Actress Ramya: ಸ್ಯಾಂಡಲ್ ವುಡ್ ಕ್ವೀನ್ ಎಂದು 2 ದಶಕಗಳಿಂದ ಕರೆಸಿಕೊಳ್ಳುತ್ತಿರುವವರು ನಟಿ ರಮ್ಯಾ.( Ramya) ಮೊನ್ನೆಯಷ್ಟೇ ರಮ್ಯಾ ಅವರು 41ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದ ಸಮಯದಲ್ಲಿ ರಮ್ಯಾ ಅವರಿಗೆ ಇನ್ನು ಮದುವೆ ಯಾಕೆ ಆಗಿಲ್ಲ? ಸ್ಯಾಂಡಲ್ ವುಡ್ ಕ್ವೀನ್ ಮದುವೆಯಿಂದ ದೂರ ಇರೋದು ಯಾಕೆ ಎನ್ನುವ ಪ್ರಶ್ನೆ ಶುರುವಾಗಿದೆ.

ನಟಿ ರಮ್ಯಾ ಅವರು 2003ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಡನೆ ಅಭಿ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟರು. ಈ ಸಿನಿಮಾ ಇಂದಲೇ ಹೆಸರು ಮಾಡಿದ ರಮ್ಯಾ ಅವರು ಕನ್ನಡದ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡು ಕನ್ನಡದ ನಂಬರ್ 1 ನಟಿ, ಬಹುಬೇಡಿಕೆಯ ನಟಿ, ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ ಆಗಿದ್ದರು.

ನಟನೆ ಮಾತ್ರವಲ್ಲದೆ ರಾಜಕೀಯದಲ್ಲೂ ಸಕ್ರಿಯವಾಗಿದ್ದ ರಮ್ಯಾ ಅವರು ಲೋಕಸಭಾ ಎಲೆಕ್ಷನ್ ಗೆದ್ದು ಎಂಪಿ ಆಗಿದ್ದರು. ಬಳಿಕ ಕೆಲ ವರ್ಷಗಳ ಕಾಲ ಚಿತ್ರರಂಗ, ರಾಜಕೀಯ ಎಲ್ಲದರಿಂದಲೂ ದೂರವಿದ್ದು, ವಿದೇಶದಲ್ಲಿದ್ದರು. ಬಳಿಕ ರಮ್ಯಾ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಇದೀಗ ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. ಡಾಲಿ ಧನಂಜಯ್ ಅವರೊಡನೆ ಉತ್ತರಕಾಂಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದೀಗ ರಮ್ಯಾ ಅವರಿಗೆ 41 ವರ್ಷ ತುಂಬಿದ್ದು ಇನ್ನು ಯಾಕೆ ಮದುವೆಯಾಗಿಲ್ಲ ಎಂದರೆ, ರಮ್ಯಾ ಅವರಿಗೆ ದಾಂಪತ್ಯ ಜೀವನಕ್ಕೆ ಹೆಚ್ಚು ಸಮಯ ಕೊಡಲು ಸಾಧ್ಯ ಆಗದೆ ಇರುವುದೇ ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ರಮ್ಯಾ ಅವರು ಒಂದು ಕಾಲೇಜಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರು ಆಗ ವಿದ್ಯಾರ್ಥಿಗಳು ಮದುವೆ ಬಗ್ಗೆ ಕೇಳಿದರು..

ಆಗ ರಮ್ಯಾ ಅವರು, ಹ್ಯಾಪಿ ಆಗಿರೋದು ಮದುವೆ ಆಗೋದು ಎಂದು ಎರಡು ಆಪ್ಶನ್ ಇದ್ದರೆ ತಾವು ಹ್ಯಾಪಿ ಆಗಿರೋದನ್ನ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದರು, ಈ ಎಲ್ಲಾ ಕಾರಣಗಳಿಂದ ರಮ್ಯಾ ಅವರು ಇನ್ನು ಮದುವೆಯಾಗಿಲ್ಲ ಎಂದು ಹೇಳಲಾಗುತ್ತಿದೆ.

By

Leave a Reply

Your email address will not be published. Required fields are marked *