ನರದ ಉರಿಯೂತ ಹಾಗೂ ನೋವುಗಳು ದೊಡ್ಡ ನರಜಾಲಗಳು, ನರತಂತುಗಳು ಅಥವಾ ಅತ್ಯಂತವಾಗಿ ದೇಹದ ವಿವಿಧ ಭಾಗಗಳಿಗೆ ಪೂರೈಕೆ ಆಗುವ ನರಗಳು ಕಾರಣಾಂತರದಿಂದ ಊತಗೊಂಡು ವ್ಯಕ್ತಿಗೆ ನೋವನ್ನು ಉಂಟುಮಾಡುವ ರೋಗಸ್ಥಿತಿ ವಾಸ್ತವವಾಗಿ, ನರತಂತುಗಳನ್ನು ಹಾಗೂ ಕಾಂಡಗಳನ್ನು ಸುತ್ತುವರಿದು ಒಟ್ಟಿಗೆ ಬಂಧಿಸಿರುವ ವಿಶಿಷ್ಟ ರೀತಿಯಾಗಿದೆ.

ನರದ ಉರಿಯೂತವು ಬಲು ನೋವು ನೀಡುವ ರೋಗ. ಇದರಿಂದ ಒಳಗಿನ ನರತಂತುಗಳು ಹಿಚುಕಲ್ಪಟ್ಟಂತಾಗಿ ಅವುಗಳ ಕ್ರಿಯೆಗೆ ಧಕ್ಕೆ ಒದಗಿ ರೋಗ ಉಂಟಾಗುತ್ತದೆ. ರೋಗ ಸಾಧಾರಣವಾಗಿ ಮಧ್ಯವಯಸ್ಸಿನ ವ್ಯಕ್ತಿಯಲ್ಲಿ ಕಂಡುಬರುತ್ತದೆ. ರೋಗದ ಅತ್ಯಂತ ಪ್ರಮುಖಲಕ್ಷಣ ನೋವು. ರೋಗಗ್ರಸ್ತ ನರ ಪಸರಿಸಿರುವ ಎಲ್ಲ ಕಡೆಯಲ್ಲೂ ನೋವು ಇರುತ್ತದೆ.

ನರಗಳ ನೋವಿಗೆ ಸುಲಭವಾಗಿ ಮನೆಯಲ್ಲಿ ಪರಿಹಾರ ಕಂಡುಕೊಳ್ಳಬೇಕಾದ್ದಲ್ಲಿ ನಾವು ಸೇವಿಸುವಂತಹ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಅನುಸರಿಸಿದರೆ ಸ್ವಲ್ಪ ಪ್ರಮಾಣದ ನೋವನ್ನು ಶಮನಗೊಳಿಸಲು ಸಹಕಾರಿಯಾಗುತ್ತದೆ, ಮೊದಲಿಗೆ ಉಪ್ಪು ಮತ್ತು ಸಕ್ಕರೆಯನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸಬೇಕು, ಐಸ್ ಕ್ರೀಮ್ ಬಳಕೆಯನ್ನು ಕಡಿಮೆ ಮಾಡಬೇಕು ಹಾಗೂ ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆ ನಿಲ್ಲಿಸಬೇಕು. ಮತ್ತು ಮಧ್ಯಪಾನ ಮಾಡುವುದು ಸಂಪೂರ್ಣವಾಗಿ ನಿಲ್ಲಿಸಬೇಕು. ಯಾವುದೇ ಪ್ರಾಣಿಯ ಪ್ರೊಟೀನ್ಯುಕ್ತ ಮಾಂಸವನ್ನು ಸೇವಿಸಬಾರದು.

ಕೆಲವು ಸರಳ ಮನೆ ಚಿಕಿತ್ಸೆ ಎಂದರೆ ಪುದೀನಾದ ಎಣ್ಣೆಯಿಂದ ಮಸಾಜ್ ಮಾಡಬೇಕು ನರಗಳಿಗೆ ಈ ಎಣ್ಣೆಯಿಂದ ಮಸಾಜ್ ಮಾಡಿದರೆ ನೋವು ಕಡಿಮೆ ಆಗುತ್ತದೆ ಇದು ಆಯುರ್ವೇದಿಕ್ ಔಷಧಾಲಯಗಳಲ್ಲಿ ದೊರೆಯುತ್ತದೆ. ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಮಸಾಜ್ ಮಾಡಬೇಕು. ಹಸುವಿನ ಹಾಲಿನೊಂದಿಗೆ ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ನೋವಿಗೆ ಪರಿಹಾರ ಸಿಗುತ್ತದೆ ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ ಇರುವುದರಿಂದ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ದೊರೆಯುತ್ತದೆ.

ಒಣ ದ್ರಾಕ್ಷಿ ತಿನ್ನುವ ಅಭ್ಯಾಸ ಮಾಡಿಕೊಂಡರೆ ದೇಹದ ಶಕ್ತಿಯ ಜೊತೆಗೆ ನರಗಳ ನೋವಿಗೂ ನಿವಾರಣೆ ನೀಡುತ್ತದೆ. ಆಯುರ್ವೇದ ಪುಡಿಯನ್ನು ಹಾಲಿನಲ್ಲಿ ಮಿಶ್ರಣ ಮಾಡಿ ಕುಡಿಯಬೇಕು. ಸೂಕ್ತ ರೀತಿಯ ವ್ಯಾಯಾಮ ಮಾಡುವುದು ನರಗಳ ನೋವಿಗೂ ಹಾಗೂ ದೇಹದ ಅಭಿವೃದ್ಧಿಗೂ ಉಪಕಾರಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!