ನಾವಿಂದು ನಿಮಗೆ ತಿಳಿಸಿ ಕೊಡುತ್ತಿರುವ ವಿಷಯ ನ್ಯಾಷನಲ್ ಹೆಲ್ತ್ ಕಾರ್ಡ್ ಬಗ್ಗೆ. ನ್ಯಾಷನಲ್ ಹೆಲ್ತ್ ಕಾರ್ಡ್ ಐಡಿಯನ್ನು ಸ್ವತಹ ನೀವೇ ನಿಮ್ಮ ಮೊಬೈಲ್ನಲ್ಲಿ ಲ್ಯಾಪ್ಟಾಪ್ನಲ್ಲಿ ಹೇಗೆ ಮಾಡಿಕೊಳ್ಳುವುದು ಎಂಬುದರ ಬಗ್ಗೆ ನಾವು ಮಾಹಿತಿ ತಿಳಿಸಿಕೊಡುತ್ತೇವೆ. ಕೇವಲ ನಿಮ್ಮ ಬಳಿ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಇದ್ದರೆ ಕೇವಲ ಐದು ನಿಮಿಷಗಳಲ್ಲಿ ನ್ಯಾಷನಲ್ ಹೆಲ್ತ್ ಕಾರ್ಡನ್ನು ಮಾಡಿಕೊಳ್ಳಬಹುದು. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದೆ ಜೊತೆಗೆ ಈ ನ್ಯಾಷನಲ್ ಹೆಲ್ತ್ ಕಾರ್ಡ್ ಸಂಪೂರ್ಣವಾಗಿ ಉಚಿತವಾಗಿದೆ. ಹಾಗಾದರೆ ನ್ಯಾಷನಲ್ ಹೆಲ್ತ್ ಕಾರ್ಡನ್ನು ಹೇಗೆ ಮಾಡಿಕೊಳ್ಳುವುದು ಇದರ ಪ್ರಯೋಜನಗಳೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ನ್ಯಾಷನಲ್ ಹೆಲ್ತ್ ಕಾರ್ಡನ್ನು ಮಾಡಿಕೊಳ್ಳುವುದಕ್ಕೆ ಮೊದಲಿಗೆ ನ್ಯಾಷನಲ್ ಹೆಲ್ತ್ ಆಫೀಸಿಯಲ್ ವೆಬ್ ಸೈಟ್ ಅನ್ನು ಓಪನ್ ಮಾಡಿಕೊಳ್ಳಬೇಕು. ಅದನ್ನು ತೆರೆದ ತಕ್ಷಣ ಅಲ್ಲಿ ಕೇಸರಿ ಬಣ್ಣದಲ್ಲಿ ಒಂದು ಸೂಚನೆ ಇದೆ ನಿಮ್ಮ ಹೆಲ್ತ್ ಕಾರ್ಡನ್ನು ರಚಿಸುವ ಬಗ್ಗೆ ಅದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮುಂದೆ ಒಂದು ವೆಬ್ಸೈಟ್ ತೆರೆದುಕೊಳ್ಳುತ್ತದೆ ಅಲ್ಲಿ ನೀವು ಸುಲಭವಾಗಿ ನಿಮ್ಮ ಹೆಲ್ತ್ ಐಡಿಯನ್ನು ರಚಿಸಬಹುದು.
ಮೊದಲು ಕೆಲವು ರಾಜ್ಯಗಳಲ್ಲಿ ಮಾತ್ರ ಹೆಲ್ತ್ ಐಡಿಯನ್ನು ರಚನೆ ಮಾಡುವುದಕ್ಕೆ ಅವಕಾಶ ಇತ್ತು. ಆದರೆ ಈಗ ಕರ್ನಾಟಕದಲ್ಲಿಯೂ ಕೂಡ ಈ ಹೆಲ್ತ್ ಐಡಿಯನ್ನು ಮಾಡಿಕೊಳ್ಳುವ ಒಂದು ಕಾರ್ಯ ಚಟುವಟಿಕೆ ಜಾರಿಯಲ್ಲಿದೆ. ಈ ಒಂದು ನ್ಯಾಷನಲ್ ಹೆಲ್ತ್ ಐಡಿ ಕಾರ್ಡ್ ನಿಂದ ಯಾವೆಲ್ಲ ಪ್ರಯೋಜನ ಇದೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ. ಇದು ನಿಮ್ಮ ಆರೋಗ್ಯದ ಪಾಸ್ಬುಕ್ ಇದ್ದಹಾಗೆ ನೀವು ಯಾವುದೇ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡರೆ ಯಾವುದೇ ರೀತಿಯ ಸ್ಕ್ಯಾನಿಂಗ್ ಮಾಡಿಕೊಂಡರೆ ಯಾವುದೇ ರೀತಿಯ ಆಪರೇಷನ್ ಚಿಕಿತ್ಸೆ ಪಡೆದುಕೊಂಡರೆ ಆದರೆ ಸಂಪೂರ್ಣ ಮಾಹಿತಿ ನ್ಯಾಷನಲ್ ಹೆಲ್ತ್ ಕಾರ್ಡ್ ನಲ್ಲಿ ಸೇರಿಕೊಂಡಿರುತ್ತದೆ.
ಮುಂದೊಂದು ದಿನ ನೀವು ಯಾವುದಾದರೂ ಆಸ್ಪತ್ರೆಗೆ ಹೋದಾಗ ಅಲ್ಲಿ ವೈದ್ಯರನ್ನು ಭೇಟಿಯಾದಾಗ ಆಸ್ಪತ್ರೆಯಲ್ಲಿ ದಾಖಲಾದಾಗ ಆನ್ಲೈನ್ನಲ್ಲಿ ನ್ಯಾಷನಲ್ ಹೆಲ್ತ್ ಐಡಿಯ ಮೂಲಕ ನೀವು ಹಿಂದೆ ಯಾವ ತರಹದ ಚಿಕಿತ್ಸೆಯನ್ನು ಪಡೆದುಕೊಂಡಿದ್ದೀರಿ ಎಷ್ಟು ಔಷಧಿಗಳನ್ನು ಪಡೆದಿದ್ದೀರಿ ಹಾಗೂ ಯಾವ ಯಾವ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದೀರಿ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ವೈದ್ಯರಿಗೆ ತಿಳಿಯುತ್ತದೆ. ಇದರಿಂದಾಗಿ ಅವರಿಗೆ ನಿಮಗೆ ಮುಂದಿನ ಚಿಕಿತ್ಸೆಯನ್ನು ನೀಡುವುದಕ್ಕೆ ತುಂಬಾ ಸರಳವಾಗುತ್ತದೆ.
ಮುಂದಿನ ದಿನಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಆರೋಗ್ಯಕ್ಕೆ ಸಂಬಂಧಿಸಿದ ಯಾವುದಾದರೂ ಯೋಚನೆಗಳು ಬಂದಾಗ ಅದರ ಸಂಪೂರ್ಣ ಲಾಭ ನಿಮ್ಮ ಹೆಲ್ತ್ ಐಡಿಗೆ ಸಿಗುತ್ತದೆ ನಿಮಗೆ ಶಸ್ತ್ರಚಿಕಿತ್ಸೆ ಅಥವಾ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಣಕಾಸಿನ ನೆರವು ಸರ್ಕಾರದಿಂದ ಬೇಕು ಎಂದಾಗ ಈ ಹೆಲ್ತ್ ಐಡಿಯ ಮೂಲಕ ಕೆಲವೊಂದು ಸೌಲಭ್ಯಗಳು ನಿಮಗೆ ಸಿಗಬಹುದು. ಹಾಗಾಗಿ ಸರಳವಾಗಿ ಹೆಲ್ತ್ ಐಡಿಯನ್ನು ಮಾಡುವುದು ಹೇಗೆ ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.
ನ್ಯಾಷನಲ್ ಹೆಲ್ತ್ ಆಫೀಸಿಯಲ್ ಸೈಟ್ ಅನ್ನು ಓಪನ್ ಮಾಡಿದಾಗ ಅಲ್ಲಿ ಕ್ರಿಯೇಟ್ ವೈ ಆಧಾರ್ ಎಂಬುದು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಆಧಾರ್ ಕಾರ್ಡ ಸಂಖ್ಯೆಯನ್ನು ನಮೂದಿಸಿ ನಂತರ ಅಗ್ರಿ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ ಅದಾದನಂತರ ಐ ಯಮ್ ನಾಟ್ ರೋಬೋ ಎನ್ನುವುದರ ಮೇಲೆ ಕ್ಲಿಕ್ ಮಾಡಿದ ನಂತರ ಸಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು. ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಆ ಒಟಿಪಿಯನ್ನು ಮೇಲೆ ನಮೂದಿಸಬೇಕು.
ನಂತರ ಸಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಇರುವ ಮೊಬೈಲ್ ಸಂಖ್ಯೆಯನ್ನು ಕೇಳುತ್ತದೆ ಅಲ್ಲಿ ನಿಮ್ಮ ಮೊಬೈಲ್ ನಂಬರನ್ನು ನಮೂದಿಸಬೇಕು ನಂತರ ಮತ್ತೆ ಸಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಮೊಬೈಲ್ಗೆ ಇನ್ನೊಂದು ಓಟಿಪಿ ಬರುತ್ತದೆ ಆ ಒಟಿಪಿಯನ್ನು ಮತ್ತೆ ನಮೂದಿಸಿ ಸಬ್ಮಿಟ್ ಎನ್ನುವುದರ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಮುಂದೆ ಹೆಲ್ತ್ ಐಡಿ ಕಾಣಿಸಿಕೊಳ್ಳುತ್ತದೆ ಅದನ್ನು ಕಾಪಿ ಮಾಡಿಕೊಳ್ಳಬೇಕು ನಂತರ ಓಕೆ ಎನ್ನುವುದರ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಹೆಸರಿನಲ್ಲಿ ಹೆಲ್ತ್ ಐಡಿ ರಚನೆಯಾಗುತ್ತದೆ. ಅದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ಈ ರೀತಿಯಾಗಿ ನೀವು ಕೂಡ ಸುಲಭವಾಗಿ ಹೆಲ್ತ್ ಐಡಿಯನ್ನು ಮಾಡಿಕೊಂಡು ಅದರಿಂದಾಗುವ ಲಾಭಗಳನ್ನು ಪಡೆದುಕೊಳ್ಳಬಹುದು. ಇದರಿಂದಾಗಿ ಒಂದು ವೇಳೆ ಆರೋಗ್ಯದ ಸಮಸ್ಯೆ ಉಂಟಾದಾಗ ಒಳ್ಳೆಯ ರೀತಿಯಲ್ಲಿ ಚಿಕಿತ್ಸೆಯನ್ನು ಪಡೆಯುವುದಕ್ಕೆ ಸಹಾಯವಾಗುತ್ತದೆ. ಈ ಮಾಹಿತಿಯನ್ನು ನೀವು ತಿಳಿದುಕೊಳ್ಳುವುದರ ಜೊತೆ ನಿಮ್ಮ ಪರಿಚಿತರಿಗು ಈ ಹೆಲ್ತ್ ಕಾರ್ಡ್ ನ ಬಗ್ಗೆ ಮಾಹಿತಿಯನ್ನು ತಿಳಿಸಿರಿ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430