ಮದುವೆಯ ನಂತರ ಗಂಡ ಹೆಂಡತಿ ಇಬ್ಬರ ಸಂಬಂಧ ಪಾರದರ್ಶಕವಾಗಿರಬೇಕು. ಇಬ್ಬರು ಒಬ್ಬರ ಮೇಲೆ ಒಬ್ಬರು ನಂಬಿಕೆ ಇಟ್ಟಾಗ ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವನ ನಡೆಯುತ್ತದೆ. ಮದುವೆಯಾದ ನಂತರ ದಂಪತಿ ಕೆಲವು ನಿಯಮಗಳನ್ನು ಪಾಲಿಸಬೇಕು. ಹಾಗಾದರೆ ವಿವಾಹವಾದ ದಂಪತಿ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಯಾವುದೆ ಸಂಬಂಧ ಚನ್ನಾಗಿರಬೇಕು ಅಂದರೆ ಕೆಲವೊಂದು ಸಲಹೆಗಳನ್ನು ಪಾಲಿಸಬೇಕು. ಸಣ್ಣ ಸಣ್ಣ ತಪ್ಪುಗಳನ್ನು ಮಾಡುವುದನ್ನು ಬಿಡಬೇಕು, ಜೊತೆಗೆ ಕ್ಷಮಿಸಿಬಿಡಬೇಕು, ಇದು ನಮ್ಮ ಸಂಬಂಧದಲ್ಲಿ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ. ಇಂದಿನ ಯುಗದಲ್ಲಿ ಮದುವೆಯಾಗಲು ನಿರ್ಧರಿಸುವುದು ದೊಡ್ಡ ವಿಷಯವೆಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ದೃಷ್ಟಿಕೋನದಿಂದ ಮದುವೆಯು ವಿಭಿನ್ನ ರೀತಿಯಲ್ಲಿ ಕಾಣುತ್ತದೆ ಅಷ್ಟೆ ಅಲ್ಲದೆ ಅನುಭವಗಳು ಬದಲಾಗುತ್ತವೆ ಹಾಗೆಯೆ ಕೆಲವು ವಿಚಾರಗಳು ನಮಗೆ ಸಹಾಯ ಮಾಡುತ್ತದೆ.
ವೈವಾಹಿಕ ಬದುಕನ್ನು ಸುಗಮವಾಗಿ ನಡೆಸುವುದು ಹೇಗೆ ಎಂಬುದರ ಬಗ್ಗೆ ಪ್ರತಿಯೊಬ್ಬರೂ ತಮ್ಮದೆ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ವೈವಾಹಿಕ ಸಂಬಂಧದಲ್ಲಿ ಯಶಸ್ಸು ಆ ದಂಪತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಕ್ಷಮೆ ಎಂಬ ಪದದ ನಿಜವಾದ ಅರ್ಥವನ್ನು ವೈವಾಹಿಕ ಸಂಬಂಧದಲ್ಲಿ ಅರ್ಥಮಾಡಿಕೊಳ್ಳಬಹುದು. ಏನಾದರೂ ತಪ್ಪಾಗಿದ್ದರೆ ಕ್ಷಮೆ ಕೇಳಲು ಹಿಂಜರಿಯಬಾರದು. ಇದಕ್ಕೆ ವಿರುದ್ಧವಾಗಿ ಒಬ್ಬರು ಇನ್ನೊಬ್ಬರ ಮೇಲೆ ಆರೋಪ ಮಾಡುವುದು ಮುಂದುವರೆಸಿದರೆ ಅದು ಸಮಸ್ಯೆಯನ್ನು ಉಂಟು ಮಾಡುತ್ತದೆ. ಕ್ಷಮೆಯಾಚಿಸುವುದು ಮತ್ತು ಸಣ್ಣ ಸಣ್ಣ ವಿಷಯಗಳನ್ನು ಮರೆತುಬಿಡುವುದು ನೆಮ್ಮದಿಯ ಜೀವನಕ್ಕೆ ದಾರಿಯಾಗಿದೆ ಅಲ್ಲದೆ ಇದು ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸದೆ ಸಂಬಂಧವನ್ನು ಬಲಪಡಿಸುತ್ತದೆ. ಕೆಲವೊಮ್ಮೆ ಸಂಗಾತಿಯು ತಪ್ಪು ಮಾಡಿದರೆ ಕ್ಷಮಿಸುವುದು ಹಾಗೂ ನೀವು ತಪ್ಪು ಮಾಡಿದರೆ ಕ್ಷಮೆ ಕೇಳುವುದು ತಪ್ಪಲ್ಲ. ಯಾಕೆ ಮದುವೆಯಾಗಬೇಕು ಎಂಬ ಪ್ರಶ್ನೆಗೆ ಪ್ರತಿಯೊಬ್ಬರೂ ವಿವಿಧ ರೀತಿಯಲ್ಲಿ ಉತ್ತರಿಸುತ್ತಾರೆ.
ಕೆಲವರು ವಯಸ್ಸಾಗುತ್ತಿದೆ, ಒಂಟಿಯಾಗಿರುವ ಕಾರಣ ಸುರಕ್ಷತೆಗಾಗಿ ಯಾರನ್ನಾದರೂ ಮದುವೆಯಾಗಬೇಕು ಎಂದು ಹೇಳುತ್ತಾರೆ ಆದರೆ ಮದುವೆ ಕೇವಲ ಭದ್ರತೆಗೆ ಸಂಬಂಧಿಸಿದ್ದಲ್ಲ ಎಂಬುದನ್ನು ಮರೆಯಬಾರದು. ಅನೇಕರು ಮದುವೆಯನ್ನು ದೊಡ್ಡ ಯಶಸ್ಸು ಎಂದು ಪರಿಗಣಿಸುತ್ತಾರೆ. ಮದುವೆಯು ಜೀವನದ ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಮದುವೆಯು ನಾವು ಮಾಡಬೇಕಾದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಹೀಗಾಗಿ ಮದುವೆಯ ನಂತರ ಎಲ್ಲಾ ವಿಷಯದ ಬಗ್ಗೆ ಜಗಳ ಮಾಡಬಾರದು ಕುಳಿತು ಮಾತನಾಡಿ ನಿರ್ಧರಿಸಬೇಕು.
ಮದುವೆಗೆ ಮುನ್ನ ಯಾರನ್ನು ಮದುವೆಯಾಗುತ್ತೇವೆ ಎಂಬುದು ಮುಖ್ಯ. ಮದುವೆಯಾಗುವುದು ದೊಡ್ಡ ಯಶಸ್ಸು ಎಂದು ಎಂದಿಗೂ ಯೋಚಿಸಬಾರದು. ಕಷ್ಟಗಳಿಂದ ಓಡಿಹೋಗಲು ಸಾಧ್ಯವಿಲ್ಲ ವೈವಾಹಿಕ ಬಂಧದಲ್ಲಿ ಸಮಸ್ಯೆ ಬಂದಾಗ ಧೈರ್ಯದಿಂದ ಸಮಸ್ಯೆಗಳನ್ನು ಎದುರಿಸಿ ಪರಿಹರಿಸಿಕೊಳ್ಳಬೇಕು. ವೈವಾಹಿಕ ಸಂಬಂಧವು ಪರಸ್ಪರ ಸಂಬಂಧ ಹೊಂದಿದೆ. ಮಾತನಾಡುವುದು ಮಾತ್ರವಲ್ಲ ಸಂಗಾತಿ ಏನು ಹೇಳುತ್ತಾರೆಂದು ಕೇಳಬೇಕು. ಸಂತೋಷದ ದಾಂಪತ್ಯ ಜೀವನದಲ್ಲಿ ಗಿವ್ & ಟೇಕ್ ಪಾಲಿಸಿಯಂತೆ ನಿಮ್ಮ ಸಂಗಾತಿಯು ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳಬೇಕು. ಈ ಮಾಹಿತಿಯನ್ನು ದಂಪತಿಗಳು ಅನುಸರಿಸಬೇಕು, ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.