Ultimate magazine theme for WordPress.

ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು ಇಲ್ಲಿದೆ ಮಾಹಿತಿ

0 8,916

New Ration Shop Notification: ರಾಜ್ಯ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆ ಇದೀಗ ಹೊಸ ನ್ಯಾಯಬೆಲೆ ಅಂಗಡಿಗಳ ಅವಶ್ಯಕತೆ ಇರುವ ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನಿಸಿದೆ. ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಯಾರೆಲ್ಲಾ ಅರ್ಹರು? ಏಜೆಕ್ಕಾ ದಾಖಲೆ ಬೇಕಾಗುತ್ತದೆ? ಸರ್ಕಾರದಿಂದ ಇವರಿಗೆ ಎಷ್ಟು ಹಣ ಸಿಗುತ್ತದೆ? ತಿಳಿಸುತ್ತೇವೆ ನೋಡಿ..

ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ,ಜ್ ಆದಿವಾಸಿ ನೇಕಾರ, ಮಹಿಳೆಯರು, ಅಂಗವಿಕಲರು, ರಾಜ್ಯ ಸರ್ಕಾರದ ಸ್ವಾಮ್ಯದ ನಿಗಮ, ಗ್ರಾಮ ಮತ್ತು ಸ್ಥಳೀಯ ಪಂಚಾಯಿತಿಗಳು, ಕೃಷಿ ಪತ್ತಿನ ಸಂಘ, ತೋಟಗಾರಿಕೆ, ಪ್ರಾಥಮಿಕ ಬಳಕೆದಾರರು, ವಿವಿಧ ಸಹಕಾರಿ ಸಂಘಗಳು, ಸ್ತ್ರೀ ಶಕ್ತಿ ಸಂಘ, ಮಹಿಳಾ ಸ್ವಸಹಾಯ ಗುಂಪುಗಳು, ತೃತೀಯ ಲಿಂಗಿಗಳು ಇವರೆಲ್ಲರೂ ಅರ್ಜಿ ಸಲ್ಲಿಸಬಹುದು, ಆದ್ಯತೆವ ಮೇಲೆ ಅವಕಾಶ ಸಿಗುತ್ತದೆ.

ಇದಕ್ಕಾಗಿ ಯಾವೆಲ್ಲಾ ದಾಖಲೆಗಳು ಬೇಕು ಎಂದರೆ..
ಅರ್ಜಿ ಸಲ್ಲಿಸುವವರು 3 ವರ್ಷಗಳ ಹಿಂದೆ ಸಹಕಾರಿ ಸಂಘದ ಭಾಗವಾಗಿರಬೇಕು. ಬ್ಯಾಂಕ್ ಅಕೌಂಟ್ ನಲ್ಲಿ ಮಿನಿಮಮ್ 2 ಲಕ್ಷ ಇರಬೇಕು. ಸ್ರೀಶಕ್ತಿ ಸಂಘಗಳಲ್ಲಿ ಇರುವವರ ಅಕೌಂಟ್ ನಲ್ಲಿ ಮಿನಿಮಮ್ 1 ಲಕ್ಷ, ವಿಕಲಚೇತನರು ಮತ್ತು ತೃತೀಯ ಲಿಂಗಿಯರ ಅಕೌಂಟ್ ನಲ್ಲಿ ಮಿನಿಮಮ್ 50 ಸಾವಿರ ಇರಬೇಕು. ಅರ್ಜಿ ಹಾಕುವವರು 10ನೇ ತರಗತಿ ಮುಗಿಸಿರಬೇಕು. ಸಹಕಾರ ಸಂಘ, ಸಂಸ್ಥೆಗಳ ಮತ್ತು ಸ್ವಸಹಾಯ ಸಂಘಗಳಲ್ಲಿ ಇರುವವರ ನೋಂದಣಿ ಪತ್ರ, ಸಹಕಾರ ಸಂಘ ಸಂಸ್ಥೆಯವರಾದರೆ ಕಳೆದ 3 ವರ್ಷಗಳ ದೃಢೀಕೃತ ಲೆಕ್ಕ ಪರಿಶೋಧನಾ ವರದಿ.

ಭೈಲಾ, ಪ್ರತನಿಧಿ ನೇಮಕ ನಿರ್ಣಯ, ಅರ್ಜಿ ಸಲ್ಲಿಸಿದ ಸಹಕಾರಿ ಸಂಘದ ಮೇಲೆ ಯಾವುದೆ ವಿಚಾರಣೆ, ಲಿಕ್ವಿಡೇಷನ್ ನಡವಳಿ ನಡೆದಿರುವುದಿಲ್ಲ ಎನ್ನುವ ಬಗ್ಗೆ ಸಕ್ಷಮ ಪ್ರಾಧಿಕಾರಿಗಳು ನೀಡಿರುವ ದೃಢೀಕರಣ ಪತ್ರ, ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ ಕರಾರು ಪತ್ರ, ಬ್ಯಾಂಕ್‌ ಪಾಸ್ ಪುಸ್ತಕದ ಕಾಪಿ, ಇತ್ತೀಚಿನ 3 ಪಾಸ್ ಪೋರ್ಟ್ ಸೈಜ್ ಫೋಟೋ, ಅಭ್ಯರ್ಥಿಯ ಮೇಲೆ ಕ್ರಿಮಿನಲ್ ಪ್ರಕರಣಗಳು ಇಲ್ಲ ಎಂದು ಪೋಲಿಸ್ ವೆರಿಫಿಕೇಷನ್ ರಿಪೋಟರ್ಟ್ ನೀಡಬೇಕು.

ಎಲ್ಲಾ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸುವುದಕ್ಕೆ ಈ ತಿಂಗಳು ಕೊನೆಯ ದಿನಾಂಕ ಆಗಿದೆ, ಎಲ್ಲಾ ದಾಖಲೆಗಳ ಜೊತೆಗೆ ನಿಮ್ಮ ತಾಲ್ಲೂಕಿನ ಆಹಾರ ಇಲಾಖೆಯ ಆಫೀಸ್ ಭೇಟಿ ನೀಡಿ ಫಾರ್ಮ್ ಎ ಪಡೆದು, ಫಿಲ್ ಮಾಡಿ ಅರ್ಜಯನ್ನು ಜಿಲ್ಲೆಯ ಆಹಾರ ನಾಗರೀಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರಿಗೆ ಅರ್ಜಿ ಸಲ್ಲಿಸಬೇಕು. ಇನ್ನು ನ್ಯಾಯಬೆಲೆ ಅಂಗಡಿ ತೆರೆಯುವವರಿಗೆ ಎಷ್ಟು ಹಣ ಸರ್ಕಾರದಿಂದ ಸಿಗುತ್ತದೆ ಎಂದು ನೋಡುವುದಾದರೆ, ತಿಂಗಳಿಗೆ ಇಷ್ಟು ಎಂದು ಸಂಬಳದ ಜೊತೆಗೆ ಎಷ್ಟು ಜನರಿಗೆ ಪಡಿತರ ವಿತರಣೆ ಆಗಿದೆ ಎನ್ನುವುದರ ಮೇಲೆ ವೇತನ ಸಿಗುತ್ತದೆ.

ಈಗ ನ್ಯಾಯಬೆಲೆ ಅಂಗಡಿಯ ಕೆಲಸಗಳು ಕಂಪ್ಯೂಟರ್ ಮೂಲಕವೇ ನಡೆಯುವುದರಿಂದ, ಅರ್ಜಿ ಹಾಕುವವರಿಗೆ ಕಂಪ್ಯೂಟರ್ ಬಳಕೆ ಚೆನ್ನಾಗಿ ತಿಳಿದಿರಬೇಕು. ಈಗ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ. ಇದೆಲ್ಲದರ ಡೇಟಾವನ್ನು ನೀವು ಕಂಪ್ಯೂಟರ್ ಮೂಲಕವೇ ಚೆಕ್ ಮಾಡಬೇಕಾಗುತ್ತದೆ. ತಿಂಗಳು ಪೂರ್ತಿ ಜನರಿಗೆ ವಿತರಣೆ ಆಗುವ ರೇಷನ್ ಬಗ್ಗೆ ಕಂಪ್ಯೂಟರ್ ನಲ್ಲೇ ಎಲ್ಲವನ್ನು ಲೆಕ್ಕ ಇಡಬೇಕಾಗುತ್ತದೆ..

ರಾಜ್ಯ ಸರ್ಕಾರಕ್ಕೆ ಸೇರಿದ ನಿಗಮಗಳು, ಕಂಪನಿಗಳು, ಗ್ರಾಮ ಪಂಚಾಯ್ತಿ , ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳು, ಪ್ರಾಥಮಿಕ ಕೃಷಿ ಸಹಕಾರಸಂಘ, ತೋಟಗಾರಿಕಾ ಬೆಳೆಗಾರರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸಹಕಾರ ಸಂಘ ನಿಯಮಿತ, ಹಾಲು ಉತ್ಪಾದಕರ ಸಹಕಾರ ಸಂಘ, ಕೆ.ಎಂ.ಎಫ್, ತಾಲ್ಲೂಕು ಕೃಷಿ ಪ್ರಾಥಮಿಕ ಸಹಕಾರ ಮಾರುಕಟ್ಟೆ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಮಾನ್ಯತೆ ಪಡೆದ ಸ್ತ್ರೀಶಕ್ತಿ ಗುಂಪುಗಳು, ಸ್ವಸಹಾಯ ಸಂಘಗಳು ಅರ್ಜಿ ಸಲ್ಲಿಸಿದರೆ ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು https://ahara.kar.nic.in/Home/Home ಈ ವೆಬ್ಸೈಟ್ ಗೆ ಭೇಟಿ ನೀಡಿ.

Leave A Reply

Your email address will not be published.