನೂನು ತಂದಿದೆ. ಆದರೆ ಬೆಂಗಳೂರಿನಲ್ಲಿ ಈ ನಿಯಮದ ಉಲ್ಲಂಘನೆ ಆಗುತ್ತಿದೆ. ಅದರ ಅಂಕಿ ಅಂಶಗಳನ್ನು ಇಲ್ಲಿರುವ ಮಾಹಿತಿಯನ್ನು ತಿಳಿಯೋಣ.
ಜೂನ್ 9 ರಿಂದ ಮಾಸ್ಕ್ ಧರಿಸದೆ ಇದ್ದವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲಾಗುತ್ತಿತ್ತು. ಅಂದಿನಿಂದ ಇಂದಿನ ವರೆಗೆ ಕೇವಲ ಬೆಂಗಳೂರಿನಲ್ಲಿರುವ ಬಿಬಿಎಂಪಿ ವ್ಯಾಪ್ತಿಯಲ್ಲಿನ ಮಾಹಿತಿ ಹಿಡಿದರೆ ಮೂರು ಕೋಟಿಗೂ ಮಿಗಿಲಾಗಿ ದಂಡದ ಹಣ ಸಂಗ್ರಹ ಆಗಿದೆ. ಮಾಹಿತಿಯ ಪ್ರಕಾರ ಬೆಂಗಳೂರಿನ ನಿವಾಸಿಗಳು 3,05,37,380 ರೂಪಾಯಿಗಳಷ್ಟು ದಂಡ ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣದಿಂದ ಪಾವತಿಸಿದ್ದಾರೆ.
ಮಾಸ್ಕ್ ಧರಿಸದೆ ದಂಡ ಪಾವತಿಸಿದ 1,27,421 ಜನರಿಂದ 2,73,33,969 ರೂಪಾಯಿಗಳು ವಸೂಲಿ ಆಗಿದೆ ಎಂದು ತಿಳಿದು ಬಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ದಂಡ ಪಾವತಿಸಿದ 15,271 ಜನರಿಂದ 32,03,412 ರೂಪಾಯಿ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ. ಒಟ್ಟರೆ ನಿಯಮ ಪಾಲಿಸದೆ ದಂಡ ಪಾವತಿಸಿದ 1,42,692 ಜನರಿಂದ 3,05,37,380 ರೂಪಾಯಿಗಳು ವಸೂಲಿ ಆಗಿರುವ ಮಾಹಿತಿ ದೊರಕಿದೆ.
ನಮಗಾಗಿಯೆ ಮಾಡಿದ ನಿಯಮಗಳನ್ನು ಮೀರುವುದು ಎಷ್ಟರ ಮಟ್ಟಿಗೆ ಸರಿ. ಹೊರಗೆ ಹೋಗದಿರಲು ಸಾಧ್ಯವಿಲ್ಲ ಎಂದಾದರೆ ಮಾಸ್ಕ್ ಧರಿಸಿ ಹೊಗುವುದು ಉತ್ತಮವಲ್ಲವೆ. ನಮ್ಮ ಸುರಕ್ಷತೆಗಾಗಿ ಮಾಸ್ಕ್ ಧರಿಸುವ ನಿಯಮ ಜಾರಿಗೆ ತರಲಾಗಿದೆ. ನಿಯಮ ಪಾಲಿಸಿ ನಮ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮದೆ ಜವಾಬ್ದಾರಿಯಾಗಿದೆ.