ಸಾಮಾನ್ಯವಾಗಿ ಬಹಳಷ್ಟು ಜನಕ್ಕೆ ಈ ವಿಚಾರ ಗೊತ್ತಿರೋದಿಲ್ಲ, ಮೊಸರನ್ನು ಯಾವ ಸೇವಿಸಬೇಕು ಹಾಗೂ ಯಾವ ಸೇವಿಸಬಾರದು ಎಂಬುದಾಗಿ. ಹೌದು ಕೆಲವರಉ ರಾತ್ರಿ ಸಮಯದಲ್ಲಿ ಕೂಡ ಮೊಸರು ಸೇವನೆ ಮಾಡುತ್ತಾರೆ ಆದ್ರೆ ಇದರಿಂದ ಏನಾಗುತ್ತದೆ ಅನ್ನೋದು ತಿಳಿದಿರೋದಿಲ್ಲ. ಮೊಸರಿನಲ್ಲಿ ಆರೋಗ್ಯಕಾರಿ ಅಂಶಗಳಿವೆ ಆದ್ರೆ ಇದನ್ನು ಬೆಳ್ಳಿಗೆ ಅಥವಾ ಮಧ್ಯಾಹ್ನ ಸೇವನೆ ಮಾಡುವದು ಒಳ್ಳೆಯದು.

ರಾತ್ರಿ ಟೈಮ್ ಮೊಸರು ತಿನ್ನೋದ್ರಿಂದ ದೇಹದಲ್ಲಿ ‘ಕಫ ದೋಷ’ವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ರಾತ್ರಿ ಹೊತ್ತು ನಮ್ಮ ದೇಹದಲ್ಲಿ ಕಫದ ಪ್ರಮಾಣ ಅಧಿಕವಾಗಿರುತ್ತದೆ. ಹಾಗಾಗಿ ರಾತ್ರಿ ವೇಳೆ ಮತ್ತೆ ಮೊಸರು ಸೇವಿಸಿದರೆ ಕಫ ಹೆಚ್ಚಾಗಿ ಮೂಗಿನ ನಾಳಗಳಲ್ಲಿ ಲೋಳೆ ಅಥವಾ ಸಿಂಬಳ ಜಾಸ್ತಿ ಆಗುವ ಸಾಧ್ಯತೆಗಳಿವೆ. ನೆನಪಿರಲಿ ಮೊಸರು ಸೇವನೆ ಮಾಡುವುದು ತೊಂದರೆಯಿನಿಲ್ಲ ಆದ್ರೆ ಕಫ, ಹಾಗು ಅಸ್ತಮಾ ಸಮಸ್ಯೆ ಇರುವವರು ರಾತ್ರಿವೇಳೆ ಮೊಸರು ಸೇವನೆ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

ಕೆಲವರಿಗೆ ಅಜೀರ್ಣತೆ ಸಮಸ್ಯೆ ಕಾಡುತ್ತದೆ ಅಂತವರು ರಾತ್ರಿ ಜೀರ್ಣಕ್ರೀಯೆ ಉತ್ತಮವಾಗಬೇಕಾದರೆ ಮಜ್ಜಿಗೆ ಅಥವಾ ಪುದೀನಾ ಮತ್ತು ಜೀರಿಗೆ ಸೇರಿಸಿದ ಮೊಸರು ಸೇವಿಸಬಹುದು. ಮಂತ್ಯೆ ಕಾಳುಗಳನ್ನು ಸೇರಿಸಿದರೂ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!