ಹೊಸ ತೈಲ ಮತ್ತು ಅನಿಲ ತಾಣ ಪತ್ತೆ ಮಾಡುವ ಮೂಲಕ ಭಾರತಕ್ಕೆ ಹೊಸ ಬೆಳಕಾದ ಕೋಲ್ಕತಾ! ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

2018ರಲ್ಲಿ ಈ ತೈಲ ನಿಕ್ಷೇಪ ಪತ್ತೆ ಹೆಚ್ಚಿತ್ತು. ಈ ಕುರಿತು ಸಂಶೋಧನೆ ನಡೆಸಿದ ತೈಲ ಕಂಪನಿ ಇದೀಗ ವಾಣಿಜ್ಯ ವ್ಯವಹಾರಕ್ಕೂ ಬೇಕಾಗುವಷ್ಟು ತೈಲ ನಿಕ್ಷೇಪವಿದೆ ಎನ್ನುವ ವಿಷಯವನ್ನು ಕೇಂದ್ರ ಸರ್ಕಾರ ಖಚಿತಪಡಿಸಿದೆ. ಭಾರತದ ವಾಣಿಜ್ಯ ವ್ಯವಹಾರಕ್ಕೂ ನೆರವಾಗಬಲ್ಲ ತೈಲ ಮತ್ತು ನೈಸರ್ಗಿಕ ಅನಿಲ ತಾಣ ಪತ್ತೆಯಾಗಿರುವುದನ್ನು ಕೇಂದ್ರ ಸರ್ಕಾರ ಈ ಮೂಲಕ ಖಚಿತಪಡಿಸಿದೆ. ಕೋಲ್ಕತಾದಿಂದ ಕೇವಲ 47 ಕಿ.ಮೀ ದೂರದಲ್ಲಿರುವ ಅಶೋಕನಗರದಲ್ಲಿ ನೂತನ ತೈಲ ತಾಣವಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕೂಡಲೇ ಕೋಲ್ಕತ್ತಾದ ಅಶೋಕನಗರಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಉತ್ತರ 24 ಪರಗಣ ಜಿಲ್ಲೆಯ ಅಶೋಕ್‌ನಗರದಲ್ಲಿ ತೈಲ ಮತ್ತು ಅನಿಲ ಪತ್ತೆಯಾಗಿತ್ತು. ಇದೀಗ ವಾಣಿಜ್ಯ ಉದ್ದೇಶಕ್ಕೂ ಬಳಕೆಗೂ ಈ ತೈಲ ತಾಣ ಯೋಗ್ಯವಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ ಹಾಗೂ ಅಷ್ಟೇ ಅಲ್ಲದೆ ಇಲ್ಲಿ ತೈಲ ತೆಗೆಯಲು ಕೇಂದ್ರ ಸರ್ಕಾರ ಎಲ್ಲಾ ತಯಾರಿಯನ್ನು ಕೂಡಾ ಮಾಡಿಕೊಂಡಿದೆ. ವಾಣಿಜ್ಯ ಉದ್ದೇಶಕ್ಕೆ ನೂತನವಾಗಿ ಪತ್ತೆ ಹೆಚ್ಚಿರುವ ತೈಲ ತಾಣದ ಕುರಿತು ONGCಗೆ ತಿಳಿಸಲಾಗಿದೆ.  ತೈಲ ವಾಣಿಜ್ಯ ವ್ಯವಹಾರಕ್ಕೆ ಉತ್ತಮ ಸಾಮರ್ಥ್ಯ ಹೊಂದಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದರು. ಪ್ರಾಯೋಗಿಕ ಪರೀಕ್ಷೆಗಾಗಿ ತೈಲವನ್ನು ಹಲ್ಡಿಯಾ ರಿಫೈನರಿಗೆ ಕಳುಹಿಸಿ ಪರಿಶೀಲಿಸಲಾಗಿದೆ. ಉತ್ತಮ ಗುಣಮಟ್ಟದ ತೈಲ ಹಾಗೂ ಅನಿಲ ತಾಣ ಇದಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ. 

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!