ದೀಪಾವಳಿ ಹಬ್ಬದ ಬಳಿಕ ಭಾರೀ ಇಳಿಕೆ ಕಂಡಿದ್ದ ಚಿನ್ನದ ದರ, ಸದ್ಯ ಕೊಂಚ ಏರಲಾರಂಭಿಸಿದೆ. ಈ ಮೂಲಕ ಬಂಗಾರ ಬೆಲೆ ಇಳಿಯಬಹುದೆಂದು ಕಾದವರಿಗೆ ಕೊಂಚ ನಿರಾಸೆಯಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ 2021ರ ಮೊದಲ ದಿನದಂದೇ ಏರಿಕೆಯತ್ತ ಮುಖಮಾಡಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 48,860 ರೂಪಾಯಿ ದಾಖಲಾಗಿದ್ದು, ಶುದ್ಧ ಚಿನ್ನ 10 ಗ್ರಾಂ 53,310 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯು ಕೆಜಿಗೆ 300 ರೂಪಾಯಿ ಇಳಿಕೆಗೊಂಡು 68,100 ರೂಪಾಯಿ ದಾಖಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಕಳೆದ ನಾಲ್ಕು ದಿನಗಳಲ್ಲಿ 22 ಕ್ಯಾರೆಟ್ ಚಿನ್ನ ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ ಎಷ್ಟು ರೂಪಾಯಿ ಏರಿಳಿತಗೊಂಡಿದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ. ಇನ್ನು ಇತ್ತ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಒಂದು ಕೆ. ಜಿ ಬೆಳ್ಳಿ ಬೆಲೆ 63,900 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಚಿನ್ನದ ಬೆಲೆ – ಜನವರಿ 01: 46,800-51,060 (110 ರೂಪಾಯಿ ಏರಿಕೆ) ಡಿಸೆಂಬರ್ 31: 46,700-50,೯೫೦ ದೆಹಲಿಯಲ್ಲಿ ಚಿನ್ನದ ಬೆಲೆ – ಜನವರಿ 01: 48,860-53,310 (10 ರೂಪಾಯಿ ಏರಿಕೆ)
ಡಿಸೆಂಬರ್ 31: 48,850-53,೩೦೦ ಚೆನ್ನೈನಲ್ಲಿ ಚಿನ್ನದ ಬೆಲೆ – ಜನವರಿ 01: 47,260-51,560 (20 ರೂಪಾಯಿ ಏರಿಕೆ) ಡಿಸೆಂಬರ್ 31: 47,240-51,540
ಮುಂಬೈ ಚಿನ್ನದ ಬೆಲೆ – ಜನವರಿ 01: 48,940-49,940 (10 ರೂಪಾಯಿ ಏರಿಕೆ) ಡಿಸೆಂಬರ್ 31: 48,930-49,930 ಜೈಪುರ ಚಿನ್ನದ ಬೆಲೆ – ಜನವರಿ 01: 48,860-53,310 (ಬದಲಾವಣೆ ಇಲ್ಲ) ಡಿಸೆಂಬರ್ 31: 48,860-53,310
ಚಂಡೀಗಡ ಚಿನ್ನದ ಬೆಲೆ – ಜನವರಿ 01: 49,210-53,180 (10 ರೂಪಾಯಿ ಏರಿಕೆ) ಡಿಸೆಂಬರ್ 31: 49,200-53,170 ಇನ್ನೂ ಚಿನ್ನದ ಬೆಳೆಯನ್ನು ಹೇಗೆ ನಿರ್ಧರಿಸಲಾಗುತ್ತದೆ? ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತರ್ ರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು. ವಾರದ ಆಧಾರದ ಮೇಲೆ ಚಿನ್ನದ ಸಂಗ್ರಹವು 1.008 ಬಿಲಿಯನ್ ಏರಿಕೆಯಾಗಿ 37.02 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅಂಕಿ ಅಂಶಗಳು ತೋರಿಸಿದೆ.