ನಮ್ಮ ಭಾರತೀಯರಲ್ಲಿ ಹಲವಾರು ಧರ್ಮಗಳು ಇವೆ. ಅವುಗಳಲ್ಲಿ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್, ಬೌದ್ಧ ಮತ್ತು ಜೈನ ಹಾಗೆಯೇ ಇನ್ನೂ ಕೆಲವು ಇವೆ. ಹಾಗೆಯೇ ಮನುಷ್ಯ ಸತ್ತಾಗ ಆ ಆ ಧರ್ಮದ ಪ್ರಕಾರ ಹೆಣವನ್ನು ಸಂಸ್ಕಾರ ಮಾಡಲಾಗುತ್ತದೆ. ಹಾಗೆಯೇ ಸತ್ತ ನಂತರ ಅಂದರೆ ವ್ಯಕ್ತಿ ಮುಂದೆ ಏನಾಗುತ್ತಾನೆ ಎನ್ನುವುದು ಒಂದೊಂದು ಧರ್ಮದಲ್ಲಿ ಒಂದೊಂದು ರೀತಿಯಲ್ಲಿ ಉಲ್ಲೇಖ ಇದೆ. ಆದ್ದರಿಂದ ನಾವು ಇಲ್ಲಿ ನರಕಲೋಕ ಎನ್ನುವುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನರಕಲೋಕ ಇದೆ ಎನ್ನುವುದನ್ನು ಕೆಲವರು ನಂಬುತ್ತಾರೆ. ಆದರೆ ನರಕಲೋಕ ಇದೆ ಎನ್ನುವುದನ್ನು ಕೆಲವರು ನಂಬುವುದಿಲ್ಲ. ಹಿಂದೂ ಧರ್ಮದಲ್ಲಿ ಮಾತ್ರವಲ್ಲ ಎಲ್ಲಾ ಧರ್ಮದಲ್ಲೂ ಕೂಡ ನರಕಲೋಕದ ಬಗ್ಗೆ ನಂಬಿಕೆ ಇದೆ. ನರಕಲೋಕದಲ್ಲಿ ಯಮಧರ್ಮರಾಜ ಮತ್ತು ಚಿತ್ರಗುಪ್ತ ಇರುತ್ತಾರೆ ಎಂಬ ನಂಬಿಕೆ ಇದೆ. ಇದರ ಬಗ್ಗೆ ಎಲ್ಲ ಧರ್ಮಗಳ ಗ್ರಂಥಗಳಲ್ಲೂ ಪ್ರಸ್ತಾವನೆ ಇದೆ. ಪ್ರಪಂಚದಲ್ಲಿ ಶೀತಲ ಸಮರ ನಡೆಯುತ್ತಿರುವ ಸಮಯದಲ್ಲಿ ರಷ್ಯಾ ಮತ್ತು ಅಮೆರಿಕ ದೇಶಗಳು ಅಧಿಪತ್ಯಕ್ಕಾಗಿ ಹೋರಾಡುತ್ತಿದ್ದವು. ಇಬ್ಬರೂ ಒಬ್ಬರಿಗೊಬ್ಬರು ಅಂತರಿಕ್ಷದಲ್ಲಿ ಪೈಪೋಟಿ ನಡೆಸುತ್ತಿದ್ದರು.
ಆಗಸದಲ್ಲಿ ಎಷ್ಟು ರಹಸ್ಯಗಳು ಇವೆಯೋ ಅಷ್ಟೇ ರಹಸ್ಯಗಳು ಭೂಮಿಯ ಒಳಗೂ ಸಹ ಇವೆ. ಭೂಮಿಯನ್ನು ಆಳವಾಗಿ ಏಳು ಪ್ರಾಂತ್ಯಗಳಲ್ಲಿ ಅಧ್ಯಯನ ನಡೆಸಲಾಗಿದೆ. ಅವುಗಳು ಇರುವ ದೇಶಗಳು ಎಂದರೆ ರಷ್ಯಾ, ಆಫ್ರಿಕಾ, ಕೆನಡಾ, ಮೊಂಥಾನಾ, ಅಂಟಾರ್ಕ್ಟಿಕಾ ಮುಂತಾದವುಗಳು. ಇವುಗಳಲ್ಲಿ ಅತಿ ಆಳವಾಗಿ ಇರುವುದೆಂದರೆ ರಷ್ಯಾದಲ್ಲಿ ಇರುವ ಕೋಲಾಸುಪರ್ ಡೀಪ್ ಬೋರ್ಬೋಲ್. ಇದು ಸುಮಾರು 40,230ಅಡಿ ಆಳವನ್ನು ಹೊಂದಿದೆ. ಈ ಹಳ್ಳ ತೋಡುವಾಗ ನರಕ ಲೋಕದ ಯಾಚನೆ, ಕಿರುಚಾಟಗಳು ಕೇಳಿಸಿತು ಎಂದು ಹೇಳುತ್ತಾರೆ.
ಇದನ್ನು ಅಗೆಯಲು ಸುಮಾರು 20ವರ್ಷಗಳು ಬೇಕಾಯಿತು. ಈ ಪ್ರಯೋಗದಿಂದ ಬಂಡೆಯೊಳಗಡೆ ನೀರು ಲಭ್ಯವಿರುತ್ತದೆ ಎಂದು ತಿಳಿಯಿತು. ಹಾಗೆಯೇ ಭೂಮಿಯ ಒಳಗಡೆ ಜೀವರಾಶಿಗಳು ಇವೆ ಎಂದು ತಿಳಿಯಿತು. ಆದರೆ ಇದರ ಬಗ್ಗೆ ಚಿಂತಿಸದೇ ನರಕ ಲೋಕದ ಅಧ್ಯಯನ ನಡೆಸಲಾಯಿತು. ರಷ್ಯಾದಲ್ಲಿ 1970ರಲ್ಲಿ ಅಗೆಯಲು ಶುರು ಮಾಡಿ 1992ರಲ್ಲಿ ನಿಲ್ಲಿಸಲಾಯಿತು. ಆದರೆ ರಷ್ಯಾ ಮಾತ್ರ ಏಕೆ ಅಧ್ಯಯನ ನಿಲ್ಲಿಸಿತು ಎನ್ನುವುದರ ಬಗ್ಗೆ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಆದರೆ ಭೂಮಿಯ ಒಳಗಡೆ ಹೋದಂತೆ ಶಾಖ ಹೆಚ್ಚಿರುವುದರಿಂದ ಇವರ ಯಾವ ವಸ್ತುಗಳು ಕೆಲಸ ಮಾಡಲು ಸಾಧ್ಯವಾಗದೇ ಕರಗಿ ಹೋಗುತ್ತಿದ್ದವು. ಆದರೆ ನರಕಲೋಕ ಎನ್ನುವುದು ಸುಳ್ಳು ಇದನ್ನು ಯಾರೂ ಕಂಡು ಹಿಡಿಯಲು ಸಾಧ್ಯವಿಲ್ಲ.