ಒಬ್ಬ ರೈತನಿಗೆ ಬಹಳ ವಯಸಾಗಿರತ್ತೆ ಹಾಗಾಗಿ ಅವನಿಗೆ ಯಾವ ಕೆಲಸವನ್ನೂ ಮಾಡಲು ಸಾಧ್ಯ ಆಗ್ತಾ ಇರಲಿಲ್ಲ. ಹೀಗಾಗಿ ಸದಾಕಾಲ ವರಂಡಾದ ಮೇಲೆ ಕುಳಿತು ಕಾಲ ಕಳೆಯುತ್ತಾ ಇರುತ್ತಾನೆ. ಮಗ ಯಾವಾಗಲೂ ಹೊಲದಲ್ಲಿ ಕೆಲಸಮಾಡ್ತ ಇದ್ದ ಮಗನಿಗೆ ಯಾವಾಗ ನೋಡಿದ್ರೂ ತಂದೆ ಹೊರಗೇ ಕುಳಿತಿರುವುದು ಕಾನಸ್ತಾ ಇರತ್ತೆ. ಹಾಗಾಗಿ ಇವರು ಇನ್ನು ಮುಂದೆ ಯಾವ ಕೆಲಸಕ್ಕೂ ಪ್ರಯೋಜನಕ್ಕೆ ಬರಲ್ಲ ಎಂದು ತಿಳಿದ ಮಗ ಇದರಿಂದ ತುಂಬಾ ನಿರಾಸೆಗೆ ಒಳಗಾಗುತ್ತಾನೆ. ಒಂದು ದಿನ ಮಗ ದೊಡ್ಡದಾದ ಒಂದು ಮರದ ಶವದ ಪೆಟ್ಟಿಗೆಯನ್ನು ತಯಾರು ಮಾಡಿಸುತ್ತಾನೆ. ಅದನ್ನ ವಾರಾಂಡದ ಬಳಿ ಎಳೆದು ತಂದು ತಂದೆಯ ಬಳಿ ಈ ಪೆಟ್ಟಿಗೆಯಲ್ಲಿ ಮಲಗಿಕೊ ಎಂದು ಹೇಳುತ್ತಾನೆ. ಮಗನ ಮಾತಿಗೆ ಆ ತಂದೆ ಏನೂ ಮಾತನಾಡದೆ ಆ ಶವದ ಪೆಟ್ಟಿಗೆಯ ಒಳಗೆ ಮಲಗಿಕೊಳ್ಳುತ್ತಾರೆ. ನಂತರ ಆ ಮಗ ಆ ಪೆಟ್ಟಿಗೆಯನ್ನು ಹೊಲದ ಕೊನೆಗೆ ಇರುವ ಒಂದು ಪ್ರಪಾತದ ಬಳಿ ಎಳೆದು ತರುತ್ತಾನೆ.
ಆ ಪ್ರಪಾತ ಸಮೀಪಿಸುತ್ತಿದ್ದಂತೆ ಆ ಪೆಟ್ಟಿಗೆಯಲ್ಲಿ ಮುಚ್ಚಳ ಶಬ್ದ ಮಾಡಲು ಆರಂಭಿಸತ್ತೆ. ಆಗ ಮಗ ಆ ಪೆಟ್ಟಿಗೆಯ ಮುಚ್ಚಳವನ್ನು ತೆಗೆದು ನೋಡುತ್ತಾನೆ. ಅಲ್ಲಿ ಅವನ ತಂದೆ ಪ್ರಶಾಂತವಾಗಿ ಮಲಗಿರುತ್ತಾರೆ. ತಂದೆ ಮಗನನ್ನ ನೋಡಿ, ಮಗನೇ ನೀನು ನನ್ನನ್ನ ಪ್ರಪಾತದ ಕೆಳಗೆ ತಳ್ಳಿ ಹಾಕಲು ಕರೆದೊಯ್ಯುತ್ತಾ ಇರೋದು ಅಂತ ನನಗೆ ತಿಳಿದಿದೆ ಆದರೆ ನೀನು ಹಾಗೆ ಮಾಡುವ ಮೊದಲು ನಾನು ಒಂದು ಸಲಹೆ ನೀಡುತ್ತೇನೆ ಕೇಳುತ್ತೀಯ? ಎಂದು ಕೇಳುತ್ತಾರೆ. ಅದಕ್ಕೆ ಅವರ ಮಗ ಏನದು? ಬೇಗ ಹೇಳು ಎಂದು ಕೋಪದಲ್ಲಿಯೇ ಹೇಳುತ್ತಾನೆ.
ಆಗ ತಂದೆ ಹೇಳುತ್ತಾರೆ, ನೀನು ನನ್ನನ್ನ ಪ್ರಪಾತದ ಕೆಳಗೆ ತಳ್ಳುವುದಾರೆ ಈಗಲೇ ಹೀಗೆ ತಳ್ಳಿಬಿಡು. ಆದರೆ ಈ ಅತ್ಯುತ್ತಮ ಆದ ಮರದ ಶವದ ಪೆಟ್ಟಿಗೆಯನ್ನ ಹಾಗೆಯೇ ಉಳಿಸಿ ಜೋಪಾನವಾಗಿ ಇಟ್ಟಿಡು ಯಾಕಂದ್ರೆ, ಮುಂದೆ ನಿನ್ನ ಮಕ್ಕಳಿಗೂ ಕೂಡ ಉಪಯೋಗಕ್ಕೆ ಬರಬಹುದು ಎಂದು ಆ ವೃದ್ಧ ತಂದೆ ಹೇಳುತ್ತಾರೆ. ಆಗ ಆ ಮಗನಿಗೆ ತನ್ನ ತಪ್ಪಿನ ಅರಿವಾಗಿದೆ ಜ್ಞಾನೋದಯ ಆಗಿ , ಛೀ ನಾನು ಇಂತಹ ಕೆಲಸ ಮಾಡಿಬಿಟ್ಟೆ ಎಂದು ಅನಿಸಿ ತಂದೆಯ ಬಳಿ ಕ್ಷಮೆ ಕೇಳಿ ಗೌರವದಿಂದ ಮನೆಗೆ ಕರೆದುಕೊಂಡು ಹೋಗುತ್ತಾನೆ. ಕೆಲವರು ತಮ್ಮ ಮನೆಯಲ್ಲಿಯೇ ಇರುವ ದೇವರುಗಳನ್ನ ಬಿಟ್ಟು ಹೊರಗಿನ ಎಲ್ಲ ದೇವರನ್ನು ಪೂಜಿಸುತ್ತಾರೆ ಆದರೆ ಏನು ಫಲ? ಹಾಗಾಗಿ ತಂದೆ ತಾಯಿ ನಮ್ಮನ್ನ ಕಷ್ಟ ಪಟ್ಟು ನಾವು ಚನ್ನಾಗಿ ಇರಲಿ ಎಂದು ಯಾವಾಗಲು ಆರೈಸುತ್ತಾರೆ ಹಾಗೂ ನಾವುಗಳು ಚಿಕ್ಕವರಿದ್ದಾಗ ಹಲವು ಕಷ್ಟ ಪಟ್ಟು ಸಾಕಿರುತ್ತಾರೆ ಹಾಗಾಗಿ ನಾವುಗಳು ಅವರಿಗೆ ಇರೋ ಅಷ್ಟು ದಿವಸ ಆಸರೆ ಕೊಟ್ರೆ ದೇವರು ಖಂಡಿತ ನಮ್ಮನ್ನು ಯಾವಾಗಲು ಕಾಪಾಡುತ್ತಾನೆ ಅನ್ನೋ ನಂಬಿಕೆ ನಮ್ಮಲ್ಲಿ ಬರಲಿ ಸ್ನೇಹಿತರೆ.