ನಮ್ಮ ರೈತಾಪಿ ವರ್ಗ ಜನರು ತನ್ನ ಜೀವನದ ಪೂರಾ ಸಮಯವನ್ನು ಹೊಲ ಬೇಸಾಯ ದುಡಿಮೆ ಅಲ್ಲಿ ತನ್ನ ಸಂಪೂರ್ಣ ಜೀವನವನ್ನು ವ್ಯಸ್ತವಾಗಿಸಿ ಅನ್ನದಾತ ಎಂದೇ ಪ್ರಸಿದ್ದಿ ಆಗಿದ್ದಾರೆ ಹಾಗೆ ನೋಡುವುದಾದರೆ ಇಂದು ನಾವೆಲ್ಲರೂ ಕೂತು ತಿನ್ನುವ ಒಂದು ತುತ್ತಿನ ಮೇಲೆ ಒಬ್ಬ ರೈತನ ಬೆವರಿನ ಹನಿ ಇದೇ ಇರುತ್ತದೆ ಎಂದರೆ ತಪ್ಪಲ್ಲ ಆದರೆ ಇಂದು ಅದೇ ರೈತರು ತಮ್ಮ ಹೊಲಕ್ಕೆ ಹೋಗಲು ಜಾಗವನ್ನು ಪಡೆಯಲು ತಮ್ಮಲ್ಲೆ ಜಗಳ ವೈಮನಸ್ಸು ಹೊಂದಿದ ರೀತಿ ನಿಜಕ್ಕೂ ಬೇಸರದ ಸಂಗತಿ
ಎಲ್ಲ ರೈತರು ಒಗ್ಗಟ್ಟಿನ ಮೂಲಕ ಸಹಬಾಳ್ವೆ ನಡೆಸಿದರೆ ನೋಡಲು ಬಲು ಚೆಂದ ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವಂತೆ ಒಬ್ಬ ರೈತನ ಹೊಲಕ್ಕೆ ಹೋಗುವಾಗ ಇನ್ನೊಬ್ಬ ರೈತನ ಹೊಲದ ಮೇಲೆ ನಡೆದುಕೊಂಡು ಇಲ್ಲವೇ ದಾಟಿಕೊಂಡು ಹೋಗಬೇಕು ಆದರೆ ಇಂದು ಪ್ರತಿಯೊಬ್ಬ ರೈತನು ಇದಕ್ಕೆ ಅವಕಾಶ ನೀಡದೆ ಹೋದಲ್ಲಿ ಜಗಳ ಸಹಜ ಆದರೆ ಇದಕ್ಕೆ ಎಲ್ಲ ರೈತರು ಸಮಾಲೋಚನೆ ಮಾಡಿ ಸಮುದಾಯ ರಸ್ತೆಯ ಬಗ್ಗೆ ಯೋಚಿಸಿದಲ್ಲಿ ಉತ್ತಮ ಅದರ ಬದಲು ಪ್ರತಿಯೊಬ್ಬನೂ ಪ್ರತ್ಯೇಕ ರಸ್ತೆ ಉಪಯೋಗಿಸಿದರೆ ಆತನ ಸಾಗುವಳಿ ಭೂಮಿ ಕಡಿಮೆ ಆಗುವುದು ಇನ್ನೂ ಎಲ್ಲರೂ ಒಗ್ಗಟ್ಟಾಗಿ ನಮ್ಮ ಭೂಮಿ ನಮ್ಮ ರಸ್ತೆ ಎಂಬ ದೂರಾಲೋಚನೆ ಎಷ್ಟು ಚೆಂದ ಅಲ್ಲವೇ
ಸರಕಾರವು ನರೇಗಾ ಯೋಜನೆ ಅಡಿಯಲ್ಲಿ ಅಂದರೆ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ನಿಮ್ಮ ಹೊಲಕ್ಕೆ ದಾರಿ ಮಾಡಿಕೊಳ್ಳಲ್ಲು ಒಂದು ಬಿಳಿ ಹಾಳೆಯಲ್ಲಿ ಒಂದು ಅರ್ಜಿಯನ್ನು ತುಂಬಿಸಿ ನಿಮ್ಮ ಗ್ರಾಮ ಪಂಚಾಯತಿ ಅಲ್ಲಿ ಸಲ್ಲಿಸಬೇಕು ಆ ಅರ್ಜಿಯಲ್ಲಿ ನಿಮ್ಮ ಹೊಲದ ಸರ್ವೇ ನಂಬರ್ ಮತ್ತು ಪ್ರಸ್ತಾವಿತ ಹೊಲದ ಕೊನೆಯ ಭಾಗದ ನಂಬರ್ ಮತ್ತು ವಿಸ್ತೀರ್ಣವನ್ನು ಸರಿಯಾಗಿ ನಮೂನೆ ಮಾಡಬೇಕು ನಂತರ ಗ್ರಾಮ ಪಂಚಾಯತಿ ಸದಸ್ಯರು ಅ ಅರ್ಜಿಯನ್ನು ಪರಿಶೀಲಿಸಿ ಅದನ್ನು ಗ್ರಾಮ ಪಂಚಾಯತಿ ಸಭೆಯಲ್ಲಿ ಪ್ರಸ್ತಾಪ ಇಡುತ್ತಾರೆ ತದನಂತರ ಇದರ ಬಗ್ಗೆ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ನಮೂದಿಸಲಾಗುತ್ತದೆ ಆಮೇಲೆ ಅನುದಾನ ಲಭ್ಯತೆ ಆದಾರದ ಮೇಲೆ ಆಲೋಚನೆ ಮಾಡಿ ಕಾರ್ಯರೂಪಕ್ಕೆ ತರುತ್ತಾರೆ ಎಂದು ಪರಿಗಣಿಸಬಹುದು
ಒಬ್ಬ ರೈತನ ಅರ್ಜಿ ಅಂಗೀಕಾರ ಆದ ನಂತರ ಹೇಗೆ ರಸ್ತೆಯ ಕಾರ್ಯರೂಪಕ್ಕೆ ತರುವರು ಎಂದು ಸಂಕ್ಷಿಪ್ತ ವರದಿ ಇಲ್ಲಿದೆ ನಿಮ್ಮ ಗ್ರಾಮಕ್ಕೆ ಸಂಬಂಧಪಟ್ಟ ಜೈ ಅವರು ನಿಮ್ಮ ಹೊಲಕ್ಕೆ ರಸ್ತೆ ಮಾಡಲು ಬೇಕಾದ ರಸ್ತೆ ಅಳತೆ ಕಾರ್ಯ ತಗುಲುವ ವೆಚ್ಚ ಹಾಗೂ ಉಪಕರಣ ಮತ್ತು ಕೆಲಸಗಾರ ವೆಚ್ಚ ಪಟ್ಟಿಯನ್ನು ತಯಾರಿ ಮಾಡುತ್ತಾರೆ ತದನಂತರ ಆ ಗ್ರಾಮದಲ್ಲಿ ಇರುವ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಇರುವರಿಗೆ ಅವಕಾಶ ನೀಡಿ ಪ್ರತಿಯೊಬ್ಬ ಕೆಲಸಗಾರರು ಅವರ ವೇತನ ಸೀದಾ ಅವರ ಅಕೌಂಟ್ ಜಮೆ ಆಗುವುದು ಇನ್ನೂ ಕಾರ್ಮಿಕರಿಗೆ ವಾಸ ಮಾಡಲು ನೀರು ಹೀರಿಕೊಳ್ಳಲ್ಲು ಗಡುಸಾದ ಜಾಗ ಸಣ್ಣ ಸಣ್ಣ ಕಲ್ಲು ಹಾಗೂ ನೀರು ಸರಾಗವಾಗಿ ಹರಿಯಲು ಕಂದಕ ಅನ್ನು ನಿರ್ಮಾಣ ಮಾಡುತ್ತಾರೆ .
ನಮ್ಮ ಹೊಲ ನಮ್ಮ ರಸ್ತೆಯ ಕಾರ್ಯರೂಪಕ್ಕೆ ತರಲು ಮುಖ್ಯ ಅಂಶಗಳು ಇಲ್ಲಿವೆ ರೈತರು ಒಗ್ಗಟ್ಟಾಗಿ ಸಮುದಾಯ ರಸ್ತೆಯ ನಿರ್ಮಾಣಕ್ಕೆ ನಿಮ್ಮ ನಡುವೆ ಕುಡು ಮನೋಭಾವ ಬೆಳೆಸುವ ಪ್ರಯತ್ನ ಒಳ್ಳೆಯದು ಇಲವಾದಲ್ಲಿ ಸದುಪಯೋಗ ಸಾದ್ಯ ಇಲ್ಲ ರಸ್ತೆಯ ನಿರ್ಮಾಣ ಅಲ್ಲಿ 60% ಯಂತ್ರಗಳ ಸಹಾಯ ಮತ್ತು 40% ಕಾರ್ಮಿಕರ ಪರಿಶ್ರಮ ಅಗತ್ಯ ಕಾರ್ಮಿಕರ ಕೆಲಸದಲ್ಲಿ ಹೆಣ್ಣು ಗಂಡು ಎನ್ನುವ ಭೇದ ಭಾವ ಇಲ್ಲ ಪ್ರತಿಯೊಬ್ಬರಿಗೂ ಪ್ರತಿದಿನ 309/ ಕೂಲಿ ಹಣವನ್ನು ನೀಡುತ್ತಾರೆ
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ನಿರುದ್ಯೋಗ ಭತ್ಯೆಯನ್ನು ಅಥವಾ ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ಕೆಲಸ ಕೇಳುವುದು ಪ್ರತಿಯೊಬ್ಬ ಕಾರ್ಮಿಕನ ಹಕ್ಕು ಈ ಯೋಜನೆಯ ಬಗ್ಗೆ ಇನ್ನೂ ಮಾಹಿತಿ ಆಳವಾಗಿ ತಿಳಿಯಲು ನಿಮ್ಮ ಹತ್ತಿರದ ಪಂಚಾಯಿತಿ ಅಲ್ಲಿ ವಿಚಾರಿಸಿ ಇಲ್ಲವೇ ನೀವೇ ಆರಿಸಿ ಕಳಿಸಿದ ಗ್ರಾಮ ಪಂಚಾಯಿತಿ ಸದಸ್ಯರ ಬಳಿ ವಿಚಾರಿಸಿ ಈ ಹೊಸ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು