ಸಮಾಜದಲ್ಲಿರುವ ಕೆಲವು ಸ್ವಾಮಿಗಳು, ಮಠಾಧೀಶರು, ಪುರೋಹಿತರು ಜನರ ಹಣವನ್ನು ಬಂಡವಾಳವನ್ನಾಗಿ ಮಾಡಿಕೊಂಡು ಮೋಸ ಮಾಡುತ್ತಿದ್ದಾರೆ. ಅಂತಹ ಸ್ವಾಮೀಜಿಗಳ ಬಗ್ಗೆ ನಿಜಗುಣಾನಂದ ಸ್ವಾಮೀಜಿ ಅವರು ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಸ್ವಾಮಿಗಳು, ರಾಜಕಾರಣಿಗಳು ಜನರನ್ನು ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಅವರು ಮನುಷ್ಯರ ಮೇಲೆ ಪ್ರಯೋಗಶೀಲ ಚಿಂತನೆಗಳನ್ನು ಹೇಳುತ್ತಾ ಶೋಷಣೆ ಎಂಬ ಮೂಢನಂಬಿಕೆಯನ್ನು ಹೇರಿ ಸಮಾಜದಲ್ಲಿ ಜನರನ್ನು ಬಂಡವಾಳವನ್ನಾಗಿ ಮಾಡಿಕೊಂಡಿದ್ದಾರೆ. ಟಿವಿಯಲ್ಲಿ ಸುಳ್ಳು ಭವಿಷ್ಯವನ್ನು ಬಹಳಷ್ಟು ಸ್ವಾಮೀಜಿಗಳು ಹೇಳುತ್ತಾರೆ ಅಂಥವರಿಗೆ ಧಿಕ್ಕಾರ ಎಂದು ನಿಜಗುಣಾನಂದ ಸ್ವಾಮಿಗಳು ಹೇಳಿದ್ದಾರೆ. ಜ್ಯೋತಿಷ್ಯಶಾಸ್ತ್ರ ಎನ್ನುವುದು ನಿಜವಾಗಿದ್ದರೆ ತಮಿಳುನಾಡಿನಲ್ಲಿ ಪ್ರವಾಹಕ್ಕೆ ಸಿಲುಕಿ ಯಾರು ಸಾಯುತ್ತಿರಲಿಲ್ಲ ಎಂದು ಹೇಳಿದರು. ಜನರಿಗೆ ಧಾರ್ಮಿಕ ಮುಖಂಡರು ನ್ಯಾಯಸಮ್ಮತವಾದ ಬೋಧನೆಯನ್ನು ಕೊಡುತ್ತಿಲ್ಲ.

ಹುಟ್ಟಿದ ಮನುಷ್ಯ ಒಮ್ಮೆ ಸಾಯಲೇಬೇಕು ಬದುಕಬೇಕು ಎಂಬ ಆಸೆ ಇದ್ದರೆ ಬದುಕುತ್ತಾನೆ. ಮನುಷ್ಯನಿಗೆ ದೇವರಿಗಿಂತ ಮೊದಲು ಅನ್ನ ಬೇಕು, ಬದುಕಲು ಅರಿವು ಬೇಕು, ಮಾನ ಮುಚ್ಚಲು ಬಟ್ಟೆ ಬೇಕು, ರೋಗ-ರುಜಿನ ಬಂದರೆ ಔಷಧಿ ಬೇಕು, ಮಲಗಲು ಮನೆ ಬೇಕು ಇವು ಮನುಷ್ಯನ ಮೂಲಭೂತ ಸೌಕರ್ಯಗಳು. ಗುಡಿ ಮಂದಿರ ಮಸೀದಿ ಚರ್ಚ್ ಗಳು ಬೇಡ, ಮೂಲಭೂತ ಸೌಕರ್ಯಗಳು ಬೇಕು ಎಂದರೆ ಹಣ ಬೇಕು ಹಣ ಬೇಕೆಂದರೆ ದುಡಿಯಬೇಕು.

ದುಡಿದಾಗ ಅನ್ನ ಸಿಗುತ್ತದೆಯೇ ಹೊರತು ಗುಡಿಗೋಪುರಗಳಿಗೆ ಹೋದರೆ ಜ್ಯೋತಿಷ್ಯರ ಹತ್ತಿರ ಹೋದರೆ ಅನ್ನ ಸಿಗುವುದಿಲ್ಲ. ಮನುಷ್ಯ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂದು ಅವರು ಹೇಳಿದರು. ಲಕ್ಷ್ಮಿ ಪೂಜೆ ಮಾಡಿದರೆ ಹಣ ಸಿಗುತ್ತದೆ ಎಂಬುದಿದ್ದರೆ ಅಮೆರಿಕಾದವರಿಗೆ ಲಕ್ಷ್ಮೀದೇವಿ ಯಾರೆಂಬುದೆ ಗೊತ್ತಿಲ್ಲ.‌ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಲಕ್ಷ್ಮಿ ಪೂಜೆ ಮಾಡಿದರೂ ಹಣ ಸಿಗಲಿಲ್ಲ, ಅಮೆರಿಕಾ, ಜಪಾನ್ ದೇಶದವರಿಗೆ ಲಕ್ಷ್ಮಿ ಯಾರೆಂದು ತಿಳಿಯದೆ ದುಡಿದು ಹಣ ಗಳಿಸಿ ಭಾರತಕ್ಕೆ ಸಾಲ ಕೊಡುವರು.

ಗುಡಿ ಗೋಪುರ, ಮಸೀದಿ, ಚರ್ಚ್ ಗಳಿಂದ ಯಾವ ದೇಶವು ಉದ್ಧಾರವಾಗುವುದಿಲ್ಲ. ಬಸವಣ್ಣ ತಮ್ಮ ವಚನದಲ್ಲಿ ರೈತನು ಶುದ್ಧನಾಗಿರುತ್ತಾನೆ ಅವನನ್ನು ಆರಾಧಿಸಬೇಕು ಎಂದು ತಿಳಿಸಿದ್ದಾರೆ. ಭಾರತದ ಹೆಣ್ಣು ಮಕ್ಕಳು ದೇವರಿಗೆ ಕೊಡುವ ಹಣವನ್ನು ಉಳಿಸಿದರೆ ಬಂಗಾರವನ್ನು ಖರೀದಿಸಬಹುದು ಎಂದು ಸ್ವಾಮೀಜಿ ಹೇಳಿದರು. ಪೂಜಾರಿಗಳು ನೀವು ಕೊಟ್ಟ ಹಣ, ಬೆಣ್ಣೆ-ತುಪ್ಪ ತೆಗೆದುಕೊಂಡು ಒಳ್ಳೆಯ ಜೀವನ ನಡೆಸುತ್ತಾರೆ. ಜಗತ್ತಿನಲ್ಲಿ ಹಲವಾರು ರೀತಿಯ ಮೋಸಗಾರರು ಇದ್ದಾರೆ ಜನರು ಅವರ ಬಗ್ಗೆ ಎಚ್ಚೆತ್ತುಕೊಳ್ಳಬೇಕು.

ಅಂಬೇಡ್ಕರ್ ಅವರು ನಮ್ಮ ದೇಶದ ಹೆಣ್ಣುಮಕ್ಕಳು ಗುಡಿ ಗೋಪುರಗಳಲ್ಲಿ ಸಾಲು ನಿಲ್ಲುತ್ತಿದ್ದಾರೆ ಗ್ರಂಥಾಲಯದಲ್ಲಿ ಹೆಣ್ಣು ಮಕ್ಕಳು ಸಾಲಾಗಿ ನಿಲ್ಲುವವರೆಗೂ ದೇಶ ಉದ್ಧಾರವಾಗುವುದಿಲ್ಲ ಎಂದು ಹೇಳಿದ್ದಾರೆ.‌ ಮಠಾಧೀಶರು, ಪುರೋಹಿತಶಾಹಿಗಳು, ಸ್ವಾಮೀಜಿಗಳು ಮನುಷ್ಯರನ್ನು ಸರಿಯಾದ ದಾರಿಯಲ್ಲಿ ನಡೆಸಬೇಕು. ನಿಮ್ಮ ಕಾಯಕವನ್ನು ಸರಿಯಾಗಿ ಮಾಡಬೇಕು, ವ್ಯಸನಗಳಿಂದ ಮುಕ್ತರಾಗಬೇಕು. ನಮಗೆ ಯಾವುದೇ ಇಂದ್ರ ಬಲ, ಚಂದ್ರಬಲ, ತಾರಾಬಲ, ಗುರುಬಲ ಬೇಕಾಗಿಲ್ಲ ತೋಳಬಲದಿಂದ ಬದುಕಬಹುದು ಎಂದು ಜನರಿಗೆ ನಿಜಗುಣಾನಂದ ಸ್ವಾಮಿ ಹೇಳಿದರು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!