ಕೆಲವು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಒಬ್ಬ ಮಹಿಳೆಯ ವಿಚಾರ ತುಂಬಾ ಹರಿದಾಡುತ್ತಿದೆ. ಎಲ್ಲಿ ನೋಡಿದರೂ ಅವರದ್ದೇ ಚರ್ಚೆ ಹಾಗೂ ಟ್ರೊಲ್ ಗಳು ಅವರೇ ಅನ್ನಪೂರ್ಣ ಅರಸು ಮಾತಾ. ದೇವ ಮಾತೇ ಎಂದು ಖ್ಯಾತಿಯಾಗಿರುವ ಇವರ ಒಂದು ಆಶೀರ್ವಾದಕ್ಕಾಗಿ ಜನರು ದಂಡು ದಂಡಾಗಿ ಇವರ ಮುಂದೆ ಮುಗಿ ಬೀಳುತ್ತಾರೆ ಸ್ವಚ್ಛ ರೇಷ್ಮೆ ಸೀರೆ ಅವರ ಬಣ್ಣಕ್ಕೊಪ್ಪುವ ಮೇಕಪ್ ಕಣ್ಣಿಗೆ ತುಸು ಕಾಡಿಗೆ ತೀಡಿದ ಐಬ್ರೋಸ್ ದಟ್ಟ ಲಿಫ್ಟಿಕ್ ಹಾಗೂ ತಾನೇ ಪತಿವ್ರತೆಯ ಅಂಬಾಸಿಡರ್ ಎನ್ನುವಂತೆ ಹೊರಸೂಸುವ ದೈವಿಕತೆಯ ಮುಂತಾದ ಲಕ್ಷಣಗಳಿಗೆ ಮನಸೋತ ಜನಸ್ತೋಮ ಈಕೆ ಕಾಲಿಗೆ ಬೀಳುತ್ತಾರೆ. ಈಕೆ ಒಂದು ದರ್ಶನಕ್ಕೆ ಪ್ರತಿಯೊಬ್ಬರೂ ತಲಾ ಎರಡೆರಡು ಸಾವಿರ ಹಣವನ್ನು ಪಾವತಿಸಿ ಕ್ಯೂನಲ್ಲಿ ಇವರ ದರ್ಶನಕ್ಕೆ ಬರಬೇಕು.

ಎಷ್ಟೋ ಜನ ಹಣ ಹೋದರೆ ಹೋಗಲಿ ಮಾತೆಯ ಅನುಗ್ರಹಕ್ಕಿಂತ ಅದೇನು ಹೆಚ್ಚಲ್ಲ ಎಂದು ಈ ಅಮ್ಮ ನಮ್ಮೆಲ್ಲ ಕಷ್ಟಕಾರ್ಪಣ್ಯಗಳನ್ನು ಬಗೆಹರಿಸುತ್ತಾರೆ ಎಂದು ಕೈಜೋಡಿಸಿ ಇವರಿಗೆ ನಮಸ್ಕರಿಸುತ್ತಾರೆ. ಭಕ್ತರ ಈ ಭಾವಾವೆಷಕ್ಕೆ ಪ್ರತಿಯಾಗಿ ಮಾತೆ ಕಣ್ಣಿಂದ ಧಾರಾಕಾರವಾಗಿ ನೀರು ಹರಿಯುತ್ತದೆ. ಭಕ್ತರ ಭಕ್ತಿಯನ್ನು ಕಂಡು ಮಾತೆಗೆ ಮೈಯಲ್ಲಿ ನಿಗೂಢ ಶಕ್ತಿಯೊಂದು ಸಂಚರಿಸುತ್ತದೆ ಅದರ ಪ್ರಭಾವದಿಂದ ಮಾತೆಯ ದೇಹದಲ್ಲಿ ಒಂದು ರೀತಿಯ ವೈಬ್ರೇಶನ್ ಉಂಟಾಗಿ ಇಡೀ ದೇಹ ಕರೆಂಟ್ ಹೊಡೆದವರಂತೆ ಅಲುಗಾಡುವುದುಕ್ಕೆ ಪ್ರಾರಂಭಿಸುತ್ತದೆ. ಜನರು ಶಕ್ತಿದೇವತೆ ಮೈಮೇಲೆ ಬಂತು ಎಂದು ಭಾವಿಸಿ ಭಕ್ತರು ಆಕೆಗೆ ದಂಡ ಸಲ್ಲಿಸುತ್ತಾರೆ. ಇವರ ವಿಡಿಯೋ ಈಗ ಸಮಾಜಿಕ ಜಾಲತಾಣದಲ್ಲಿ ಎಲ್ಲಾ ಕಡೆಗಳಲ್ಲಿ ಸದ್ದು ಮಾಡುತ್ತಿದೆ.

ಕೆಲವು ಜನರಿಗೆ ಇವರ ಮುಖ ಎಲ್ಲೋ ನೋಡಿದಂತಿದೆ ಎನಿಸಿ ನೆಟ್ಟಿನಲ್ಲಿ ಇವರ ಬಗ್ಗೆ ಜಾಲಾಡಿದಾಗ ಇವರ ಬಗ್ಗೆ ಒಂದು ರೋಚಕ ಕಥೆ ತೆರೆದುಕೊಂಡಿತು. ತಾನು ಆದಿಶಕ್ತಿಯ ಸ್ವರೂಪ ಎಂದು ಹೇಳಿಕೊಳ್ಳುವ ಮಹಿಳೆ ಒಂದಿಷ್ಟು ವರ್ಷಗಳ ಹಿಂದೆ ತಮಿಳಿನ ಜೀ ವಾಹಿನಿಯಲ್ಲಿ ಪ್ರಸಾರವಾಗಿದ್ದಂತಹ ಕಾರ್ಯಕ್ರಮ ಒಂದರಲ್ಲಿ ಕಾಣಿಸಿಕೊಂಡಿದ್ದರು. ಅದು ಕನ್ನಡದ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮದ ತಮಿಳು ವರ್ಷನ್. ಆ ಕಾರ್ಯಕ್ರಮದಲ್ಲಿ ಇವರು ಕಾಣಿಸಿಕೊಳ್ಳುವುದಕ್ಕೆ ಕಾರಣ ಇವರು ಒಂದು ಸಂಸಾರವನ್ನು ಒಡೆದು ಹಾಕಿದಂತಹ ಕೇಸ್ ದಾಖಲಾಗಿತ್ತು ಒಂದು ಸಂಸಾರದ ಸುಖ ಶಾಂತಿಯನ್ನು ನಾಶಮಾಡಿ ಸಂಸಾರದ ಗುಟ್ಟನ್ನು ಬೀದಿಪಾಲು ಮಾಡಿ ಅದು ಟಿವಿ ಪತ್ರಿಕೆಗಳಲ್ಲಿ ಚರ್ಚೆಯಾಗುವ ಹಾಗೆ ಮಾಡಿದ ಈ ಮಹಿಳೆಗೆ ಅದಾಗಲೇ ಮದುವೆಯಾಗಿ ವಯಸ್ಸಿಗೆ ಬಂದಂತಹ ಇಬ್ಬರು ಮಕ್ಕಳಿದ್ದರು.

ಆ ರೀತಿ ಇದ್ದರೂ ಸಂಸಾರ ಮಕ್ಕಳು ಎಂದು ಗೃಹಿಣಿಯಾಗಿ ಇರುವ ಬದಲು ತನ್ನನ್ನು ತಾನು ಜೂನಿಯರ್ ಖುಷ್ಬೂ ಎಂದು ಭಾವಿಸಿದ ಈ ಅನ್ನಪೂರ್ಣೆ ಎದುರುಮನೆಯ ಅರಸು ಎಂಬ ವ್ಯಕ್ತಿಯನ್ನು ತನ್ನ ಅಂದದ ಮೋಹದಿಂದ ಸೆಳೆದಿದ್ದಳು ಅಥವಾ ಅವನೇ ಅವಳ ಮೋಹಕ್ಕೆ ಬಿದ್ದಿದ್ದನು ಗೊತ್ತಿಲ್ಲ. ಅತ್ತ ಅರಸು ಕೂಡ ಮದುವೆಯಾದವನು ಅವನಿಗೆ ಎದೆ ಮಟ್ಟಕ್ಕೆ ಬೆಳೆದಂತಹ ಎರಡು ಮಕ್ಕಳಿದ್ದರು ಪಾಪ ಅವರ ಹೆಂಡತಿ ಏನೂ ಅರಿಯದ ಮುಗ್ಧೆ. ಅನ್ನಪೂರ್ಣೆ ತನ್ನ ಗಂಡನನ್ನ ತನ್ನಿಂದ ಕಸಿದುಕೊಂಡಿದ್ದಾರೆ ತನ್ನ ಗಂಡ ತನಗೆ ಬೇಕು ಎನ್ನುವುದು ಆಕೆಯ ದೂರಾಗಿತ್ತು. ಇತ್ತ ಅನ್ನಪೂರ್ಣೆ ಕೂಡ ಅರಸು ತನಗೆ ಬೇಕು ಎಂದು ಹಠ ಹಿಡಿದಿದ್ದಳು ಅರಸು ಕೂಡ ಆಕೆಗಾಗಿ ತನ್ನ ಹೆಂಡತಿ ಮಕ್ಕಳನ್ನು ತ್ಯಜಿಸಿದ್ದ ಅನ್ನಪೂರ್ಣೆಗಾಗಿ ತಾನು ಜೈಲಿಗೆ ಹೋಗುವುದಕ್ಕೂ ಸಿದ್ಧ ಎಂದು ಹೇಳಿದ್ದ. ಅನ್ನಪೂರ್ಣೆಗೆ ನಿನ್ನ ಬದುಕನ್ನು ನೀನು ಜೀವಿಸು ಬೇರೆಯವರ ಬದುಕು ಹಾಳು ಮಾಡುವುದು ತಪ್ಪು ಎಂದು ಆ ಕಾರ್ಯಕ್ರಮದ ನಿರೂಪಕಿ ತಿಳಿಸಿದ್ದರು.

ಯಾರು ಏನೇ ಹೇಳಿದರೂ ನನಗೆ ನನ್ನ ಹಳೆಯ ಗಂಡ ಬೇಡ ಮಕ್ಕಳು ಬೇಡ ನನಗೆ ಅರಸು ಮಾತ್ರ ಬೇಕು ಎಂದು ಹೇಳಿದ ಆಕೆಯ ಮಾತಿಗೆ ನಿರೂಪಕಿ ಸೇರಿ ಅಲ್ಲಿದ್ದವರೆಲ್ಲರೂ ಸುಸ್ತಾಗಿದ್ದರು. ಕೋಪಗೊಂಡ ಜನ ಅರಸು ಮೇಲೆ ಹಲ್ಲೆಗೆ ಮುಂದಾಗಿದ್ದರು ಈ ಕಾರ್ಯಕ್ರಮ ಆಗ ಮಾಧ್ಯಮಗಳಲ್ಲಿ ತುಂಬಾ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಎಲ್ಲಾ ಕಡೆ ಚರ್ಚೆಗಳು ಜೋರಾದವು ಈ ಕಾರ್ಯಕ್ರಮವನ್ನು ಬಿಟ್ಟರೆ ಆಕೆ ಕಾಣಿಸಿಕೊಂಡಿದ್ದು ವನವಾಸವನ್ನು ಮುಗಿಸಿ ಜಂಗಲ್ ಪೇಟೆ ಜಿಲ್ಲೆಯ ತಿರುಪವಿಲ್ಲಾರ ಕಲ್ಯಾಣ ಮಂಟಪದಲ್ಲಿ ಅನ್ನಪೂರ್ಣೆ ಶೆಡ್ ಡಾನ್ಸ್ ಮೂಡ್ ನಲ್ಲಿ ಭಕ್ತರ ಮುಂದೆ ಕುಳಿತಿದ್ದರು. ಜನರು ತಮ್ಮ ಇಷ್ಟಾರ್ಥ ಗಳನ್ನು ನೆರವೇರಿಸುವುದಕ್ಕೆ ಯಾರೋ ದೇವಿ ಧರೆಗಿಳಿದು ಬಂದಿರಬೇಕು ಎಂದು ಭಾವಿಸಿದ್ದರು. ಮೊದಲೇ ವ್ಯಕ್ತಿ ಪೂಜೆಗೆ ಹೆಸರಾದ ತಮಿಳುನಾಡಲ್ಲಿ ಹೀಗೆಲ್ಲಾ ಮಾಡಿದರೆ ಜನ ನಂಬದೆ ಇರುತ್ತಾರಾ.

ಜನ ಕೂಡ ಭಾರಿ ಸಂಖ್ಯೆಯಲ್ಲಿ ಸೀರೆ ಹೂವು ಹಣ್ಣು ಕಾಯಿ ಸೇರಿದಂತೆ ಕಾಣಿಕೆ ಜೊತೆ ಸಾಲುಗಟ್ಟಿ ನಿಂತರು. ನೋಡುವುದಕ್ಕೆ ಇಷ್ಟು ಆಕರ್ಷಣವಾಗಿರುವ ಅನ್ನಪೂರ್ಣೆಯ ಅಸಲಿ ಮುಖ ಮೇಕಪ್ ನ ಬಗ್ಗೆ ತಿಳಿಯದ ಈ ಜನ ಆಕೆಯ ಮುಖ ಆಕರ್ಷಣೆಯ ಹಾಗೂ ತೇಜಸ್ಸಿಗೆ ಸೋತು ಆಕೆಯ ಮುಂದೆ ನಿಂತು ತಮ್ಮ ಸಂಕಷ್ಟಹಾರಿಣಿ ಎಂದು ನಂಬಿದರು. ಅವರಲ್ಲಿ ಎಲ್ಲರೂ ಮೂರ್ಖರಲ್ಲ ಕೆಲವರು ಬುದ್ಧಿವಂತರಿದ್ದರು ಅಂತವರು ಇವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಟ್ರೋಲ್ ಮಾಡಿದರು. ಆದರೆ ಈ ದೇವಿ ಮಾತ್ರ ಟಿವಿ ಪರದೆಯ ಮುಂದೆ ಸರ್ವಾಲಂಕಾರ ಭೂಷಿತಳಾಗಿ ಕುಳಿತು ತನ್ನ ಮೇಲೆ ಟ್ರೋಲ್ ಮಾಡಿದ ಪುಂಡರ ಮೇಲೆ ದೂರನ್ನು ಕೊಟ್ಟಳು. ಆಕೆ ಪ್ರೆಸ್ ಕರೆಸಿ ದೂರನ್ನು ಕೊಟ್ಟಾಗ ಕೆಲವರು ಸಂದರ್ಶಕರು ನೀವು ದೇವಿ ಸ್ವರೂಪನಾ ನಿಮಗೆ ಹೇಗೆ ದೇವಿಯ ಅನುಗ್ರಹವಾಯಿತು ಯಾವಾಗ ಆಯ್ತು ಸ್ವಲ್ಪ ವಿವರಿಸುತ್ತೀರಾ ಎಂದು ಕೇಳಿದರು.

ಅದಕ್ಕೆ ಪ್ರತಿಯಾಗಿ ಅನ್ನಪೂರ್ಣೆ ತಾನು ಶಿವ ಹಾಗೂ ಶಕ್ತಿಗಳ ಸಮ್ಮಿಲನ ಎರಡು ಸತ್ತ ದೇಹಗಳ ಆತ್ಮ ನನ್ನೊಳಗೆ ಸೇರಿದೆ ನಾನು ಎಲ್ಲರ ತಾಯಿ. ಹಿಂದೂ-ಮುಸ್ಲಿಂ ಯಾರೇ ಇರಲಿ ನಾನು ಎಲ್ಲರಿಗೂ ತಾಯಿ ಹಾಗಾಗಿ ಅವರ ಕಷ್ಟ ನನ್ನ ಕಷ್ಟ ಭಕ್ತಾದಿಗಳ ಸಮಸ್ಯೆಗಳನ್ನು ನೀಗಿಸಲೆಂದೇ ನಾನು ಭೂಮಿಗೆ ಬಂದಿದ್ದೇನೆ ಎಂದು ಆಧ್ಯಾತ್ಮ ಹಾಗೂ ಫಿಲಾಸಫಿಗಳನ್ನು ಸೇರಿಸಿ ವಿವರಣೆಯನ್ನು ನೀಡಿದರು. ಒಂದು ಕಾಲದಲ್ಲಿ ಅನ್ಯಾಯವಾಗಿ ಒಂದು ಸಂಸಾರದ ಸುಖ ಶಾಂತಿಯನ್ನು ತನ್ನ ಸ್ವಾರ್ಥಕ್ಕಾಗಿ ಬಲಿ ಕೊಟ್ಟಂತಹ ದೇವಿ ಈಗ ಜನರ ಕಷ್ಟಗಳನ್ನು ಪರಿಹರಿಸುವುದಕ್ಕೆ ಬಂದಿದ್ದಾರಂತೆ. ಇವರ ಮೂಲ ಹಿನ್ನೆಲೆಯನ್ನು ನೋಡುವುದಾದರೆ ಇವರು ಕರೇಕುಡಿ ಗ್ರಾಮದವರು. ಕಡು ಬಡತನದಲ್ಲಿ ಜನಿಸಿದಂತಹ ಈಕೆಗೆ ಒಬ್ಬ ಅಣ್ಣ ಇಬ್ಬರು ಅಕ್ಕಂದಿರು ಇದ್ದರು. ಈಕೆಯ ತಂದೆ ಸೈಕಲ್ ಮೇಲೆ ಬಟ್ಟೆಗಳನ್ನು ಹೊತ್ತು ತಂದು ಊರೂರು ಮಾರಾಟ ಮಾಡುತ್ತಾ ಸಣ್ಣ ಮಟ್ಟದ ವ್ಯಾಪಾರಿ ಆಗಿದ್ದರು.ಅವರ ಅಲ್ಪ ಗಳಿಕೆಯಲ್ಲಿಯೆ ಸಂಸಾರ ನಡೆಯುತ್ತಿತ್ತು.

ಅನ್ನಪೂರ್ಣೆ ಅದೇ ಊರಿನ ಶಂಕರ್ ನಾರಾಯಣ ಎಂಬುವವರನ್ನು ಮದುವೆಯಾದರು ಇಬ್ಬರು ಮಕ್ಕಳು ಜನಿಸಿದರು. ಈ ಅನ್ನಪೂರ್ಣೆಯ ಪಕ್ಕದ ಮನೆಯ ಅರಸು ಎಂಬುವವರಿಗೆ ಸೋತರೂ ಎರಡು ಸಾವಿರದ ಹತ್ತೊಂಬತ್ತರಲ್ಲಿ ಅರಸು ವಿಧಿವಶರಾಗಿದ್ದು. ಆ ಸಾವು ಅನುಮಾನಾಸ್ಪದವೇ ಆಗಿತ್ತು ಎಂದು ಸುದ್ದಿಗಳು ಕೇಳಿಬಂದಿತ್ತು. ಹಿಂದೂ ಮಕ್ಕಳ್ ಎಂಬ ಸಂಸ್ಥೆ ಇವರ ಬ್ರಷ್ಟಾಚಾರದ ಕುರಿತು ಜನರಲ್ಲಿ ಅರಿವನ್ನು ಮೂಡಿಸಲು ಪ್ರಯತ್ನಿಸಿತು. ಈಕೆಯ ಹಿಂದೆ ಯಾರಿಗೂ ತಿಳಿಯದ ನಿಗೂಢ ಸಂಗತಿಗಳಿವೆ ಯಾರು ಈಕೆಯ ಭಕ್ತರಾಗಬೇಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಷಯವನ್ನು ಹಾಕಿದರು ಕಷ್ಟದಲ್ಲಿರುವ ಜನ ಜೀವನ ಸಂಗ್ರಾಮದಲ್ಲಿ ಸೋತು ಅನ್ನಪೂರ್ಣೆಯಂತವರನ್ನು ಬಹು ಬೇಗ ನಂಬುತ್ತಾರೆ. ಅಂತವರ ಮುಗ್ಧತೆಯನ್ನು ಅನ್ನಪೂರ್ಣೆಯಂತವರು ತಮ್ಮ ಬಂಡವಾಳವನ್ನಾಗಿಸಿಕೊಳ್ಳುತ್ತಾರೆ. ಅವರು ಮೆರೆಯುತ್ತಾರೆ. ಸದ್ಯಕ್ಕೆ ಈ ದೇವಿ ನಾಪತ್ತೆ ಆಗಿದ್ದಾರೆ ಎನ್ನುವ ಸುದ್ದಿ ಇದೆ. ದೇವರು ಇದ್ದಾರೆ ಅಥವಾ ಇಲ್ಲ ಎಂದು ಹೇಳುವವರನ್ನು ನಂಬಬಹುದು ಆದರೆ ತಾನೇ ದೇವರು ಎಂದು ಹೇಳಿಕೊಳ್ಳುವವರು ತುಂಬಾ ಅಪಾಯಕಾರಿ. ಇಂತ ಹಿನ್ನೆಲೆ ಇರುವವರನ್ನು ನಾವು ದೇವರು ಎಂದು ಭಾವಿಸಿ ಪೂಜೆ ಮಾಡುವುದು ಸರಿಯಲ್ಲ. ಇದಿಷ್ಟು ಅನ್ನಪೂರ್ಣೆ ದೇವಿಯ ಕುರಿತಾಗಿ ನಾವು ನಿಮಗೆ ತಿಳಿಸುತ್ತಿರುವ ಮಾಹಿತಿಯಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!