ಬದಲಾಗಲಿದೆ ವೋಟರ್ ಐಡಿ ಬರಲಿದೆ ಮತದಾರರ ಹೊಸ ಡಿಜಿಟಲ್ ಗುರುತಿನ ಚೀಟಿ. ದೇಶದಲ್ಲಿ ಡಿಜಿಟಲ್ ಇಂಡಿಯಾಕ್ಕೆ ಹೆಚ್ಚು ಒತ್ತು ನೀಡುವ ಕಾರ್ಯ ಆರಂಭವಾಗಿದ್ದು, ಈ ನಿಟ್ಟಿನಲ್ಲಿ 2021ರಲ್ಲಿ ಆಧಾರ್ ಕಾರ್ಡ್ ರೀತಿ ವೋಟರ್ ಐಡಿ ಕೂಡಾ ಡಿಜಿಟಲ್ ಆಗುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ. ಕೇಂದ್ರ ಚುನಾವಣಾ ಆಯೋಗ ಪ್ರಸ್ತುತ ಇರುವ ವೋಟರ್ ಐಡಿಯನ್ನು ಡಿಜಿಟಲ್ ಆಗಿ ಪರಿವರ್ತಿಸುವ ಸಿದ್ಧತೆಯಲ್ಲಿದೆ ಎಂದು ಹೇಳಿದೆ. ಮತದಾರರು ತಮ್ಮ ಫೋಟೋ ಗುರುತಿನ ಕಾರ್ಡ್ (ಇಪಿಐಸಿ) ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದೆ. ಮೂಲಗಳು ತಿಳಿಸಿರುವಂತೆ 2021ರಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಡಿಜಿಟಲ್ ವೋಟರ್ ಐಟಿ ಮತದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ನವದೆಹಲಿ, ಡಿಸೆಂಬರ್ 10: ಆಧಾರ್ ಕಾರ್ಡ್‌ನಂತೆಯೇ ನಿಮ್ಮ ಮತದಾರ ಗುರುತಿನ ಚೀಟಿ ಕೂಡ ಡಿಜಿಟಲೀಕರಣವಾಗಲಿದೆ. ಈ ಬಗ್ಗೆ ಭಾರತೀಯ ಚುನಾವಣಾ ಆಯೋಗ (ಇಸಿಐ) ಅಂತಿಮ ನಿರ್ಧಾರ ತೆಗೆದುಕೊಂಡ ಬಳಿಕ ಮತದಾರರು ತಮ್ಮ ಮತದಾರರ ಫೋಟೊ ಐಡೆಂಟಿಟಿ ಕಾರ್ಡ್ (ಎಪಿಕ್) ಅಥವಾ ಮತದಾರರ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಡಿಜಿಟಲ್ ಆವೃತ್ತಿ ಬಳಸಿಯೇ ಮತ ಚಲಾವಣೆಯನ್ನೂ ಮಾಡಬಹುದು. ಚುನಾವಣಾ ಸಮಿತಿಯ ಯೋಜನೆ ಸಿದ್ಧಗೊಂಡಿದ್ದು, ಆಯೋಗವು ಅದಕ್ಕೆ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ ಮತದಾರರಿಗೆ ಈ ಸೌಲಭ್ಯವನ್ನು ಶೀಘ್ರದಲ್ಲಿಯೇ ಒದಗಿಸಲಿದ್ದಾರೆ.
ಹೊಸದಾಗಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಸುವ ಮತದಾರರು ಈ ಸೌಲಭ್ಯವನ್ನು ಸ್ವಯಂಚಾಲಿತವಾಗಿಯೇ ಪಡೆದುಕೊಳ್ಳಲಿದ್ದಾರೆ. ಆದರೆ ಹಾಲಿ ಮತದಾರರು ವೋಟರ್ ಹೆಲ್ಪ್‌ಲೈನ್ ಆಪ್ ಮೂಲಕ ಕೆಲವು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ. ಡೌನ್‌ಲೋಡ್ ಮಾಡಬಲ್ಲ ಡಿಜಿಟಲ್ ಮತದಾರರ ಚೀಟಿಯ ಜತೆಗೆ ಪ್ರಸ್ತುತ ಇರುವ ಎಪಿಕ್ ಸೌಲಭ್ಯವೂ ಚಾಲ್ತಿಯಲ್ಲಿ ಇರಲಿದೆ. ಗುರುತಿನ ಚೀಟಿಯ ವಿತರಣೆಯನ್ನು ಸುಲಭಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ನೋಂದಾಯಿತ ಮೊಬೈಲ್ ಸಂಪರ್ಕಕ್ಕೆ ಕಾರ್ಡ್‌ಅನ್ನು ಡೌನ್‌ಲೋಡ್ ಮಾಡಿಕೊಂಡ ಬಳಿಕ ಹೊಸ ಮತದಾರರಿಗೆ ಸೌಲಭ್ಯಗಳು ಸಿಗಲಿವೆ. ಮತದಾರರ ಚೀಟಿಗೆ ಹೊಸ ಅರ್ಜಿ ಸಲ್ಲಿಸಲು ಸಂಬಂಧಿತ ಅಧಿಕಾರಿಗಳಿಂದ ಒಮ್ಮೆ ಅನುಮೋದನೆ ದೊರೆತರೆ ಅರ್ಜಿದಾರರು ಡಿಜಿಟಲ್ ಮಾದರಿಯಲ್ಲಿ ಅದನ್ನು ಪಡೆಯಬಹುದಾಗಿದೆ. ಎಪಿಕ್‌ನ ಡಿಜಿಟಲ್ ಮಾದರಿಯು ಎರಡು ವಿಭಿನ್ನ ಕ್ಯೂಆರ್ ಕೋಡ್ ಹೊಂದಿರಲಿದೆ.
ಒಂದು ಕ್ಯೂಆರ್ ಕೋಡ್ ಮತದಾರರ ಹೆಸರು ಮತ್ತು ಇತರೆ ಕೆಲವು ನಿರ್ದಿಷ್ಟ ವಿವರಗಳು ಒಳಗೊಂಡಿದ್ದರೆ, ಇನ್ನೊಂದರಲ್ಲಿ ಮತದಾರರ ಇತರೆ ಮಾಹಿತಿಗಳು ಲಭ್ಯವಾಗಲಿವೆ. ಡೌನ್‌ಲೋಡ್ ಮಾಡಲಾದ ಎಪಿಕ್‌ನಲ್ಲಿರುವ ಕ್ಯೂಆರ್ ಕೋಡ್‌ನಲ್ಲಿ ದಾಖಲಾದ ಮಾಹಿತಿಗಳ ಆಧಾರದಲ್ಲಿ ಮತದಾನದ ಹಕ್ಕು ಸಿಗಲಿದೆ. ಈ ಯೋಜನೆ ಜಾರಿಯಾದರೆ ಬೇರೆ ಸೇವೆಗಳಲ್ಲಿರುವ ಮತ್ತು ವಿದೇಶದಲ್ಲಿರುವ ಮತದಾರರು ಕೂಡ ಈ ಎಪಿಕ್‌ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅವರಿಗೆ ಪ್ರಸ್ತುತ ಮತದಾರರ ಗುರುತಿನ ಚೀಟಿ ನೀಡುತ್ತಿಲ್ಲ.
ಕಾರ್ಡ್ ಕಳೆದುಕೊಂಡು ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರು ಕೂಡ ಈ ಸೇವೆ ಬಳಸಿಕೊಳ್ಳಬಹುದು. ಚುನಾವಣಾ ಆಯೋಗದ ಅನುಮತಿ ದೊರೆತ ಬಳಿಕ ಡಿಜಿಟಲ್ ಎಪಿಕ್ ಸೇವೆಯು ಮುಂದಿನ ವರ್ಷ ನಡೆಯುಲಿರುವ ಐದು ವಿಧಾನಸಭೆ ಚುನಾವಣೆಗಳಿಗೂ ಮೊದಲೇ ಲಭ್ಯವಾಗಲಿದೆ. ಡಿಜಿಟಲ್ ವೋಟರ್ ಐಡಿಯ ಎಲ್ಲ ರೂಪುರೇಷೆ ಸಿದ್ಧವಾಗಿದ್ದು, ಆಯೋಗದ ಅಂತಿಮ ಅನುಮತಿ ಸಿಗಬೇಕಿದೆ. ವರದಿಯ ಪ್ರಕಾರ, ಡಿಜಿಟಲ್ ಐಡಿಗಾಗಿ ಚುನಾವಣಾ ಆಯೋಗ ಸಿದ್ದತೆ ನಡೆಸುತ್ತಿದೆ. ಹೊಸದಾಗಿ ದಾಖಲಾದ ಮತದಾರರು ಸ್ವಯಂಚಾಲಿತವಾಗಿ ಡಿಜಿಟಲ್ ಐಡಿ ಕಾರ್ಡ್ ಪಡೆಯಲಿದ್ದಾರೆ. ಉಳಿದ ಮತದಾರರು ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಕೆಲವು ಮಾಹಿತಿ ನೀಡುವ ಮೂಲಕ ವೋಟರ್ ಐಡಿ ಪಡೆದುಕೊಳ್ಳಲು ಅವಕಾಶವಿದೆ ಎಂದು ವಿವರಿಸಿದೆ.