ಮೈಸೂರು ಸ್ಯಾಂಡಲ್ ಸೋಪ್ ಈ ಹೆಸರು ಕೇಳದ ಮಂದಿ ಬಹುಶಃ ನಮ್ಮ ರಾಜ್ಯದಲ್ಲಿ ಇಲ್ಲವೇನೋ ದೇಶ ವಿದೇಶಗಳಲ್ಲಿ ಕಂಪು ಸೂಸಿ ಕರ್ನಾಟಕದ ಹೆಮ್ಮೆಯೆನಿಸಿಕೊಂಡ ನಮ್ಮದೇ ಸಾಬೂನು ಮೈಸೂರು ಸ್ಯಾಂಡಲ್ ಸೋಪಿನ ಈ ಸುಗಂಧಕ್ಕೆ 100 ತುಂಬಿದೆ. ಮೈಸೂರು ಸ್ಯಾಂಡಲ್ ಸೋಪ್ ಭಾರತದಲ್ಲಿರುವ ಅತೀ ದೊಡ್ಡ ಸೋಪ್ ನಿರ್ಮಾಣ ಕಂಪನಿಗಳಲ್ಲೊಂದಾಗಿದೆ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಕಂಪನಿಯಂಬ ಕರ್ನಾಟಕ ಸರ್ಕಾರ ಸಂಸ್ಥೆ, ಮೈಸೂರು ಮತ್ತು ದಕ್ಷಿಣ ಭಾರತದ ಚರಿತ್ರೆಯಲ್ಲಿ ಸದಾ ಉಲ್ಲೇಖನಿಯವಾಗಿದೆ.
ಇದು ಕರ್ನಾಟಕ ಸರ್ಕಾರದಿಂದಲೇ ತಯಾರಾಗುವ ಸಾಬೂನಿನ ಒಂದು ಬ್ರಾಂಡ್. ಸಂಪೂರ್ಣ ಗಂಧದೆಣ್ಣೆಯಿಂದ ತಯಾರಿಸಲಾಗಿವ ಜಗತ್ತಿನ ಏಕೈಕ ಸಾಬೂನು ಎಂದು ಪ್ರಸಿದ್ಧವಾಗಿದೆ.೧೯೧೬ ರಲ್ಲಿ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸರ್ಕಾರಿ ಸೋಪ್ ಫಾಕ್ಟರಿಯನ್ನು ಸ್ಥಾಪಿಸಿದರು, ನಾಲ್ವಡಿ ಕೃಷ್ಣರಾಜ ಒಡೆಯರ್, ವಿಶ್ವೇಶ್ವರಯ್ಯ, ಶ್ರೀ ಎಸ್ ಜಿ ಶಾಸ್ತಿ ಈ ಮೂವರು ಸ್ಯಾಂಡಲ್ ಸೋಪ್ ನ ಪ್ರವರ್ತಾಕರು. ಮೊದಲೇ ವಿಶ್ವ ಯುದ್ಧದ ಕಾರಣದಿಂದ ಯುರೋಪಿಗೆ ರಫ್ತು ಸಾಧ್ಯವಾಗದಿದ್ದಾಗ ಹೇರಳವಾಗಿ ದೊರೆಯುತ್ತಿದ್ದ ಗಂಧದ ಮರ ಮತ್ತು ಹೇರಳವಾಗಿದ್ದ ಗಂಧದ ಮರ ದಾಸ್ತಾನು ಇದಕ್ಕೆ ಮುಖ್ಯ ಪ್ರೇರಣೆಯಾಗಿತ್ತು.
1980 ರಲ್ಲಿ ಸರ್ಕಾರಿ ಸೋಪ್ ಕಾರ್ಖಾನೆ ಮತ್ತು ಶಿವಮೊಗ್ಗದ ಗಂಧದೆಣ್ಣೆ ಕಾರ್ಖಾನೆಗಳನ್ನು ಮಿತಗೊಳಿಸಿ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ ಕಂಪನಿ ಮಾಡಲಾಯಿತು.ಗಂಧದ ಎಣ್ಣೆ ತೆಗೆಯಲು ಬೇಕಾಗುವ ಎಲ್ಲಾ ರೀತಿಯ ಯಂತ್ರ ಸೌಲಭ್ಯಗಳು ಮೈಸೂರಿನಲ್ಲಿನ ಕಾರ್ಖಾನೆಯಲ್ಲಿದ್ದ ಇದು ಜಗತ್ತಿನ ಅತೀ ದೊಡ್ಡ ಹಾಗೂ ಸುಸಜ್ಜಿತ ಗಂಧದ ಎಣ್ಣೆಯ ಕಾರ್ಖಾನೆ ಎನಿಸಿದೆ. ಅತ್ಯಂತ ಆಧುನಿಕವಾದ ಗುಣ ನಿಯಂತ್ರಣ ಪ್ರಯೋಗಲಯವು ಕೂಡ ಇಲ್ಲಿದೆ. ಮುಂಬೈ ಕಾಣ್ಪುರ, ಕುಪ್ಪಂ, ಮೆಟ್ಟೂರು, ಸೇಲಂ ಹೀಗೆ ಮೊದಲಾದ ಕಡೆಯಲ್ಲಿಯೂ ಸಣ್ಣ ಪ್ರಮಾಣದ ಕಾರ್ಖಾನೆಗಳಿವೆ.