ಪ್ರಧಾನಮಂತ್ರಿ ಮುದ್ರಾ ಯೋಜನೆ ದೇಶದ ಸೂಕ್ಷ್ಮ ವ್ಯವಹಾರ ವ್ಯಾಪಾರ ಘಟಕಗಳ ಅಭಿವೃದ್ಧಿ ಹಾಗು ಅವುಗಳಿಗೆ ಆರ್ಥಿಕ ನೆರವು ನೀಡಲು ಸ್ಥಾಪಿತವಾದ ಕೇಂದ್ರ ಸರ್ಕಾರಿ ಅಧೀನ ಸಂಸ್ಥೆಯೇ ಮುದ್ರಾ[ಮೈಕ್ರೋ ಯೂನಿಟ್ಸ್ ಡೆವಲಪ್ಮೆಂಟ್ ಅಂಡ್ ರಿಫಿನಾನ್ಸ್ ಏಜೆನ್ಸೀ (MUDRA)]. ೨೦೧೬ ನೇ ಇಸವಿಯ ಹಣಕಾಸು ಬಜೆಟ್ ಮಂಡನೆಯ ಸಂಧರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು ಮುದ್ರಾ ಯೋಜನೆಯನ್ನು ಘೋಷಣೆ ಮಾಡಿದರು. ಮುದ್ರಾ ಯೋಜನೆಯ ಮುಖ್ಯ ಉದ್ದೇಶ ಸೂಕ್ಷ್ಮ ಉದ್ದಿಮೆಗಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಉತ್ತೇಜನ ನೀಡುವುದು.
ಇದುವರೆಗೂ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಮುದ್ರಾ ಯೋಜನೆಯ ಮೂಲಕ ಯೋಗ್ಯ ವ್ಯಕ್ತಿಗಳಿಗೆ ಒದಗಿಸಿಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಯೋಜನೆಯ ಬಗ್ಗೆ ಸ್ಪಷ್ಟ ನಿಲುವು ಹೊಂದಿದ್ದು ಭಾರತದ ಯುವಜನತೆ ಉದ್ಯೋಗ ಸೃಷ್ಟಿಕರ್ತರಾಗಬೇಕೇ ಹೊರತು ಉದ್ಯೋಗ ಅರಸಿ ಅಲೆಯುವರಾಗಬಾರದು ಎನ್ನುವ ಧ್ಯೇಯದೊಂದಿಗೆ ಯೋಜನೆ ಆರಂಭಿಸಿದ್ದು ಯುವಜನತೆ ಇದರ ಸದುಪಯೋಗ ಪಡೆದುಕೊಂಡು ದೇಶದ ಭವಿಷ್ಯವನ್ನು ಇನ್ನು ಎತ್ತರಕ್ಕೆ ಕೊಂಡೊಯ್ಯಬೇಕು ಎಂಬುದು ಇದರ ಆಶಯ.ಸೂಕ್ಷ್ಮ ಉದ್ದಿಮೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಮುದ್ರಾ ಯೋಜನೆಯನ್ನು ಕೊಡುವ ಸಾಲದ ಪ್ರಮಾಣದ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.
ಶಿಶು ಸಾಲ ಯೋಜನೆ – ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲ
ಕಿಶೋರ ಸಾಲ ಯೋಜನೆ – ಐವತ್ತು ಸಾವಿರ ರೂಪಾಯಿ ಮೇಲ್ಪಟ್ಟು ಹಾಗು ಐದು ಲಕ್ಷಕ್ಕಿಂತ ಕಡಿಮೆ ಸಾಲ ತರುಣ ಸಾಲ ಯೋಜನೆ – ಐದು ಲಕ್ಷಕ್ಕೆ ಮೇಲ್ಪಟ್ಟು ಹಾಗು ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲ.
ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ ಸಾಲಕ್ಕಾಗಿ, ನೀವು ಸರ್ಕಾರ ಅಥವಾ ಬ್ಯಾಂಕ್ ಶಾಖೆಗೆ ಅರ್ಜಿ ಸಲ್ಲಿಸಬೇಕು. ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ನೀವು ಬಯಸುತ್ತಿದ್ದರೆ, ನಂತರ ನೀವು ಮಾಲೀಕತ್ವ ಅಥವಾ ಬಾಡಿಗೆ ದಾಖಲೆಗಳು, ಕೆಲಸಕ್ಕೆ ಸಂಬಂಧಿಸಿದ ಮಾಹಿತಿ, ಆಧಾರ್, ಪ್ಯಾನ್ ಸಂಖ್ಯೆ ಮತ್ತು ಇತರ ಹಲವು ದಾಖಲೆಗಳನ್ನು ಒದಗಿಸಬೇಕು. ಮುದ್ರಾ ಯೋಜನೆಯ ವೆಬ್ಸೈಟ್ನಲ್ಲಿ ಸಾಲ ನೀಡುವ ಎಲ್ಲ ಬ್ಯಾಂಕುಗಳ ವಿವರಗಳನ್ನು ನೀಡಲಾಗಿದ್ದು, ಫಾರ್ಮ್ ಅನ್ನು ನೀವು ಆನ್ಲೈನ್ ಮೂಲಕವೂ ಡೌನ್ಲೋಡ್ ಮಾಡಿಕೊಳ್ಳಬಹುದು.
ನೀವು ಯಾವ ಬಿಸಿನೆಸ್ ಮಾಡಬೇಕೆಂದರೂ ಅದರದ ಒಂದು ಪತ್ರವನ್ನು ಬರೆದುಕೊಂಡು ಹೋಗಬೇಕು. ಅಥವಾ ಬಿಲ್ ರೆಸಿಪ್ಟ್ ತೆಗೆದುಕೊಂಡು ಹೋಗಬೇಕು. ಒಂದು ಅಧಿಕೃತ ಬ್ಯಾಂಕಿನಲ್ಲಿ ಈ ಯೋಜನೆ ಅಡಿಯಲ್ಲಿ ನಿಮಗೆ ಸಾಲವನ್ನು ನೀಡಲಾಗುತ್ತದೆ. ಗುರುತಿನ ಪ್ರಮಾಣಪತ್ರ
ನಿವಾಸದ ಪುರಾವೆ ಯಂತ್ರೋಪಕರಣಗಳು ಇತ್ಯಾದಿ ಮಾಹಿತಿ ಪಾಸ್ಪೋರ್ಟ್ ಗಾತ್ರದ ಫೋಟೋ ವ್ಯಾಪಾರ ಪ್ರಮಾಣಪತ್ರ ವ್ಯವಹಾರ ವಿಳಾಸದ ಪುರಾವೆ, ಸಾಲದ ಅರ್ಜಿಯನ್ನು https://www.mudra.org.in/ ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿ. ಶಿಶು ಸಾಲದ ಅರ್ಜಿ ಭಿನ್ನವಾಗಿರುತ್ತದೆ. ಆದರೆ ತರುಣ್ ಮತ್ತು ಕಿಶೋರ್ ಸಾಲಕ್ಕೆ ಫಾರ್ಮ್ ಒಂದೇ ಆಗಿರುತ್ತದೆ. ಸಾಲದ ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು. ಸರಿಯಾದ ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ, ಹೆಸರು, ವಿಳಾಸ ಇತ್ಯಾದಿಗಳ ಮಾಹಿತಿಯನ್ನು ಒದಗಿಸಿ.