ವೋಟರ್ ಕಾರ್ಡ್ ಅವಶ್ಯವಾಗಿ ಬೇಕಾಗುತ್ತದೆ. ಹಾಗಾಗಿ ವೋಟರ್ ಐಡಿಗೆ ಅಪ್ಲೈ ಮಾಡಬೇಕಾಗುತ್ತದೆ. ಅಪ್ಲೈ ಮಾಡಿದ ವೋಟರ್ ಕಾರ್ಡ್ ಅಪ್ರೂವಲ್ ಆಗಿದೆಯಾ ಇಲ್ಲವಾ ಎಂದು ಮನೆಯಲ್ಲಿ ಕುಳಿತು ಕಂಪ್ಯೂಟರ್ ನಲ್ಲಿ ನೋಡಬಹುದು. ಹಾಗಾದರೆ ಮನೆಯಲ್ಲಿಯೆ ಕಂಪ್ಯೂಟರ್ ನಲ್ಲಿ ವೋಟರ್ ಕಾರ್ಡ್ ಅಪ್ರೂವಲ್ ಬಗ್ಗೆ ಹಾಗೂ ವೋಟರ್ ಕಾರ್ಡ್ ಗೆ ಅಪ್ಲೈ ಮಾಡಿ ನಿಮಗೆ ತಲುಪದೆ ಇದ್ದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಹೊಸದಾಗಿ ವೋಟರ್ ಐಡಿಗೆ ಅಪ್ಲೈ ಮಾಡಿದರೆ ನಿಮ್ಮ ವೋಟರ್ ಐಡಿ ಅಪ್ರೂವ್ ಆಗಿದೆಯಾ ಇಲ್ಲವಾ ಎಂದು ಮನೆಯಲ್ಲಿಯೇ ನೋಡಬಹುದು. ವೋಟರ್ ಐಡಿ ಗೆ ಅಪ್ಲೈ ಮಾಡಿದರೆ ಅದು ಬಂದಿಲ್ಲವಾದರೆ ಏನು ಮಾಡಬೇಕು ಎನ್ನುವುದನ್ನು ನೋಡೋಣ. ಅಪ್ಲೈ ಮಾಡಿದ ವೋಟರ್ ಕಾರ್ಡ್ ಆಪ್ರೂವಲ್ ಆಗಿದೆಯಾ ಎಂದು ನೋಡಲು ಅಫೀಷಿಯಲ್ ವೆಬ್ ಸೈಟ್ ಓಪನ್ ಮಾಡಿ ಬಲಗಡೆ ಟ್ರ್ಯಾಕ್ ಅಪ್ಲಿಕೇಷನ್ ಸ್ಟೇಟಸ್ ಎಂಬ ಕಾಲಂ ಕೊಡಲಾಗಿದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಸರ್ಚ್ ಬೈ ಅಪ್ಲಿಕೇಷನ್ ನಂಬರ್ ಎಂದು ಒಂದು ಕಾಲಂ ಇರುತ್ತದೆ ಅದರಲ್ಲಿ ವೋಟರ್ ಕಾರ್ಡ್ ಗೆ ಅಪ್ಲೈ ಮಾಡಿದಾಗ ಅಕನೊಲೆಜ್ ಮೆಂಟ್ ಬರುತ್ತದೆ ಅದರಲ್ಲಿ ರೆಫರೆನ್ಸ್ ನಂಬರ್ ಇರುತ್ತದೆ. ಆ ನಂಬರ್ ಅನ್ನು ಹಾಕಿ ಟ್ರಾನ್ಸ್ ಸ್ಟೇಟಸ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ವೋಟರ್ ಐಡಿ ಸ್ಟೇಟಸ್ ಕಾಣಿಸುತ್ತದೆ.
ಸಬ್ ಮಿಟ್ ಆಗಿದೆಯಾ, ಬಿಎಲ್ಓ ಅಪೋಯಂಟೆಡ್ ಆಗಿದೆಯಾ, ಫೀಲ್ಡ್ ವೇರಿಫೈಡ್ ಆಗಿದೆಯಾ, ಎಕ್ಸೆಪ್ಟೆಡ್ ಆಗಿದೆಯಾ, ಎಪಿಕ್ ಜನರೇಟ್ ಆಗಿದೆಯಾ ಕಾಣಿಸುತ್ತದೆ ಎಲ್ಲಾ ಆಪ್ಷನ್ ಗೂ ಗ್ರೀನ್ ಮಾರ್ಕ್ ಬಂದರೆ ವೋಟರ್ ಐಡಿ ಜನರೇಟ್ ಆಗಿದೆ ಎಂದಾಗುತ್ತದೆ. ಎಪಿಕ್ ಜನರೇಟರ್ ಎಂಬ ಆಪ್ಷನ್ ಕೆಳಗೆ ಒಂದು ನಂಬರ್ ಇರುತ್ತದೆ ಅದು ನಿಮ್ಮ ವೋಟರ್ ಕಾರ್ಡ್ ನಂಬರ್ ಆಗಿರುತ್ತದೆ. ಹೀಗೆ ಬಂದರೆ ನಿಮ್ಮ ವೋಟರ್ ಕಾರ್ಡ್ ಅಪ್ರೂವಲ್ ಆಗಿದೆ ಎಂದು ಅರ್ಥ. ವೋಟರ್ ಕಾರ್ಡ್ ಗೆ ಅಪ್ಲೈ ಮಾಡಿದರೂ ವೋಟರ್ ಕಾರ್ಡ್ ಬರದೆ ಇದ್ದಲ್ಲಿ ಕಂಪ್ಯೂಟರ್ ನಲ್ಲಿ ಆಫೀಷಿಯಲ್ ವೆಬ್ ಸೈಟ್ ಗೆ ಹೋಗಿ ನೌ ಯುವರ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು
ಆಗ ಎಪಿಕ್ ನಂಬರ್ ಎಂದು ಒಂದು ಕಾಲಂ ಕೇಳುತ್ತದೆ ಅಲ್ಲಿ ಜನರೇಟ್ ಆಗಿರುವ ವೋಟರ್ ಐಡಿ ನಂಬರ್ ಅನ್ನು ಹಾಕಿ ಸರ್ಚ್ ಎಂದು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಬೇಕು, ಆಗ ಕೆಳಗಡೆ ಬಿಎಲ್ಓ ಇಲೆಕ್ಟ್ರಿಕಲ್ ಆಫೀಸರ್ ಡೀಟೇಲ್ ಎಂದು ಬರುತ್ತದೆ ಅದರಲ್ಲಿ ನಿಮ್ಮ ವಾರ್ಡ್ ಗೆ ಸಂಬಂಧಿಸಿದ ಅಧಿಕಾರಿಗಳ ಹೆಸರು ಹಾಗೂ ಮೊಬೈಲ್ ನಂಬರ್ ಇರುತ್ತದೆ.
ನಿಮ್ಮ ಏರಿಯಾದ ಬಿಎಲ್ಓ ಅವರ ಹೆಸರು ಮತ್ತು ನಂಬರ್ ಬರುತ್ತದೆ, ಇಆರ್ ಓ ಅವರ ಹೆಸರು ಹಾಗೂ ನಂಬರ್ ಬರುತ್ತದೆ. ಡಿಇಓ ಅವರ ಹೆಸರು ಹಾಗೂ ಮೊಬೈಲ್ ನಂಬರ್ ಬರುತ್ತದೆ. ಇವರಲ್ಲಿ ಯಾರಿಗಾದರೂ ಸಂಪರ್ಕ ಮಾಡಿ ವೋಟರ್ ಕಾರ್ಡ್ ಯಾವಾಗ ಬರುತ್ತದೆ ಏನಾಗಿದೆ ಎಂಬೆಲ್ಲಾ ಸಂಪೂರ್ಣ ಮಾಹಿತಿಯ ಬಗ್ಗೆ ತಿಳಿದುಕೊಳ್ಳಬಹುದು. ಬಿಎಲ್ಓ ಅಧಿಕಾರಿಗಳನ್ನು ಕೇಳಿದಾಗ ಸರಿಯಾದ ಮಾಹಿತಿ ಗೊತ್ತಾಗದೆ ಇದ್ದಲ್ಲಿ ಇದೆ ವೆಬ್ ಸೈಟ್ ನಲ್ಲಿ ಕೆಳಗಡೆ ಟೋಲ್ ಫ್ರೀ ನಂಬರ್ ಇರುತ್ತದೆ ಅದಕ್ಕೆ ಕರೆ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ವೋಟರ್ ಕಾರ್ಡ್ ಅಪ್ರೂವಲ್ ಬಗ್ಗೆ ತಿಳಿಯಲು ಹಣ ಖರ್ಚು ಮಾಡದೆ ಕಡಿಮೆ ಸಮಯದಲ್ಲಿ ಸುಲಭವಾಗಿ ತಿಳಿಯಬಹುದು.