New Rules December 1st: ಸರ್ಕಾರವು ಪ್ರತಿ ತಿಂಗಳ ಶುರುವಿನಲ್ಲಿ ಅಂದರೆ 1ನೇ ತಾರಿಕಿನಂದು ನಿಯಮಗಳ ಬದಲಾವಣೆ ಮಾಡುತ್ತವೆ. ಸಿಲಿಂಡರ್ ವಿಷಯ, ಹಣಕಾಸಿನ ವಿಷಯ, ಮತ್ತು ಇನ್ನಿತರ ಪ್ರಮುಖ ವಿಚಾರಗಳಲ್ಲಿ ಬದಲಾವಣೆ ಮಾಡಲಾಗುತ್ತದೆ. ಇದೀಗ ವರ್ಷ ಕೊನೆಯ ತಿಂಗಳು ಶುರುವಾಗಿದ್ದು, ಈ ವೇಳೆ 5 ಪ್ರಮುಖ ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ. ಆ ನಿಯಮಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಸಿಮ್ ಕಾರ್ಡ್ ನಿಯಮ ಬದಲಾವಣೆ :- ಸಿಮ್ ಕಾರ್ಡ್ ಮಾರಾಟ ಮಾಡುವ ಎಲ್ಲಾ ಡೀಲರ್ ಗಳು ಇನ್ನುಮುಂದೆ kyc ಮಾಡಿಸಿರಬೇಕು. ಹಾಗೆಯೇ ಬಯೋಮೆಟ್ರಿಕ್ ಕೂಡ ಮಾಡಿಸಿರಬೇಕು. ಇತ್ತೀಚಿನ ದಿನಗಳಲ್ಲಿ ನಕಲಿ ಸಿಮ್ ಕಾರ್ಡ್ ಖರೀದಿ ಮಾಡಿ ಅದಕ್ಕೆ ಸಂಬಂಧಿಸಿದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಕಾರಣ, ಇದನ್ನು ನಿಲ್ಲಿಸಲು ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಒಂದು ವೇಳೆ ಈ ತಪ್ಪು ಮುಂದುವರೆದರೆ 10 ಲಕ್ಷ ದಂಡ ಹಾಗೆಯೇ ಪದೇ ಪದೇ ತಪ್ಪು ನಡೆದರೆ ಜೈಲು ಸೇರಬೇಕಾಗುತ್ತದೆ.
HDFC ಕ್ರೆಡಿಟ್ ಕಾರ್ಡ್ ಗೆ ಹೊಸ ನಿಯಮ :- HDFC ಗೆ ಸಂಬಂಧಿಸಿದ ಎರಡು ಮುಖ್ಯ ಕ್ರೆಡಿಟ್ ಕಾರ್ಡ್ ಗಳು ರೆಗಾಲಿಯಾ ಮತ್ತು ಮಿಲೇನಿಯಾ ಕಾರ್ಡ್ ಗಳ ವಿಚಾರದಲ್ಲಿ ಬ್ಯಾಂಕ್ ಬದಲಾವಣೆ ತರಲಿದೆ.
ಬ್ಯಾಂಕ್ ಲೋನ್ ನಿಯಮ ಬದಲಾವಣೆ :- ಬ್ಯಾಂಕ್ ಇಂದ ಸಾಲ ಪಡೆದ ಜನರು ಸಮಯಕ್ಕೆ ಸರಿಯಾಗಿ ಲೋನ್ ಪಾವತಿ ಮಾಡಿದ 30 ದಿನಗಳ ಒಳಗೆ ಅವರ ಆಸ್ತಿ ಪತ್ರಗಳನ್ನು ಬ್ಯಾಂಕ್ ನವರು ಗ್ರಾಹಕರಿಗೆ ಕೊಡಬೇಕು. ಇಲ್ಲದೆ ಹೋದರೆ ಬ್ಯಾಂಕ್ ಮೇಲೆ ದಿನಕ್ಕೆ 5000 ದ ಹಾಗೆ ದಂಡ ಬೀಳುತ್ತದೆ. ಈ ನಿಯಮ ಜನರಿಗೆ ಅನುಕೂಲ ತಂದುಕೊಡುತ್ತದೆ..
ಪೆನ್ಶನ್ ಪಡೆಯುವವರಿಗೆ ಹೊಸ ನಿಯಮ :- 60 ವರ್ಷ ಮೇಲ್ಪಟ್ಟಿರುವವರು ಪೆನ್ಶನ್ ಪಡೆಯಲು ಇನ್ನುಮುಂದೆ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಇದು ಕಡ್ಡಾಯ ಆಗಿದೆ. ಆದಷ್ಟು ಬೇಗ ಎಲ್ಲರೂ ಈ ಕೆಲಸ ಮಾಡಬೇಕು.
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ :- LPG ಗ್ಯಾಸ್ ಸಿಲಿಂಡರ್ ಗಳ ಬೆಲೆಯನ್ನು ನವೆಂಬರ್ ತಿಂಗಳಿನಲ್ಲಿ ಏರಿಕೆ ಮಾಡಲಾಗಿತ್ತು, ಅದೇ ರೀತಿ ಈ ತಿಂಗಳು ಕೂಡ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗುತ್ತಾ ಎಂದು ಕಾದು ನೋಡಬೇಕಿದೆ.